Get Updates
Get notified of breaking news, exclusive insights, and must-see stories!

Operation Sindoor: ಭಾರತದ ದಾಳಿಯ ಭಯಾನಕತೆ ಬಿಟ್ಟಿಟ್ಟ ಸೇನೆ- ಮಾಧ್ಯಮಗೋಷ್ಠಿಯ ಮುಖ್ಯಾಂಶಗಳು

Indian Army Operation Sindoor: ಭಾರತೀಯ ಸೇನೆಯು ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ಕಾರ್ಯಾಚರಣೆಗೆ 'ಆಪರೇಷನ್ ಸಿಂಧೂರ' ಎಂದು ಹೆಸರಿಡಲಾಗಿದೆ. ಜಮ್ಮು-ಕಾಶ್ಮೀರದ ಪೆಹಲ್‌ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಈ ದಾಳಿಯನ್ನು ನಡೆಸಿದೆ. ಈ ಕುರಿತು ಪತ್ರಿಕಾಗೋಷ್ಠಿಯನ್ನು ನಡೆಸಿರುವ ಭಾರತೀಯ ಸೇನೆಯು ಪಾಕಿಸ್ತಾನವನ್ನು ಕಟುವಾಗಿ ಟೀಕಿಸಿದೆ. ಮಾದ್ಯಮಗೋಷ್ಠಿಯ ಮುಖ್ಯಾಂಶಗಳು ಇಲ್ಲಿವೆ.

1. ಕಾರ್ಯಾಚರಣೆಯ ಪ್ರಮುಖ ಅಂಶಗಳು

ಸಮಯ: ಮೇ 7ರಂದು ಬೆಳಗಿನ ಜಾವ 1:05 ರಿಂದ 1:30ರ ನಡುವೆ ದಾಳಿಗಳು ನಡೆದಿವೆ.
ನೆಲೆಗಳು: ಪಾಕಿಸ್ತಾನದ ಬಹಾವಲ್ಪುರ್ ಸೇರಿದಂತೆ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಜೈಷ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ಸಂಘಟನೆಗಳ ತರಬೇತಿ ಕೇಂದ್ರಗಳನ್ನು ನಾಶಪಡಿಸಲಾಗಿದೆ.
ಫಲಿತಾಂಶ: ಈ ಕಾರ್ಯಾಚರಣೆಯಲ್ಲಿ ಸುಮಾರು 70 ಭಯೋತ್ಪಾದಕರು ಹತ್ಯೆಯಾಗಿದ್ದಾರೆ.

Indian Army Press Conference on Operation Sindoor Key Highlights Revealed

2. ಕಾರ್ಯತಂತ್ರ

ನಿಖರ ದಾಳಿಗಳು: ಗುಪ್ತಚರ ಮಾಹಿತಿಯ ಆಧಾರದ ಮೇಲೆ ನೆಲೆಗಳನ್ನು ಆಯ್ಕೆ ಮಾಡಲಾಗಿದೆ. ನಾಗರಿಕ ಪ್ರಾಣಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗಿದೆ.
ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ: ಪಾಕಿಸ್ತಾನದ ಸೇನಾ ನೆಲೆಗಳನ್ನು ಗುರಿಯಾಗಿಸದೆ, ಕೇವಲ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿಗಳು ನಡೆಸಲಾಗಿದೆ.

3. ಕಾರ್ಯಾಚರಣೆಯ ಹೆಸರು ಮತ್ತು ಸಂಕೇತ

ಆಪರೇಷನ್ ಸಿಂಧೂರ: ಸಿಂಧೂರ ಎಂಬ ಹೆಸರು ಹಿಂದೂ ವಿವಾಹಿತ ಮಹಿಳೆಯರು ಹಣೆಗೆ ಹಚ್ಚಿಕೊಳ್ಳುವ ಕೆಂಪು ಕುಂಕುಮವನ್ನು ಸೂಚಿಸುತ್ತದೆ. ಪಹಲ್‌ಗಾವ್‌ ದಾಳಿಯಲ್ಲಿ ಪತಿಯನ್ನು ಕಳೆದುಕೊಂಡ ಮಹಿಳೆಯರ ನೋವನ್ನು ಪ್ರತಿಬಿಂಬಿಸಲು ಈ ಹೆಸರನ್ನು ಆಯ್ಕೆ ಮಾಡಲಾಗಿದೆ.

4. ಗುಪ್ತಚರ ಮಾಹಿತಿ

ದಾಳಿಕೋರರು: ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ 'ದಿ ರೆಸಿಸ್ಟೆನ್ಸ್ ಫ್ರಂಟ್' ಪಹಲ್‌ಗಾಮ್‌ ದಾಳಿಗೆ ಹೊಣೆ ಹೊತ್ತಿದೆ.
ಉದ್ದೇಶ: ಕಾಶ್ಮೀರದ ಪ್ರವಾಸೋದ್ಯಮವನ್ನು ಅಸ್ಥಿರಗೊಳಿಸುವುದು ಮತ್ತು ಎರಡು ಸಮುದಾಯಗಳ ನಡುವೆ ಅಶಾಂತಿ ಸೃಷ್ಟಿಸುವುದು ಈ ದಾಳಿಯ ಉದ್ದೇಶವಾಗಿತ್ತು.

Indian Army Press Conference on Operation Sindoor Key Highlights Revealed

5. ಸಂವಹನ

ಪತ್ರಿಕಾಗೋಷ್ಠಿ: ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ, ಕರ್ನಲ್ ಸೋಫಿಯಾ ಕುರೇಶಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮಾದ್ಯಮಗೋಷ್ಠಿಯನ್ನು ನಡೆಸಿದರು. ಮಹಿಳಾ ಅಧಿಕಾರಿಗಳು ಕಾರ್ಯಾಚರಣೆಯ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮಹತ್ವದ ಕ್ಷಣವಾಗಿದೆ.
ಸರ್ಕಾರದ ನಡೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಕಾರ್ಯಾಚರಣೆಯನ್ನು ಹತ್ತಿರದಿಂದ ಗಮನಿಸುತ್ತಿದ್ದಾರೆ. ಅಮೆರಿಕಾ, ಬ್ರಿಟನ್, ರಷ್ಯಾ ಮತ್ತು ಸೌದಿ ಅರೇಬಿಯಾ ಸೇರಿದಂತೆ ಪ್ರಮುಖ ರಾಷ್ಟ್ರಗಳಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.

6. ಪಾಕಿಸ್ತಾನದ ಪ್ರತಿಕ್ರಿಯೆ

ಪಾಕ್‌ ಹೇಳಿಕೆ: ನಾಗರಿಕರ ಪ್ರಾಣಕ್ಕೆ ಹಾನಿಯುಂಟಾಗಿದೆ. ನಾವು ಭಾರತದ ವಿಮಾನಗಳನ್ನು ಹೊಡೆದು ಉರಿಳಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಆದರೆ, ಈ ಹೇಳಿಕೆ ಎಷ್ಟರ ಮಟ್ಟಿಗೆ ನಿಜವೆಂಬುದನ್ನು ಕಾದುನೋಡಬೇಕಿದೆ.
ಪಾಕ್‌ ನಿಲುವು: ಭಾರತದ ಸೇನೆಯು ಮಾಡಿರುವ ದಾಳಿಗಳನ್ನು 'ಯುದ್ಧ ರೀತಿಯ ಕಾರ್ಯಚರಣೆ' ಎಂದು ಪಾಕ್‌ ಹೇಳಿದೆ. ಪ್ರತಿದಾಳಿ ಮಾಡುವುದಾಗಿಯೂ ಎಚ್ಚರಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+