ನಾವು ಗಡಿ ಕಾಯುತ್ತಿದ್ದೇವೆ ನೀವು ಸಂತೋಷದಿಂದ ದೀಪಾವಳಿ ಆಚರಿಸಿ: ಹೆಮ್ಮೆಯ ಯೋಧರು!
ನವದೆಹಲಿ, ಅಕ್ಟೋಬರ್ 23: ಭಾರತ ದೇಶವು ಅನೇಕ ವಿಶೇಷತೆಗಳಿಂದ ಕೂಡಿರುತ್ತದೆ ಇದಕ್ಕೆ ಸಾಕ್ಷಿಯಾಗಿ ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿಯಲ್ಲಿ ಭಾರತೀಯ ಸೇನಾ ಸಿಬ್ಬಂದಿ ದೀಪಾವಳಿಯನ್ನು ಆಚರಿಸುತ್ತಿರುವಾಗ ದೇಶವಾಸಿಗಳಿಗೆ ಶುಭಾಶಯ ವಿಶೇಷವಾಗಿ ಕೋರಿದ್ದಾರೆ. ಇದರೊಂದಿಗೆ "ನೀವು ಗಾಬರಿ ಮತ್ತು ಆತಂಕ ಪಡುವ ಅಗತ್ಯವಿಲ್ಲ. ನಾವು ದೇಶದ ಗಡಿಯಲ್ಲಿ ನಿಂತಿದ್ದೇವೆ, ನೀವು ಸಂತೋಷದಿಂದ ದೀಪಾವಳಿ ಆಚರಿಸಿ" ಭಾರತೀಯರಿಗೆ ನಮ್ಮ ಹೆಮ್ಮೆಯ ಯೋಧರು ಶುಭಾಶಯಗಳನ್ನು ಕೋರಿದ್ದಾರೆ.
ತ್ಯಾಗ, ವೀರಮರಣ ಮತ್ತು ತಮ್ಮ ಕುಟುಂಭವನ್ನು ಬಿಟ್ಟು ದೂರದ ಜಮ್ಮುವಿನನಲ್ಲಿ ವೀರ ಯೋಧರು ದೇಶದ ರಕ್ಷಣೆಗಾಗಿ ಹಬ್ಬ-ಹರಿದಿನಗಳಲ್ಲಿ ಭಾಗಿಯಾಗದ ಕಾರಣ ಅವರಿಗೆ ದೇಶ ಸೇವೆಯೇ ಪ್ರಮುಖ ಆದ್ಯತೆಯಾಗಿರುತ್ತದೆ. ಯೋಧರ ಕುಟುಂಬಗಳ ಸಹ ತಮ್ಮ ವೀರ ಪುತ್ರ ಯಾರು ಮಾಡದ ದೇಶ ಸೇವೆಯಲ್ಲಿ ಭಾಗಿಯಾಗುತ್ತಾರೆ ಹೆಮ್ಮೆಪಟ್ಟು ದೀಪಾವಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಇಂತಹ ದೀಪಾವಳಿಯ ಸಂದರ್ಭದಲ್ಲಿ ಇಡೀ ದೇಶವೇ ಸಂಭ್ರಮಿಸಲು ಸಿದ್ಧವಾಗಿದೆ.
