Operation Sindoor: ಉಗ್ರರ ಸ್ವರ್ಗ ಪಾಕಿಸ್ತಾನಕ್ಕೆ ನರಕ ತೋರಿಸಿದ ಭಾರತ: ಏರ್‌ಸ್ಟ್ರೈಕ್ ಬಗ್ಗೆ ಸೇನಾಧಿಕಾರಿಗಳ ವಿವರಣೆ
ನವದೆಹಲಿ, ಮೇ 07: ಕಾಶ್ಮೀರದ ಪಹಲ್ಮಾಮ್‌ನಲ್ಲಿ ನಡೆದ ಪಾಕ್ ಉಗ್ರರ ದಾಳಿಗೆ ಭಾರತ ತಡರಾತ್ರಿ (ಮೇ 07) ಒಂಬತ್ತು ಕಡೆ ದಾಳಿ ಮಾಡುವ ಮೂಲಕ ಎದಿರೇಟು ನೀಡಿದೆ. ಇದಕ್ಕೆ 'ಸಿಂಧೂರ ಕಾರ್ಯಾಚರಣೆ' ಅಡಿ ಭಾರತವು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ದಾಳಿ ಮಾಡಿದೆ. ಕಾರ್ಯಾಚರಣೆ ಪೂರ್ಣಗೊಳ್ಳುತ್ತಿದ್ದಂತೆ ಭಾರತೀಯ ರಕ್ಷಣಾ ಇಲಾಖೆ ವತಿಯಿಂದ ಇಂದು ಬೆಳಗ್ಗೆ 10.25ಕ್ಕೆ ಮಹತ್ವದ ಸುದ್ದಿಗೋಷ್ಠಿ ನಡೆಯಿತು. 'ಸಿಂಧೂರ ಕಾರ್ಯಾಚರಣೆ' ಹೇಗೆ ಸಾಧ್ಯವಾಯಿತು. ಹೇಗೆಲ್ಲ ದಾಳಿ ಮಾಡಲಾಯಿತು ಎಂದೆಲ್ಲ ಪ್ರಮುಖ ಅಂಶಗಳನ್ನು ಮಿಲಿಟರಿ ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಗ್ರರನ್ನು ಹತ್ಯೆ ಮಾಡಿದ್ದೇವೆ ಎಂದು ಈಗಾಗಲೇ ಅಜಿತ್ ಧೋವೆಲ್ ಅವರು ಅಮೆರಿಕ, ಚೀನಾ, ರಷ್ಯಾ ಸೇರಿದಂತೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಗೆ ಮಾಹಿತಿ ನೀಡಿದ್ದಾರೆ. ದಾಳಿ ಪ್ರತಿಕಾರದ ಸಂದೇಶವನ್ನು ಸಾರಿದ್ದೇವೆ ಎಂದು ವಿಶ್ವದ ರಾಷ್ಟ್ರಗಳಿಗೆ ತಿಳಿಸಿದ್ದು. ಭಾರತದ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಈಗಾಗಲೇ ಪ್ರಧಾನಿ ನಿವಾಸದಲ್ಲಿ ಪ್ರಮುಖ ಚರ್ಚೆ ಶುರುವಾಗಿದೆ. ಮಹತ್ವದ ಸಭೆ ಸಹ ನಡೆದಿದೆ. ಸುದ್ದಿಗೋಷ್ಠಿಗೂ ಮೊದಲು. ರಕ್ಷಣಾ ಇಲಾಖೆ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದಾರೆ. ಸೇನಾ ಮುಖ್ಯಸ್ಥರ ಜೊತೆಗೂ ಪ್ರಧಾನಿ ಮೋದಿಯವರು ಚರ್ಚಿಸಿದ್ದಾರೆ. ಪಾಕಿಸ್ತಾನ ಮೇಲಿನ ಪ್ರತಿ ಹಂತದ ಕಾರ್ಯಾಚರಣೆಯ ಮಾಹಿತಿಯನ್ನು ಪ್ರಧಾನಿ ಮೋದಿ ಪಡೆದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರಲ್ಲಿ 26 ಮಂದಿಯನ್ನು ಪಾಕ್ ಉಗ್ರರು ದಾಳಿ ಹತ್ಯೆಗೈದಿದ್ದರು. ಉಗ್ರ ಸಂಘಟನೆಯ ಪಾತ್ರದಲ್ಲಿ ಇದರಲ್ಲಿ ಖಚಿತವಾಗಿತ್ತು. ಇದಕ್ಕೆ ಪ್ರತಿಕಾರವಾಗಿ ಸೂಕ್ತ ತಯಾರಿ ನಡೆಸಿ 'ಸಿಂಧೂರು ಕಾರ್ಯಾಚಣೆ' ಅಡಿಯಲ್ಲಿ ಪಾಕ್ ಉಗ್ರರ ಅಡಗು ತಾಣಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಭಾರತೀಯ ಸೈನೆ ಏರ್‌ಸ್ಟ್ರೈಕ್ ಮಾಡಿದೆ. ದಾಳಿಯಲ್ಲಿ ಮೃತಪಟ್ಟವರಿಗೆ ನ್ಯಾಯ ಸಿಗಬೇಕು ಎಂಬದು ಭಾರತದ ಉದ್ದೇಶ ಎಂದರು.
ಉಗ್ರರಿಗೆ ಸಹಾಯಕ್ಕೆ ನಿಂತವರಿಗೂ ತಕ್ಕ ಶಾಸ್ತಿ..
ಉಗ್ರರ ಪಹಲ್ಗಾಮ್ ದಾಳಿ ಸ್ಪಷ್ಟ ಮಾಹಿತಿ, ಗುಪ್ತಚರ ಖಚಿತ ಮಾಹಿತಿ, ಉಗ್ರರ ಗುರುತು ಪತ್ತೆ ಮಾಡಿ, ಸ್ಥಳೀಯ ಸಾಕ್ಷ್ಯಗಳ ಆಧಾರದಲ್ಲಿ ಇಂದು ಏರ್‌ಸ್ಟ್ರೈಕ್ ಮಾಡಲಾಗಿದೆ. ಉಗ್ರರಿಗೆ ಹಣ ಸಹಾಯ ಮಾಡುತ್ತಿದ್ದವರಿಗೆ, ಆಶ್ರಯ ನೀಡಿದವರಿಗೆ ತಕ್ಕ ಪಾಕ ಕಲಿಸಲಾಗಿದೆ. ಈ ನಿಟ್ಟಿನಲ್ಲೇ ಸಿಂಧೂರ ಕಾರ್ಯಾಚರಣೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಭಾರತದ ಮೇಲೂ ದಾಳಿ ಆಗುವ ಸಾಧ್ಯತೆ ಇದ್ದು, ಅದರ ವಿರುದ್ಧ ಎಲ್ಲ ಅಗತ್ಯ ಕ್ರಮ ಕೈಗೊಂಡಿದ್ದೇವೆ. 26/11 ಮುಂಬೈ ಉಗ್ರರ ದಾಳಿ ಬಳಿಕ ಪಹಲ್ಗಾಮ್‌ನಲ್ಲಿ ನಡೆದ ದಾಳಿ ಅತೀ ದೊಡ್ಡ ಉಗ್ರ ದಾಳಿ ಎಂದು ಅವರು ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರ ಉಗ್ರ ದಾಳಿಯನ್ನು ಗಂಭೀರವಾಗಿ ಪರಿಗಣಿಸಿತ್ತು.
ಇನ್ನೂ ಭಯೋತ್ಪಾದಕರಿಗೆ ಪಾಕಿಸ್ತಾನ ಸ್ವರ್ಗವಾಗಿದೆ. ಪಾಕ್‌ನಲ್ಲಿ ಉಗ್ರರ ಅಡಗುತಾಣ ತಡೆಯಲುವಲ್ಲಿ ಪಾಕಿಸ್ತಾನ ಸರ್ಕಾರ ವಿಫಲವಾಗಿದೆ. ವಿಶ್ವದ ವಿವಿಧ ನಿಷೇಧಿತ ಉಗ್ರ ಸಂಘಟನೆಗಳ ಉಗ್ರರು ಪಾಕಿಸ್ತಾನದಲ್ಲಿ ಇದ್ದಾರೆ ಎಂಬ ಖಚಿತ ಮಾಹಿತಿ ಇದೆ. ಅದರೆ ಇದನ್ನು ತಡೆಯುವ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ಯಾವ ಕ್ರಮ ಕೈಗೊಂಡಿಲ್ಲ. ಇದರ ಬದಲು ಅವರು ವಾದ ಮುಂದುವರೆಸಿದ್ದಾರೆ ಎಂದು ಅವರು ಹೇಳಿದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications