ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವದೇಶಿ ತಂತ್ರಜ್ಞಾನದ ಆರು ಧನುಷ್ ಫಿರಂಗಿ ಸೇನೆಗೆ ಸೇರ್ಪಡೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 09: ಬೋಪೋರ್ಸ್‌ ತಂತ್ರಜ್ಞಾನ ಆಧಾರಿತ ಸ್ವದೇಶಿಯವಾಗಿ ಅಭಿವೃದ್ಧಿಪಡಿಸಿರುವ ಆರು 'ಧನುಷ್' ದೇಸೀ ಫಿರಂಗಿ ಗನ್‌ಗಳನ್ನು ಇಂದು ಭಾರತೀಯ ಸೇನೆಗೆ ಸೇರ್ಪಡೆಗೊಳಿಸಲಾಯಿತು.

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಈ ಫಿರಂಗಿ ಗನ್‌ಗಳನ್ನು ತಯಾರಿಸಲಾಗಿದೆ. ಪ್ರಥಮ ಹಂತವಾಗಿ ಈ ಆರು ಫಿರಂಗಿ ಗನ್‌ಗಳನ್ನು ತಯಾರಿಸಲಾಗಿದ್ದು, ಒಟ್ಟು 114 ಫಿರಂಗಿಗಳನ್ನು ಜಬಲ್‌ಪುರ ಕಾರ್ಖಾನೆ ತಯಾರಿಸಲಿದೆ.

ಡಿಆರ್‌ಡಿಓ, ಶಸ್ತಾಸ್ತ್ರ ಕಾರ್ಖಾನೆ ಮಂಡಳಿ (ಒಎಫ್‌ಬಿ), ಬಿಇಎಲ್, ಗುಣಮಟ್ಟ ಖಾತರಿ ನಿರ್ದೇಶನಾಲಯ, ಭಾರತೀಯ ಉಕ್ಕು ಪ್ರಾಧಿಕಾರ ಇನ್ನೂ ಹಲವು ಸಂಸ್ಥೆಗಳು ಒಟ್ಟುಗೂಡಿ ಈ ಫಿರಂಗಿ ಗನ್‌ಗಳನ್ನು ತಯಾರಿಸಿವೆ.

Indian army receives six Dhanush desi artillery guns

ನಿಗದಿತ ಸಮಯಕ್ಕಿಂತಲೂ ಮೂರು ವರ್ಷ ತಡವಾಗಿ ಫಿರಂಗಿಗಳನ್ನು ಸೇನೆಗೆ ಹಸ್ತಾಂತರಿಸಲಾಗಿದೆ. ಪ್ರಯೋಗವು ಪೂರ್ಣ ಪ್ರಮಾಣದಲ್ಲಿ ಯಶಸ್ವಿ ಆಗದ ಕಾರಣ, ಸಮಸ್ಯೆಗಳನ್ನೆಲ್ಲಾ ಸರಿ ಪಡಿಸಿ ಹಸ್ತಾಂತರ ಮಾಡಿದ ಕಾರಣ ತಡವಾಗಿದೆ.

ಜಮ್ಮು-ಕಾಶ್ಮೀರ ಸೇನಾ ಶಿಬಿರದಲ್ಲಿ ನಿಗೂಢ ಸ್ಫೋಟಜಮ್ಮು-ಕಾಶ್ಮೀರ ಸೇನಾ ಶಿಬಿರದಲ್ಲಿ ನಿಗೂಢ ಸ್ಫೋಟ

ಪ್ರತಿ ಫಿರಂಗಿ ಗನ್‌ಗೆ 15 ಕೋಟಿಗೂ ಹೆಚ್ಚು ವ್ಯಯಿಸಲಾಗಿದ್ದು, ಇದು 38 ಕಿ.ಮೀ ದೂರದ ವರೆಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ಬೋಫೋರ್ಸ್‌ ಎಫ್‌ಎಚ್77 ತಂತ್ರಜ್ಞಾನ ಆಧಾರವಾಗಿದ್ದು, 13 ಟನ್ ತೂಕವನ್ನು ಇದು ಹೊಂದಿದೆ.

'ಮೋದಿ ಸೇನೆ' ಹೇಳಿಕೆ ಯೋಗಿ ಆದಿತ್ಯನಾಥಗೆ ಆಯೋಗ ನೊಟೀಸ್'ಮೋದಿ ಸೇನೆ' ಹೇಳಿಕೆ ಯೋಗಿ ಆದಿತ್ಯನಾಥಗೆ ಆಯೋಗ ನೊಟೀಸ್

ಹಗಲು ಮತ್ತು ರಾತ್ರಿ ಸಹ ದಾಳಿ ಮಾಡುವ ಸಾಮರ್ಥ್ಯ ಇದು ಹೊಂದಿದ್ದು, ಗುಡ್ಡಗಾಡು ಪ್ರದೇಶದಲ್ಲಿ ಸುಲಭವಾಗಿ ಕೊಂಡೊಯ್ಯುವಂತೆ ವಿನ್ಯಾಸ ಮಾಡಲಾಗಿದೆ, ಹಲವು ಹಂತಗಳನ್ನು ಆಟೊಮ್ಯಾಟಿಕ್ ಮಾಡಲಾಗಿದ್ದು, ಇದಕ್ಕೆ ಜಿಪಿಎಸ್ ಅಳವಡಿಸಲಾಗಿದೆ.

ಪಂಜಾಬಿನಲ್ಲಿ ಪಾಕಿಸ್ತಾನದ ಡ್ರೋನ್ ಧ್ವಂಸ, ಎಲ್ಲೆಲ್ಲೂ ಹೈ ಅಲರ್ಟ್ಪಂಜಾಬಿನಲ್ಲಿ ಪಾಕಿಸ್ತಾನದ ಡ್ರೋನ್ ಧ್ವಂಸ, ಎಲ್ಲೆಲ್ಲೂ ಹೈ ಅಲರ್ಟ್

English summary
Monday Indian Army received first batch of Dhanush artillery guns. These guns are desi howitzer based on the Bofors technology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X