ಇದೇ ವೇಳೆ ಅಂತರಾಷ್ಟ್ರೀಯ ಗಡಿಯಲ್ಲಿ ದೇಶವನ್ನು ರಕ್ಷಿಸುವ ಭರದಲ್ಲಿ ನಮ್ಮ ಭಾರತೀಯ ಸೇನೆಯ ಸಿಬ್ಬಂದಿ ಮನೆ ಬಿಟ್ಟು ಹಬ್ಬ ಆಚರಿಸುತ್ತಿದ್ದಾರೆ. ಇದರೊಂದಿಗೆ ನಾವು ಗಡಿಯಲ್ಲಿ ನಿಂತಿದ್ದೇವೆ, ನೀವು ಸಂತೋಷದಿಂದ ದೀಪಾವಳಿ ಆಚರಿಸಿ ಎಂದು ದೇಶವಾಸಿಗಳಿಗೆ ಭರವಸೆ ನೀಡುತ್ತಿದ್ದೇವೆ. ಶನಿವಾರ ರಾತ್ರಿ ಎಲ್‌ಒಸಿ (ನಿಯಂತ್ರಣ ರೇಖೆ) ನಲ್ಲಿ ಪೋಸ್ಟ್ ಮಾಡಲಾದ ಭಾರತೀಯ ಸೇನೆಯ ಸಿಬ್ಬಂದಿಗಳು ದೀಪಾವಳಿಯನ್ನು ವೈಭವದಿಂದ ಆಚರಿಸಿದರು ಮತ್ತು ದೀಪಗಳನ್ನು ಬೆಳಗಿಸಿದರು ಮತ್ತು ಪಟಾಕಿಗಳನ್ನು ಸಿಡಿಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕರ್ನಲ್ ಇಕ್ಬಾಲ್ ಸಿಂಗ್, ''ದೇಶವಾಸಿಗಳಿಗೆ ಆತಂಕ ಬೇಡ ಎಂದು ಹೇಳಲು ಬಯಸುತ್ತೇನೆ ಮತ್ತು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು. ದೇಶವಾಸಿಗಳಿಗೆ ದೀಪಾವಳಿಯ ಶುಭಾಶಯಗಳನ್ನು ಕೋರುತ್ತೇನೆ ಮತ್ತು ನಮ್ಮ ಸೈನಿಕರಿಗೆ ಭರವಸೆ ನೀಡುತ್ತೇನೆ. ಗಡಿಯಲ್ಲಿ ಜಾಗರೂಕರಾಗಿರುತ್ತಾರೆ" ಎಂದರು.
ಪ್ರಧಾನಿ ಮೋದಿ ಯೋಧರೊಂದಿಗೆ ದೀಪಾವಳಿ?
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದರು. ಅದೇ ಸಮಯದಲ್ಲಿ ಅವರು ಪ್ರಧಾನಿಯಾದ ನಂತರ ಪ್ರತಿ ವರ್ಷ ದೇಶದ ವಿವಿಧ ಗಡಿಗಳಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದರು. ಅದಕ್ಕಾಗಿಯೇ ಈ ವರ್ಷವೂ ಪ್ರಧಾನಿ ಮೋದಿ ಭಾರತೀಯ ಸೇನೆಯ ಸೈನಿಕರೊಂದಿಗೆ ದೀಪಾವಳಿ ಆಚರಿಸಬಹುದು. ಮಾಧ್ಯಮ ವರದಿಗಳ ಪ್ರಕಾರ, ಭದ್ರತಾ ಕಾರಣಗಳಿಂದ ನಿಖರವಾದ ಸ್ಥಳವನ್ನು ಬಹಿರಂಗಪಡಿಸಲಾಗಿಲ್ಲ.

ಪ್ರಧಾನಿ ಮೋದಿ ಇಂದು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ
ದೀಪಾವಳಿಯ ಮುನ್ನಾದಿನದಂದು, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಲಿದ್ದು, ಅಲ್ಲಿ ಶ್ರೀರಾಮನನ್ನು ಆರಾಧಿಸಲಿದ್ದಾರೆ. ಇದಾದ ನಂತರ ಶ್ರೀರಾಮ ಜನ್ಮಭೂಮಿ ಯಾತ್ರಾಸ್ಥಳವನ್ನು ಪರಿಶೀಲಿಸಿ ನಂತರ ಶ್ರೀರಾಮನ ಪಟ್ಟಾಭಿಷೇಕವನ್ನೂ ಮಾಡಲಿದ್ದಾರೆ. ಸರಯು ನದಿಯ ಹೊಸ ಘಾಟ್‌ನಲ್ಲಿ ಪ್ರಧಾನಿ ಮೋದಿ ಆರತಿ ನೋಡಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದಿಂದ ತಿಳಿಸಲಾಗಿದೆ. ಇದಾದ ನಂತರ ಪ್ರಧಾನಿಯವರು ಭವ್ಯ ದೀಪೋತ್ಸವ ಆಚರಣೆಗೆ ಚಾಲನೆ ನೀಡಲಿದ್ದಾರೆ.












Click it and Unblock the Notifications