ಭಾರತೀಯರ ಸಾಲ ಹೆಚ್ಚಾಯ್ತು, ಉಳಿತಾಯ ಮಾತ್ರ ಬಿದ್ದೋಯ್ತು!

ಮುಂಬೈ: ಭಾರತೀಯರು ಉಳಿತಾಯಕ್ಕೆ ಹೆಸರಾಗಿದ್ದರು, ಅದರಲ್ಲೂ ಜಗತ್ತಿನ ವಿವಿಧ ದೇಶಗಳಲ್ಲಿ ಆರ್ಥಿಕ ಮುಗ್ಗಟ್ಟು ಎದುರಾದರೂ ಭಾರತಕ್ಕೆ ಮಾತ್ರ ಸಮಸ್ಯೆ ಆಗಿರಲೇ ಇಲ್ಲ. ಇದಕ್ಕೆಲ್ಲಾ ಭಾರತೀಯರ ಉಳಿತಾಯದ ಗುಣ ಕಾರಣವಾಗಿತ್ತು. ಆದರೆ ಇದೀಗ ಸ್ಫೋಟಕ ಸತ್ಯ ಬಯಲಾಗಿದ್ದು, ಭಾರತೀಯರ ಉಳಿತಾಯ ಕುಸಿತ ಕಾಣುತ್ತಿದೆಯಂತೆ.

ಹೌದು, 2021-22ಕ್ಕೆ ಹೋಲಿಕೆ ಮಾಡಿದ್ರೆ 2022-23ನೇ ಹಣಕಾಸು ವರ್ಷದಲ್ಲಿ ಭಾರತದ ಕುಟುಂಬಗಳ ಉಳಿತಾಯ ಶೇಕಡಾ 55ರಷ್ಟು ಕುಸಿತ ಕಂಡಿದೆಯಂತೆ. ಇದರ ಜೊತೆಗೆ ಸಾಲದ ಪ್ರಮಾಣ 2 ಪಟ್ಟು ಏರಿಕೆ ಕಂಡು ₹15.6 ಲಕ್ಷ ಕೋಟಿಯಷ್ಟು ಆಗಿದೆ ಎಂದು ಎಸ್‌ಬಿಐ ಸಂಶೋಧನಾ ವರದಿ ಮಾಹಿತಿ ನೀಡಿದೆ. ಈ ಮೂಲಕ 2021-22ರಲ್ಲಿ ನಮ್ಮ ದೇಶದ ಕುಟುಂಬಗಳ ಉಳಿತಾಯದ ಪ್ರಮಾಣವು ಶೇ 11.5ರಷ್ಟು ಇತ್ತು. ಇದು 2022-23ರಲ್ಲಿ ಶೇ 5.1ಕ್ಕೆ ಇಳಿಕೆ ಕಂಡಿದ್ದು, 50 ವರ್ಷಗಳ ಕನಿಷ್ಠ ಮಟ್ಟವಾಗಿದೆ.

Indian Household Savings Dropped by 55% in Financial Year 2023: Says SBI Report

ಸಾಲದ ಹೊರೆ ಹೆಚ್ಚಾಗುತ್ತಿದೆ ಏಕೆ?

ಅಂದಹಾಗೆ 2019-20ರಲ್ಲಿ ಕುಟುಂಬಗಳ ಉಳಿತಾಯದ ಪ್ರಮಾಣವು ಶೇ 7.6ರಷ್ಟು ಇತ್ತು ಎನ್ನಲಾಗಿತ್ತು. ಇನ್ನು ಎಸ್‌ಬಿಐನ ಸಂಶೋಧನಾ ವರದಿಯಂತೆ ಕುಟುಂಬ ಉಳಿತಾಯದ ಪ್ರಮಾಣ ಕಡಿಮೆ ಆಗಿದೆ. ಭೌತಿಕ ಸ್ವರೂಪದ ಸ್ವತ್ತು ಅಂದರೆ ರಿಯಲ್‌ ಎಸ್ಟೇಟ್‌, ಚಿನ್ನ ಇತ್ಯಾದಿ ಖರೀದಿ ಹೆಚ್ಚಾಗುತ್ತಿದೆ. ಕುಟುಂಬ ಸಾಲದ ಮೊತ್ತವು ₹8.2 ಲಕ್ಷ ಕೋಟಿಯಷ್ಟು ಹೆಚ್ಚಾಗಿದ್ದು, ವಾಣಿಜ್ಯ ಬ್ಯಾಂಕ್‌ಗಳಿಂದ ಸುಮಾರು ₹7.1 ಲಕ್ಷ ಕೋಟಿ ಸಾಲ ಪಡೆದ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ.

