ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಭಾರತದ ಸೇನೆ ವೈರಿಗಳ ಸದೆ ಬಡಿಯಲು ಸಿದ್ಧ"

|
Google Oneindia Kannada News

ನವದೆಹಲಿ, ಜನವರಿ, 13: ವೈರಿಗಳಿಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಭಾರತದ ಸೇನೆ ಎಲ್ಲದಕ್ಕೂ ಸಿದ್ಧವಿದೆ ಎಂದು ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ. ಈ ಮೂಲಕ ಪಾಕ್ ಗೆ ಖಡಕ್ ಎಚ್ಚರಿಕೆ ರವಾನಿಸಲಾಗಿದೆ.

ಈ ಹಿಂದೆಯೂ ಪಾಕಿಸ್ತಾನ ಸೇನೆ ಹಲವಾರು ಬಾರಿ ಶಾಂತಿ ಮಾತುಕತೆಯ ಹಾದಿ ತಪ್ಪಿತ್ತು. ಪಠಾಣ್ ಕೋಟ್ ದಾಳಿಗೆ ಭಾರತ ಹೆದರಲ್ಲ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಹೇಳಿದ್ದಾರೆ.[ಭಾರತದ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಮಸೂದ್ ಸೆರೆ]

army

ಭಾರತದ ಗಡಿ ಒಳಗೆ ಉಗ್ರರು ಯಾವ ರೀತಿ ಪ್ರವೇಶ ಮಾಡಿದರು ಎಂಬುದನ್ನು ಇನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲದಾಗಿದೆ. ಆದರೆ ಸೇನೆ ಇನ್ನು ಮುಂದೆ ಇಂಥದ್ದಕ್ಕೆಲ್ಲ ತಕ್ಕ ಉತ್ತರ ನೀಡಲಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲು ಸೇನೆ ಸದಾ ಸನ್ನದ್ಧವಾಗಿರುತ್ತದೆ. ಎಲ್ಲ ಬಗೆಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು ಉಗ್ರರ ನುಸುಳಿವಿಕೆ ಕಂಡರೆ ಅವರ ಮೂಲ ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.[ಮೈಗೆ ಹೊಕ್ಕಿದ್ದು ಆರು ಬುಲೆಟ್, ನಿಮಗಿದೋ ಸೆಲ್ಯೂಟ್]

ಪ್ರಧಾನಿ ನರೇಂದ್ರ ಮೋದಿ ಸಹ ಉಗ್ರಗಾಮಿಗಳ ಕೃತ್ಯವನ್ನು ಗಂಭಿರವಾಗಿ ಖಂಡಿಸಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯನ್ನು ನೀಡಿದ್ದರು. ಮೋದಿ ಪಾಕ್ ಗೆ ಭೇಟಿ ನೀಡಿ ಹಿಂದಿರುಗಿದ ನಂತರ ಪಂಜಾಬ್ ನ ಪಠಾಣ್ ಕೋಟ್ ಪ್ರದೇಶಕ್ಕೆ ಒಳನುಸುಳಿದ್ದ ಉಗ್ರರು ಯೋಧರರನ್ನು ಹತ್ಯೆ ಮಾಡಿದ್ದರು. ಸೇನೆ ಸಹ ನಿರಂತರ ಕಾರ್ಯಾಚರಣೆ ನಡೆಸಿ ಉಗ್ರರ ಹುಟ್ಟು ಅಡಗಿಸಿತ್ತು.

English summary
After Defence Minister Manohar Parrikar said anyone who harms the country will be responded to in a similar manner in the wake of Pathankot attacks, Army chief has claimed Indian Army ready for any task given to it. Asked at the army's annual press conference ahead of Army Day on January 15 about Parrikar's comment, General Dalbir Singh said he cannot comment on what the minister said, but added: "The Indian Army is capable of doing everything. These are government decisions, whatever task the government gives us we are ready."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X