ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದ್ಯರು, ಸಂಶೋಧಕರನ್ನು ಮೀರಿಸುತ್ತದೆ ರಾಜಕಾರಣಿಗಳ ಕೊವಿಡ್ ಲಸಿಕೆ!

|
Google Oneindia Kannada News

ದೆಹಲಿ, ಜುಲೈ 24: ಕೊರೊನಾ ವೈರಸ್‌ಗೆ ಲಸಿಕೆ ಕಂಡು ಹಿಡಿಯುವುದಕ್ಕಾಗಿ ಇಡೀ ಜಗತ್ತೆ ಕಷ್ಟಪಡುತ್ತಿದೆ. ವಿಶ್ವದ ಶ್ರೇಷ್ಠ ವೈದ್ಯರು ಕೊವಿಡ್ ಗೆ ಔಷಧಿ ಪತ್ತೆ ಹಚ್ಚುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅನೇಕರು ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತೆ ಔಷಧಗಳನ್ನು ತಯಾರಿಸುತ್ತಿದ್ದಾರೆ.

Recommended Video

America ಜೊತೆ ಸೇಡು ತೀರಿಸಿಕೊಂಡ China | Oneindia Kannada

ಇಂತವರ ಮಧ್ಯೆ ಕೆಲವು ರಾಜಕಾರಣಿಗಳು ಕೊರೊನಾಗೆ ವೈರಸ್‌ಗೆ ಔಷಧಿ ಕಂಡು ಹಿಡಿಯುತ್ತಿದ್ದಾರೆ. ವೈದ್ಯರಲ್ಲ, ವಿಜ್ಞಾನಿಗಳಲ್ಲ, ತಜ್ಞರೂ ಅಲ್ಲ ಆದರೂ ರಾಜಕಾರಣಿಗಳು ಕೊವಿಡ್‌ಗೆ ಪರಿಹಾರ ಸೂಚಿಸುತ್ತಿದ್ದಾರೆ. ಇಷ್ಟೆಲ್ಲ ಹೇಳುವುದಕ್ಕೆ ಕಾರಣ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರ ಬಾಬ್‌ಜಿ ಪಾಪಡ್.

ತಿರುವನಂತಪುರಂನಲ್ಲಿ ಏಳು ಜನ ಕೌನ್ಸಿಲರ್‌ಗೆ ಕೊರೊನಾ ಪಾಸಿಟಿವ್ತಿರುವನಂತಪುರಂನಲ್ಲಿ ಏಳು ಜನ ಕೌನ್ಸಿಲರ್‌ಗೆ ಕೊರೊನಾ ಪಾಸಿಟಿವ್

ಮೇಘವಾಲ್ ಅವರು ಸೂಚಿಸಿರುವ ವಿಭಿನ್ನವಾದ ಹಪ್ಪಳ ಸೇವಿಸುವುದರಿಂದ ಕೊರೊನಾ ವೈರಸ್ ತಡೆಯಬಹುದು ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೇಘವಾಲ್ ಅವರಂತೆ ಮತ್ತೆ ಯಾವೆಲ್ಲ ರಾಜಕಾರಣಿಗಳು ಕೊರೊನಾ ಹೋಗಲಾಡಿಸಿಲು ಸಲಹೆ ನೀಡಿದರು ಎಂಬ ಪಟ್ಟಿ ಇಲ್ಲಿದೆ. ಮುಂದೆ ಓದಿ....

'ಬಾಬ್‌ಜಿ ಪಾಪಡ್' ಹೊಸ ಲಸಿಕೆ!

ಆತ್ಮ ನಿರ್ಭರ ಭಾರತ್ ಅಭಿಯಾನದಡಿ ಬಾಬ್‌ಜಿ ಪಾಪಡ್ ಎಂಬ ಸ್ವದೇಶಿ ಹಪ್ಪಳವನ್ನು ತಯಾರಿಸಲಾಗುತ್ತಿದೆ. ಇದು ಕೊವಿಡ್ ವಿರುದ್ದ ಹೋರಾಡುತ್ತದೆ ಎಂದು ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮೇಘವಾಲ್ ಪ್ರಚಾರ ಮಾಡುತ್ತಿದ್ದಾರೆ. ಈ ಕುರಿತು ವಿಡಿಯೋ ಸಹ ಮಾಡಿದ್ದಾರೆ. ಮೇಘವಾಲ್ ಅವರ ಬಾಬ್‌ಜಿ ಪಾಪಡ್ ವಿಡಿಯೋ ಈಗ ಟ್ರೋಲ್‌ಗೆ ಒಳಗಾಗಿದೆ.