ಕೊರೊನಾ ಬಳಿಕ ಸಾಲದ ಏರಿಳಿತ

ಇಡೀ ಜಗತ್ತು ಮಹಾಮಾರಿ ಕೊರೊನಾ ಏಟಿಗೆ ನಲುಗಿತ್ತು. ಇದೀಗ ಭಾರತದಲ್ಲಿ ಸಾಲ ಪ್ರಮಾಣ ಹೆಚ್ಚಾಗಲು ಇದೂ ಒಂದು ಕಾರಣ ಅಂತಾ ಹೇಳಲಾಗಿದೆ. ಈಗ ಎಸ್‌ಬಿಐ ಸಂಶೋಧನಾ ಘಟಕದ ಮುಖ್ಯ ಆರ್ಥಿಕ ಸಲಹೆಗಾರರಾದ ಸೌಮ್ಯ ಕಾಂತಿ ಘೋಷ್‌ ಪ್ರಕಾರ ಕೋವಿಡ್‌ ನಂತರ ಕುಟುಂಬಗಳ ಸಾಲ ಪ್ರಮಾಣ ₹8.2 ಲಕ್ಷ ಕೋಟಿಯಷ್ಟು ಏರಿದೆ. 2 ವರ್ಷದಲ್ಲಿ ಕುಟುಂಬಗಳು ಪಡೆದ ಶೇ 55ರಷ್ಟು ರಿಟೇಲ್ ಸಾಲವನ್ನು ಮನೆ ಖರೀದಿಸಲು, ಶಿಕ್ಷಣ ವೆಚ್ಚ ಭರಿಸಲು ಮತ್ತು ವಾಹನ ಖರೀದಿಗೆ ಬಳಸಲಾಗಿದೆ ಎನ್ನಲಾಗಿದೆ.

ಬಡ್ಡಿ ದರ ಎಫೆಕ್ಟ್‌ನಿಂದ ಸಾಲ ಹೆಚ್ಚಳ?

ಹಾಗೆ ಮತ್ತೊಂದು ಕಡೆ ಬಡ್ಡಿದರ ಕಡಿಮೆ ಪ್ರಮಾಣದಲ್ಲಿ ಇರುವ ಹಿನ್ನೆಲೆ ಇಷ್ಟೊಂದು ಪ್ರಮಾಣದಲ್ಲಿ ರಿಟೇಲ್‌ ಸಾಲ ಹೆಚ್ಚಾಗಲು ಕಾರಣ ಎನ್ನಲಾಗಿದೆ. ಇನ್ನು ಇದೇ ಹಿನ್ನೆಲೆ ಕುಟುಂಬಗಳು ಉಳಿತಾಯದ ಬದಲಾಗಿ ಆಸ್ತಿ, ಮನೆ ಖರೀದಿಯಂತಹ ಭೌತಿಕ ಸ್ವರೂಪದ ಉಳಿತಾಯದ ಕಡೆಗೆ ಹೆಚ್ಚು ಆಸಕ್ತಿ ತೋರಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಆಸ್ತಿ ಖರೀದಿಸುವ ಕಡೆಗೆ ಜನರ ಗಮನ ಹೆಚ್ಚಾಗಿರುವುದರಿಂದ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಚೇತರಿಕೆ ಜೊತೆ ಆಸ್ತಿಗಳ ಬೆಲೆ ಕೂಡ ಹೆಚ್ಚಾಗಿದೆ.

Indian Household Savings Dropped by 55% in Financial Year 2023: Says SBI Report

ಆಧುನಿಕ ಕಾಲದಲ್ಲಿ ಭಾರತದ ಆರ್ಥಿಕತೆ ಕೂಡ ಬದಲಾಗುತ್ತಿದ್ದು, ಭಾರತೀಯರಲ್ಲಿನ ಉಳಿತಾಯದ ರೀತಿ ಕೂಡ ಬದಲಾಗುತ್ತಿದೆ. ಹಾಗೇ ಸಾಲದ ಪ್ರಮಾಣವು ಕೂಡ ಏರಿಕೆ ಕಾಣುತ್ತಿದೆ. ಈ ಮೂಲಕ ರಿಯಲ್ ಎಸ್ಟೇಟ್ ವಲಯದಲ್ಲಿ ಹೊಸ ಯುಗವು ಆರಂಭ ಆಗುವ ಮುನ್ಸೂಚನೆ ಸಿಕ್ಕಂತಾಗಿದೆ. ಏಕೆಂದರೆ ಕೊರೊನಾ ಬಳಿಕ ರಿಯಲ್ ಎಸ್ಟೇಟ್ ವಲಯ ನಲುಗಿ ಹೋಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+