Rain Alert: ಚಂಡಮಾರುತ ಪ್ರಸರಣ, ಈ ಭಾಗಗಳಲ್ಲಿ ಭಾರೀ ಮಳೆ! 'ರೆಡ್ ಅಲರ್ಟ್': ವಿಜ್ಞಾನಿ ಶಶಿಕಾಂತ್ ಮಿಶ್ರಾ
IMD Weather Forecast: ಪೂರ್ವ ಮುಂಗಾರು ಮಳೆ ಬೆನ್ನಲ್ಲೆ ದೇಶಾದ್ಯಂತ ಕೇವಲ ಎರಡು ವಾರಗಳಲ್ಲಿ ವಿಸ್ತರಿಸಿ ಮುಂಗಾರು ಮಳೆ ಅಬ್ಬರ ಶುರುವಿಟ್ಟುಕೊಂಡಿದೆ. ಈಗಾಗಲೇ ಪ್ರವಾಹ ಸೃಷ್ಟಿಯಾಗಿದ್ದ ಮೇಘಾಲಯ, ಮಣಿಪುರ, ಅಸ್ಸಾಂ ಸೇರಿದಂತೆ ಇತರ ರಾಜ್ಯಗಳಲ್ಲಿ ಮತ್ತೆ ಭಾರೀ ಮಳೆ ಮುಂದುವರಿಯಲಿದೆ. ಈ ಭಾಗದ ರಾಜ್ಯಗಳಿಗೆ (India Weather Report) 'ರೆಡ್ ಅಲರ್ಟ್' ಘೋಷಣೆ ಮಾಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಜೂನ್ 18ರಂದು ಮುನ್ಸೂಚನೆ ನೀಡಿದೆ.
ಐಎಂಸಿ ವಿಜ್ಞಾನಿ ಮತ್ತು ಹವಾಮಾನ ತಜ್ಞರ ಡಾ. ಶಶಿಕಾಂತ್ ಮಿಶ್ರಾ ಅವರು ಭಾರೀ ಮಳೆ ಎಲ್ಲೆಲ್ಲಿ ಆಗಲಿದೆ. ಏನೆಲ್ಲ ಎಚ್ಚರಿಕೆ ಕೊಡಲಾಗಿದೆ ಎಂಬುದನ್ನು ವಿವರಿಸಿದ್ದಾರೆ. ಹವಾಮಾನ ವೈಪರೀತ್ಯಗಳಿಂದಾಗಿ ಪಶ್ಚಿಮ ಬಂಗಾಲ, ಝಾರ್ಖಂಡ, ಒಡಿಶಾ, ಬಿಹಾರ, ಪೂರ್ವ ಉತ್ತರ ಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಭಾರೀ ಮಳೆ ಆಗಲಿದ್ದು 'ಆರೆಂಜ್ ಅಲರ್ಟ್' ನೀಡಲಾಗಿದೆ. ಮುಂದಿನ ಮೂರು ದಿನ ಇದೇ ವಾತಾವರಣ ಈ ರಾಜ್ಯಗಳಲ್ಲಿ ಮುಂದುವರಿಯಲಿದೆ ಎಂದಿದ್ದಾರೆ.

ಇದರೊಂದಿಗೆ ಮೇಘಾಲಯ, ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ, ಅರುಣಾಚಲ ಪ್ರದೇಶಗಳಲ್ಲಿ ಅತ್ಯಧಿಕ ಭಾರೀ ಆಗುತ್ತಿದೆ. ಹೀಗಾಗಿ ಜೂನ್ 18 ಹಾಗೂ 19ರಂದು ಒಟ್ಟು ಮುಂದಿನ ಎರಡು ದಿನಗಳ ಕಾಲ 'ರೆಡ್ ಅಲರ್ಟ್' ನೀಡಲಾಗಿದೆ. ಇಲ್ಲೆಲ್ಲ ಪ್ರವಾಹ ಪರಿಸ್ಥಿತಿಗಳು ಉಂಟಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ನದಿಗಳು ಉಕ್ಕಿಹರಿಯುತ್ತಿವೆ.
ಕರ್ನಾಟ ಸೇರಿ ಕರಾವಳಿ ರಾಜ್ಯಗಳಿಗೆ ಎಚ್ಚರಿಕೆ
ಇನ್ನೂ ಗುಜರಾತ್, ಗೋವಾ, ಕರ್ನಾಟಕ ಕರಾವಳಿ, ಉತ್ತರ ಪ್ರದೇಶ, ತಮಿಳುನಾಡು, ಕೇರಳ, ಗುಜರಾತ್ ಸೇರಿದಂತೆ ಇತರರ ಒಂದಷ್ಟು ರಾಜ್ಯಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುತ್ತಿದ್ದು, 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ. ಕರಾವಳಿ ಭಾಗದ ಈ ರಾಜ್ಯಗಳಲ್ಲಿ ಗಾಳಿಯ ವೇಗ ಹೆಚ್ಚಾಗುವ ಕಾರಣಕ್ಕೆ ಮೀನುಗಾರರಿಗೆ ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಒಟ್ಟಾರೆ ದೇಶದ ಬಹುತೇಕ ರಾಜ್ಯಗಳಲ್ಲಿ ಮುಂಗಾರು ಮಳೆ ಸಕ್ರಿಯವಾಗಿದ್ದು, ಈ ವಾರಪೂರ್ತಿ ವ್ಯಾಪಕ ಮಳೆಯ ದರ್ಶನವಾಗಲಿದೆ ಎಂದು ಅವರು ಮುನ್ಸೂಚನೆ ನೀಡಿದ್ದಾರೆ.
ಮೇ ಅಂತ್ಯದಲ್ಲಿ ಕರ್ನಾಟಕ, ಕೇರಳ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ವ್ಯಾಪಕ ಮಳೆ ಆಗಿತ್ತು. ಅದರ ಬೆನ್ನಲ್ಲೆ ಅವಧಿಗೂ ಮೊದಲೇ ಆಗಮಿಸಿ ಮುಂಗಾರು ಮಳೆ ಕರ್ನಾಟಕ ಮಾತ್ರವಲ್ಲದೇ ಇಡಿ ಭಾರತಾದ್ಯಂತ ವಾರದಲ್ಲಿ ವಿಸ್ತರಣೆ ಆಯಿತು. ಇದೀಗ ಎರಡನೇ ಭಾರಿಗೆ ಮುಂಗಾರು ಮಳೆ ತೀವ್ರ ರೂಪ ಪಡೆದುಕೊಂಡಿದೆ. ಪರಿಣಾಮ, ಅಸ್ಸಾಂ, ಮೇಘಾಲಯ, ಬಿಹಾರ, ಪಶ್ಚಿಮ ಬಂಗಾಳ, ಮಣಿಪುರ, ದೆಹಲಿ, ಉತ್ತರ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಆಗುತ್ತಿದೆ.












Click it and Unblock the Notifications