Indian Railway: ರೈಲಿನಲ್ಲಿ ಪಟಾಕಿ ಸಾಗಿಸಿದ್ರೆ ಎಷ್ಟು ವರ್ಷ ಜೈಲು ಗೊತ್ತಾ?
Indian Railway: ಇದೀಗ ದೇಶಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಇನ್ನು ಜನರು ಪಟಾಕಿಗಳನ್ನು ಹೊಡೆಯುವ ಹುಮ್ಮಸ್ಸಿನಲ್ಲಿರುತ್ತಾರೆ. ಆದ್ದರಿಂದ ಈ ವೇಳೆ ಕಡಿಮೆ ದರ ಹಿನ್ನೆಲೆ ಪಟಾಕಿಗಳನ್ನು ನಗರ ಪ್ರದೇಶಗಳಿಂದ ತಮ್ಮ ಊರಿಗೆ ತೆಗೆದುಕೊಂಡು ಹೋಗುವವರು ಹೆಚ್ಚಿನ ಪ್ರಮಾಣದಲ್ಲಿರುತ್ತಾರೆ. ಆದ್ದರಿಂದ ರೈಲ್ವೆ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದೆ.
ಇನ್ನು ಸಾಮಾನ್ಯವಾಗಿ ಬಸ್‌ಗಳಿಗಿಂತ ರೈಲಿನಲ್ಲೇ ಹೆಚ್ಚು ಮಂದಿ ಪ್ರಯಾಣ ಬೆಳೆಸುಯತ್ತಾರೆ. ಕಡಿಮೆ ವೆಚ್ಚ, ಸುರಕ್ಷತೆ, ವಿಶ್ರಾಂತಿ ಕೊಠಡಿಗಳು ಮತ್ತು ಪ್ರಯಾಣದ ಸಮಯದಲ್ಲಿ ಮಲಗುವ ಸಾಮರ್ಥ್ಯ ಹಿನ್ನೆಲೆ ಬಹುತೇಕ ಮಂದಿ ರೈಲು ಪ್ರಯಾಣವನ್ನೇ ಆಯ್ಕೆ ಮಾಡುತ್ತಾರೆ. ಇನ್ನು ಇದೀಗ ದೀಪಾವಳಿ ಸಮಯ ಆದ್ದರಿಂದ ರೈಲ್ವೆ ಅಧಿಕಾರಿಗಳು ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.

ರೈಲ್ವೆ ರಕ್ಷಣಾ ಪಡೆ ಅಧಿಕಾರಿಗಳು ಗಸ್ತು ತಿರುಗುತ್ತಾರೆ, ಅನುಮಾನಾಸ್ಪದ ವ್ಯಕ್ತಿಗಳನ್ನು ಪ್ರಶ್ನಿಸುತ್ತಾರೆ ಮತ್ತು ಅಗತ್ಯ ಇದ್ದರೆ ಅವರನ್ನು ಕರೆದೊಯ್ದು ತನಿಖೆ ನಡೆಸುತ್ತಾರೆ. ಇನ್ನು ರೈಲಿನಲ್ಲಿ ಮದ್ಯಪಾನ ಮತ್ತು ಧೂಮಪಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ, ಒಲೆಗಳು, ಗ್ಯಾಸ್ ಸಿಲಿಂಡರ್, ಸುಡುವ ರಾಸಾಯನಿಕಗಳು, ಆಮ್ಲಗಳು ಮತ್ತು ದುರ್ವಾಸನೆ ಬೀರುವ ವಸ್ತುಗಳನ್ನು ಕೂಡ ನಿಷೇಧಿಸಲಾಗಿದೆ.
ಪಟಾಕಿ ಹೊಯ್ಯುವವರ ಗಮನಕ್ಕೆ: ಭಾರತೀಯ ರೈಲ್ವೇ ಪಟಾಕಿ ಸೇರಿದಂತೆ ಸುಡುವ ವಸ್ತುಗಳನ್ನು ರೈಲಿನಲ್ಲಿ ಸಾಗಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಒಂದು ವೇಳೆ ನಿಯಮ ಮೀರಿ ಯಾರಾದ್ರೂ ಪಟಾಕಿಗಳನ್ನು ತೆಗೆದುಕೊಂಡು ಹೋದ್ರೆ, 3 ವರ್ಷ ಜೈಲು ಶಿಕ್ಷೆ ಅಥವಾ 5,000 ರೂಪಾಯಿ ದಂಡ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶವನ್ನು ನೀಡಿದೆ.
ಪಟಾಕಿ ಸೇರಿದಂತೆ ಸ್ಫೋಟಕಗಳು ಮತ್ತು ಇಂಧನಗಳ ಸಾಗಣೆಯನ್ನು ರೈಲುಗಳಲ್ಲಿ ಹಿಂದಿನಿಂದಲೂ ನಿಷೇಧಿಸಲಾಗಿದೆ. ಹೆಚ್ಚಿನವರು ತಿಳಿದಿರುವಾಗ, ಕೆಲವರು ಈ ನಿಯಮಗಳನ್ನು ಉಲ್ಲಂಘಣೆ ಮಾಡುತ್ತಾರೆ. ಇದರಿಂದ ತಮ್ಮನ್ನು ಮತ್ತು ಇತರರನ್ನು ಅಪಾಯಕ್ಕೆ ಸಿಲುಕಿಸುತ್ತಾರೆ. ಆದ್ದರಿಂದ ಮೊದಲ ಅಪರಾಧಕ್ಕೆ 1,000 ರೂಪಾಯಿ ದಂಡ ಅಥವಾ 6 ತಿಂಗಳ ಜೈಲು ಶಿಕ್ಷೆ. ಮತ್ತೆ ಮತ್ತೆ ಇದೇ ಮುಂದುವರೆದರೆ, 3 ವರ್ಷಗಳ ಶಿಕ್ಷೆ ಅಥವಾ 5,000 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದೆ.












Click it and Unblock the Notifications