ಕುಸಿದ ನಿರೀಕ್ಷೆ : ಪ್ರಸಕ್ತ ವರ್ಷ ಭಾರತದ ಆರ್ಥಿಕತೆ ಕುಗ್ಗಲಿದೆ

Posted By:
Subscribe to Oneindia Kannada

ನವದೆಹಲಿ, ಜನವರಿ 26 : ಪ್ರಸಕ್ತ ವರ್ಷ ಭಾರತದ ಆರ್ಥಿಕತೆ ಕೇವಲ ಶೇ.7.1ರಷ್ಟು ಮಾತ್ರ ಬೆಳೆಯಲಿದ್ದು, ಶೇ.7.6ರಷ್ಟು ವೃದ್ಧಿಯಾಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ.

ನಿರ್ಮಾಣ, ಗಣಿಗಾರಿಕೆ ಮತ್ತು ಉತ್ಪನ್ನ ಕ್ಷೇತ್ರದಲ್ಲಿನ ನಿಧಾನಗತಿಯ ಬೆಳವಣಿಗೆಯೇ ಭಾರತದ ಆರ್ಥಿಕ ಪ್ರಗತಿ ಕುಗ್ಗಲು ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ. ಇದು ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಅತೀ ಕಡಿಮೆಯದ್ದಾಗಿದೆ.

ಮುಖ್ಯ ಸಂಖ್ಯಾಶಾಸ್ತ್ರಜ್ಞ ಟಿಸಿಎ ಅನಂತ್ ಅವರ ಪ್ರಕಾರ, ಸರಕಾರದ ಅಪನಗದೀಕರಣದ ನೀತಿಯಿಂದಾಗಿ ಕೇಂದ್ರ ಸಂಖ್ಯಾಶಾಸ್ತ್ರ ಬಿಡುಗಡೆ ಮಾಡಿರುವ ಅಂಕಿಸಂಖ್ಯೆಗಳಲ್ಲಿ ಸಾಕಷ್ಟು ಏರುಪೇರು ಇದೆ. ಆದ್ದರಿಂದ ನವೆಂಬರ್ ಸಂಖ್ಯೆಗಳನ್ನು ಮಾತ್ರ ಪರಿಗಣಿಸಿ ಯಾವುದೇ ನಿರ್ಧಾರಕ್ಕೆ ಬರುವುದು ಹಿತವಲ್ಲ.

Indian GDP to fall to 3 year low of 7.1 percent

ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿರುವ ಶಕ್ತಿಕಾಂತ ದಾಸ್ ಅವರ ಹೇಳುವುದೇನೆಂದರೆ, ಇಡೀ ಜಗತ್ತಿನ ಆರ್ಥಿಕ ಸ್ಥಿತಿಗತಿಯೇ ನಿಧಾನವಾಗಿರುವಾಗ ಭಾರತವನ್ನು ಹೊರತುಪಡಿಸುವುದು ಸಾಧ್ಯವಿಲ್ಲ. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ ಭಾರತದ ಆರ್ಥಿಕತೆ ಸಾಕಷ್ಟು ಸದೃಢವಾಗಿದೆ.

ವಿತ್ತ ಸಚಿವ ಅರುಣ್ ಜೇಟ್ಲಿಯವರು ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿರುವ ಈ ಹೊತ್ತಿನಲ್ಲಿ ಆರ್ಥಿಕ ಪ್ರಗತಿಯ ಅಂಕಿಸಂಖ್ಯೆಗಳು ಬಿಡುಗಡೆಯಾಗಿರುವುದು ಭಾರೀ ಮಹತ್ವ ಪಡೆದಿವೆ.

ಫೆಬ್ರವರಿ ಕೊನೆಯ ಭಾಗದಲ್ಲಿ ಎರಡನೇ ಪರಿಷ್ಕೃತ ಅಂಕಿಸಂಖ್ಯೆಗಳು ಬಿಡುಗಡೆಯಾಗುವ ಸಾಧ್ಯತೆ ಇದ್ದು. ಹಣಕಾಸು ವರ್ಷ 2017-18ರಲ್ಲಿ ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಿಸಲಿದೆ ಎಂದು ಸಿಂಗಪುರದ ಬ್ಯಾಂಕಿಂಗ್ ಸಂಸ್ಥೆ ಡಿಬಿಎಸ್ ಶುಕ್ರವಾರ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The government on Friday predicted that the Indian economy will grow at 7.1% in 2016-17 lower than the 7.6% growth clocked in the previous fiscal. The slump is mainly due to slowdown in manufacturing, mining and construction sectors.
Please Wait while comments are loading...