ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಸೇನೆ ಬಂಧಿಸಿದ್ದ ಚೀನೀ ಸೈನಿಕನ ಹಸ್ತಾಂತರ

|
Google Oneindia Kannada News

ಲಡಾಖ್, ಅಕ್ಟೋಬರ್ 21: ವಾಸ್ತವ ಗಡಿ ನಿಯಂತ್ರಣ ರೇಖೆಯೊಳಗೆ (ಎಲ್‌ಎಸಿ) ನುಸುಳಿ ಬಂದು ಪೂರ್ವ ಲಡಾಖ್‌ನಲ್ಲಿ ಭಾರತೀಯ ಸೇನೆಯಿಂದ ಬಂಧನಕ್ಕೆ ಒಳಗಾಗಿದ್ದ ಚೀನಾದ ಸೈನಿಕನನ್ನು ಮರಳಿ ಚೀನಾಕ್ಕೆ ಒಪ್ಪಿಸಲಾಗಿದೆ.

ಸೋಮವಾರ ಬೆಳಿಗ್ಗೆ ಚುಮರ್-ಡೆಮ್ಚೊಕ್ ಪ್ರದೇಶದಲ್ಲಿ ಸೆರೆ ಸಿಕ್ಕಿದ್ದ ಚೀನಾದ ಸೈನಿಕ ಕಾರ್ಪೊರಲ್ ವಾಂಗ್ ಯಾ ಲಾಂಗ್‌ನನ್ನು ಮಂಗಳವಾರ ರಾತ್ರಿ ಚೀನಾದ ಪಿಎಲ್‌ಎ ಪಡೆಗಳಿಗೆ ಹಸ್ತಾಂತರಿಸಲಾಯಿತು.

ಲಡಾಖ್‌ನಲ್ಲಿ ಬಂಧಿಸಲಾಗಿರುವ ಚೀನಾ ಸೈನಿಕನ ಬಿಡುಗಡೆ ಸದ್ಯಕ್ಕಿಲ್ಲಲಡಾಖ್‌ನಲ್ಲಿ ಬಂಧಿಸಲಾಗಿರುವ ಚೀನಾ ಸೈನಿಕನ ಬಿಡುಗಡೆ ಸದ್ಯಕ್ಕಿಲ್ಲ

'ಕಳೆದ ರಾತ್ರಿ ಚುಶುಲ್ ಮೊಲ್ಡೋ ಸಭೆಯಲ್ಲಿ ಚೀನಾದ ಸೈನಿಕ ಕಾರ್ಪೊರಲ್ ವಾಂಗ್ ಯಾ ಲಾಂಗ್‌ನನ್ನು ಚೀನಾದ ಸೇನೆಗೆ ಭಾರತೀಯ ಸೇನೆಯು ಹಸ್ತಾಂತರ ಮಾಡಿದೆ' ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಹಸ್ತಾಂತರ ಪ್ರಕ್ರಿಯೆ ವೇಳೆ ತಮ್ಮ ಸೈನಿಕನನ್ನು ಗಡಿಯೊಳಗೆ ಬಿಟ್ಟುಕೊಳ್ಳುವ ಮುನ್ನ ಚೀನಾದ ಸೇನಾ ಪರಿಣತರು ಆತನನ್ನು ವಿಚಾರಣೆಗೆ ಒಳಪಡಿಸಿದರು ಎಂದು ಮೂಲಗಳು ತಿಳಿಸಿವೆ.

 Indian Army Handed Back The Chinese Soldier To PLA

ಶಿಷ್ಟಾಚಾರಗಳಿಗೆ ಅನುಗುಣವಾಗಿ ಎಲ್ಲ ಔಪಚಾರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕವಷ್ಟೇ ಚೀನಾ ಲಿಪರೇಷನ್ ಆರ್ಮಿಯ ಸೈನಿಕನನ್ನು ಮರಳಿ ಹಸ್ತಾಂತರ ಮಾಡಲಾಗುವುದು ಎಂದು ಭಾರತೀಯ ಸೇನೆ ತಿಳಿಸಿತ್ತು. ಚೀನೀ ಸೈನಿಕನಿಗೆ ಆಮ್ಲಜನಕ ಸೇರಿದಂತೆ ಎಲ್ಲ ಅಗತ್ಯ ವೈದ್ಯಕೀಯ ನೆರವು, ಆಹಾರ ಮತ್ತು ವಿಪರೀತ ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚನೆ ಉಡುಪುಗಳನ್ನು ನೀಡಲಾಗಿತ್ತು.

ಲಡಾಖ್‌ನಲ್ಲಿ ಚೀನಾ ಸೈನಿಕನ ಬಂಧನಲಡಾಖ್‌ನಲ್ಲಿ ಚೀನಾ ಸೈನಿಕನ ಬಂಧನ

ನಾಪತ್ತೆಯಾದ ತಮ್ಮ ಸೈನಿಕನ ಇರುವಿಕೆ ಬಗ್ಗೆ ಮಾಹಿತಿ ನೀಡುವಂತೆ ಚೀನಾ ಸೇನೆಯು ಭಾರತಕ್ಕೆ ಮನವಿ ಮಾಡಿತ್ತು. ಸ್ಥಳೀಯ ಜನರಿಂದ ತಪ್ಪಿಸಿಕೊಂಡ ಯಾಕ್‌ಅನ್ನು ಮರಳಿಸಲು ಸಹಾಯ ಮಾಡುತ್ತಿದ್ದಾಗ ಸೈನಿಕ ಕಣ್ಮರೆಯಾಗಿದ್ದ. ನಾಪತ್ತೆಯಾದ ಚೀನಾದ ಸೈನಿಕನನ್ನು ಭಾರತವು ಶೀಘ್ರದಲ್ಲಿಯೇ ಮರಳಿಸುವ ತನ್ನ ಭರವಸೆಯನ್ನು ಭಾರತ ಈಡೇರಿಸಲಿದೆ ಎಂದು ಆಶಿಸಿದ್ದೇವೆ ಎಂದು ಚೀನಾ ಹೇಳಿತ್ತು.

English summary
Indian Army has handed back the Chinese soldier to PLA on Tuesday night, who was captured in Eastern Ladakh after he strayed across the LAC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X