'ಗೊ ಕೊರೊನಾ....ಗೊ ಕೊರೊನಾ

ಜಗತ್ತಿಗೆ ಸಾಂಕ್ರಾಮಿಕ ರೋಗವಾಗಿರುವ ಕೊರೊನಾ ವೈರಸ್ ವಿರುದ್ಧ ಕೇಂದ್ರ ಸಚಿವ ರಾಮದಾಸ್ ಅಥಾವಾಲೆ ಪ್ರತಿಭಟನೆ ಮಾಡಿದ್ದರು. ಕೇಂದ್ರ ಸಚಿವ ರಾಮದಾಸ್ ಅಥಾವಾಲೆ ಮತ್ತು ಕೆಲವು ಬೆಂಗಲಿಗರ ಜೊತೆ 'ಗೊ ಕೊರೊನಾ....ಗೊ ಕೊರೊನಾ....' ಎಂದು ಪ್ರತಿಭಟನೆ ಮಾಡಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಪ್ರತಿಭಟನೆ ಮಾಡಿದರೆ ಕೊರೊನಾ ಹೋಗುತ್ತಾ? ಎಂದು ಅಪಹಾಸ್ಯಕ್ಕೆ ಗುರಿಯಾಗಿದ್ದರು.

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ 'ಕೋವ್ಯಾಕ್ಸಿನ್' ಲಸಿಕೆಯ ಮೊದಲ ಪ್ರಯೋಗದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ 'ಕೋವ್ಯಾಕ್ಸಿನ್' ಲಸಿಕೆಯ ಮೊದಲ ಪ್ರಯೋಗ

ಸೂರ್ಯನ ಶಾಖ ಕೊರೊನಾ ಕೊಲ್ಲುತ್ತದೆ

'ಜನರು ಕನಿಷ್ಠ 15 ನಿಮಿಷ ಬಿಸಿಲಿನಲ್ಲಿ ನಿಲ್ಲಬೇಕು. ಸೂರ್ಯನ ಬೆಳಕು ವಿಟಮಿನ್ ಡಿ ಒದಗಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೊರೊನಾ ವೈರಸ್‌ ಸಹ ಕೊಲ್ಲುತ್ತದೆ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಹೇಳಿದ್ದರು. ಈ ಹೇಳಿಕೆ ಸಹ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಗೆ ಗುರಿಯಾಗಿತ್ತು.

ಗೋಮೂತ್ರ ಸೇವಿಸಿ

ಗೋಮೂತ್ರ ಸೇವಿಸಿ

ಅಸ್ಸಾಂ ಬಿಜೆಪಿ ಶಾಸಸಿ ಸುಮನ್ ಹರಿಪ್ರಿಯಾ ಅವರು ಗೋಮೂತ್ರ ಸೇವಿಸಿ ಮತ್ತು ಸಗಣಿ ತಿಂದರೆ ಕೊರೊನಾ ವೈರಸ್ ಮಾಯವಾಗುತ್ತೆ ಎಂದಿದ್ದರು. ಕೊವಿಡ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಈ ಔಷಧ ಉಪಯುಕ್ತ ಎಂದು ಹೇಳಿದ್ದರು. ಸುಮನ್ ಅವರ ಹೇಳಿಕೆ ಭಾರಿ ಚರ್ಚೆಗೆ ಒಳಪಟ್ಟಿತ್ತು.

ಓಲ್ಡ್ ಮಾಂಕ್ ರಮ್ ತಗೊಳಿ

ಇನ್ನು ಮಂಗಳೂರು ಕಾಂಗ್ರೆಸ್ ಕೌನ್ಸಿಲರ್ ರವಿಚಂದ್ರ ಗಟ್ಟಿ 'ಓಲ್ಡ್ ಮಾಂಕ್ ರಮ್ ಮತ್ತು ಎಗ್ ಫ್ರೈ ಮಾಡಿ ಸೇವಿಸಿದರೆ ಯಾವ ಕೊರೊನಾ ವೈರಸ್ ಬರಲ್ಲ' ಎಂದು ಹೇಳಿದ್ದರು. ಈ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಖಂಡನೆ ವ್ಯಕ್ತವಾಗಿತ್ತು.

English summary
BJP leader Arun Ram Meghwal (Union minister of state) claims "Bhabhiji Papad" will be helpful in fighting Coronavirus. here some other politicians who found vaccine for COVID 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X