ಎಚ್ಚರಿಕೆ, ಚೀನಾ ಹ್ಯಾಕರ್‌ಗಳಿಂದ ನಿಮ್ಮ ವಾಟ್ಸ್‌ಆಪ್ ಖಾತೆ ರಕ್ಷಿಸಿಕೊಳ್ಳಿ
ಭಾರತೀಯರ ವಾಟ್ಸ್‌ಆಪ್ ಮೇಲೆ ಚೀನಾದ ಹ್ಯಾಕರ್‌ಗಳು ಕಣ್ಣು ಹಾಕಿದ್ದಾರಂತೆ, ನಮಗೇ ಗೊತ್ತಿಲ್ಲದೆ ನಮ್ಮ ವಾಟ್ಸ್‌ಆಪ್ ಖಾತೆ ಮೇಲೆ ದಾಳಿ ಮಾಡಿ ಮೊಬೈಲ್‌ನಲ್ಲಿನ ಎಲ್ಲ ಮಾಹಿತಿಯನ್ನೂ ಹೀರಿ ಶೇಖರಿಸಿಬಿಡುವ ಸಾಧ್ಯತೆ ಇದೆ. ಹೀಗೆಂದು ಎಚ್ಚರಿಕೆ ನೀಡಿರುವುದು ಸ್ವತಃ ಭಾರತೀಯ ಸೇನೆ.
ಹೌದು, ಭಾರತೀಯ ಸೇನೆಯ ಸಾರ್ವಜನಿಕ ಸಂಪರ್ಕ ಹೆಚ್ಚುವರಿ ಪ್ರಧಾನ ನಿರ್ದೇಶನಾಲಯದ (ಎಡಿಜಿಪಿಐ) ಯು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ವಾಟ್ಸ್‌ಆಪ್ ಮೇಲೆ ಚೀನಾದ ಹ್ಯಾಕರ್‌ಗಳು ಕಣ್ಣು ಹಾಕಿರುವ ಬಗ್ಗೆ ಎಚ್ಚರಿಕೆ ಸಂದೇಶ ಮತ್ತು ವಿಡಿಯೋ ಒಂದನ್ನು ಪ್ರಕಟಿಸಿದೆ.
ವಿಡಿಯೋದಲ್ಲಿ ಹ್ಯಾಕರ್‌ಗಳ ದಾಳಿಯಿಂದ ತಪ್ಪಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಬಗ್ಗೆಯೂ ತಿಳಿಸಲಾಗಿದೆ. ಸಾಮಾನ್ಯವಾಗಿ ವಾಟ್ಸ್‌ಆಪ್ ಗ್ರೂಪ್‌ಗಳ ಮೂಲಕ ನಮ್ಮ ವಾಟ್ಸ್‌ಆಪ್ ಖಾತೆ ಹ್ಯಾಕ್ ಮಾಡುವ ಸಾಧ್ಯತೆ ಇದೆಯಂತೆ. ಹಾಗಾಗಿ ತಾವು ಸದಸ್ಯರಾಗಿರುವ ವಾಟ್ಸ್‌ಆಪ್ ಗ್ರೂಪ್‌ನಲ್ಲಿ ಯಾವುದಾದರೂ ಚೀನಾದ ಕಂಟ್ರಿ ಕೋಡ್ +86 ನಿಂದ ಪ್ರಾರಂಭವಾಗಿರುವ ಸಂಖ್ಯೆ ಇದೆಯೇ ಚೆಕ್ ಮಾಡಿಕೊಳ್ಳಿ.

ಇಷ್ಟೆ ಅಲ್ಲ ಗ್ರೂಪ್‌ನಲ್ಲಿರುವ ಎಲ್ಲಾ ಸದಸ್ಯರು ತಮ್ಮ ಹೆಸರಿನಿಂದಲೇ ತಮ್ಮ ವಾಟ್ಸ್‌ಆಪ್ ಖಾತೆ ಬಳಸುತ್ತಿದ್ದಾರೆಯೇ ಅಥವಾ ಬೇರೆ ಹೆಸರಿನಿಂದ ಬಳಸುತ್ತಿದ್ದಾರೆಯೇ ಪರಿಶೀಲಿಸಿ. ಯಾರಾದರೂ ಫೇಕ್ ಹೆಸರು, ಅಥವಾ ಚೈನೀಸ್ ಹೆಸರು ಬಳಸಿದ್ದಲ್ಲಿ ಕೂಡಲೇ ಅಡ್ಮಿನ್‌ಗೆ ತಿಳಿಸಿ ಅವರನ್ನು ಗ್ರೂಪ್‌ನಿಂದ ಹೊರ ಹಾಕಲು ಹೇಳಿ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ನೀವು ಗ್ರೂಪ್‌ನಿಂದ ಎಕ್ಸಿಟ್ ಆಗುವಾಗ ಅಡ್ಮಿನ್ ಗಮನಕ್ಕೆ ತನ್ನಿ, ಮೊಬೈಲ್ ಬದಲಾಯಿಸುವಾಗಲೂ ಹಾಗೆಯೇ ಮಾಡಿ, ಹಾಗೂ ಯಾವುದೇ ಅಪರಿಚಿತ ವಾಟ್ಸ್‌ಗ್ರೂಪ್‌ಗೆ ಸೇರಿಕೊಳ್ಳಬೇಡಿ, ನಿರ್ದಿಷ್ಟ ಉದ್ದೇಶಕ್ಕಾಗಿ ರಚಿಸಲಾದ ಗ್ರೂಪ್‌ನಲ್ಲಿ ಮಾತ್ರ ಸದಸ್ಯರಾಗಿ.
सजग रहे,सतर्क रहें,सुरक्षित रहें।#भारतीयसेना सोशल मीडिया उचित एवं नियमबद्ध एकाउंट को प्रोत्साहित करता है। हैकिंग जोरो पर है, उनके लिए जो असावधान हैं। अपने सोशल मीडिया को हमेशा चेक करें। व्यक्तिगत एवं ग्रुप एकाउंट के बारे में सावधान रहें, सुरक्षित रहें। @DefenceMinIndia @PIB_India pic.twitter.com/YQbdVFsmWe
— ADG PI - INDIAN ARMY (@adgpi) March 18, 2018
ಇಷ್ಟೆಲ್ಲಾ ಸೂಚನೆಗಳನ್ನು ಭಾರತೀಯ ಸೇನೆಯು ನಿಡಿದ್ದು, ಆಧುನಿಕ ಯುಗದ ಭಯೋತ್ಪಾದನೆಯಾದ ಸೈಬರ್ ದಾಳಿಯ ಬಗ್ಗೆ ಜಾಗೃತರಾಗಿರಿ ಮತ್ತು ಸುರಕ್ಷಿತರಾಗಿರಿ ಎಂಬ ಸಂದೇಶ ನೀಡಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications