ಬಾಲಾಕೋಟ್ ವೈಮಾನಿಕ ದಾಳಿ ಹೀರೋ ಎನಿಸಿಕೊಂಡಿದ್ದ ಅಭಿನಂದನ್ ಈಗ ಗ್ರೂಪ್ ಕ್ಯಾಪ್ಟನ್
ನವದೆಹಲಿ, ನವೆಂಬರ್ 03: ಪಾಕಿಸ್ತಾನದ ಉಗ್ರರ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿದ ಹೀರೋ ಎನಿಸಿಕೊಂಡಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಗ್ರೂಪ್ ಕ್ಯಾಪ್ಟನ್ ಆಗಿ ಬಡ್ತಿ ನೀಡಲಾಗಿದೆ.
ವಿಂಗ್ ಕಮಾಂಡರ್ ಆಗಿದ್ದ ಅಭಿನಂದನ್ ಶೌರ್ಯ ಪ್ರಶಸ್ತಿಯನ್ನು ಕೂಡ ಪಡೆದಿದ್ದರು. ಅಭಿನಂದನ್ ಅವರು, ಎಫ್ 16 ಅನ್ನು ಹೊಡೆದುರುಳಿಸಿದ ಏಕೈಕ ಮಿಗ್ 21 ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2019ರ ಫೆಬ್ರವರಿಯಲ್ಲಿ ಪಾಕಿಸ್ತಾನದ ಉಗ್ರರ ಶಿಬಿರಗಳ ಮೇಲೆ ವಾಯು ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಅಭಿನಂದನ್ ಅವರಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಸಲಾಗಿತ್ತು.
ಅಭಿನಂದನ್ ಬಿಡುಗಡೆಯಾಗದಿದ್ದರೆ ಭಾರತ ದಾಳಿ ಮಾಡಲಿದೆ: ಗಡಗಡ ನಡುಗಿದ್ದ ಪಾಕ್ ಸೇನಾ ಮುಖ್ಯಸ್ಥ
ಬಂಧನದ ಬಳಿಕವೂ ಅಭಿನಂದನ್ ಅವರು ತಮ್ಮ ದೇಶದ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ, ಕೊನೆಗೆ ಭಾರತದ ಒತ್ತಡಕ್ಕೆ ಮಣಿದು ಪಾಕಿಸ್ತಾನ ಅಭಿನಂದನ್ ಅವರನ್ನು ಬಿಟ್ಟುಕಳುಹಿಸಿತ್ತು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಎಫ್ 16 ಅನ್ನು ಅಭಿನಂದನ್ ಹೊಡೆದುರುಳಿದ್ದರು. ಆದರೆ ಈ ಸಂದರ್ಭದಲ್ಲಿ ಶತ್ರುಪಡೆ ಅವರ ವಿಮಾನವನ್ನು ಹೊಡೆದುರುಳಿಸಿದ ಬಳಿಕ ಪಾಕಿಸ್ತಾನ ಸೇನೆ ಅಭಿನಂದನ್ ಅವರನ್ನು ಸೆರೆ ಹಿಡಿದಿತ್ತು.
ಪುಲ್ವಾಮಾ ದಾಳಿ ಬಳಿಕ ಪಾಕ್ ಆಕ್ರಮಿತ ಪ್ರದೇಶದ ಭಾಗದಲ್ಲಿದ್ದ ಬಾಲಕೋಟ್‌ನಲ್ಲಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಅಡಗುದಾಣಗಳ ಮೇಲೆ ಭಾರತ ವಾಯುದಾಳಿ ನಡೆಸಿತ್ತು. ಈ ದಾಳಿಯ ಬಳಿಕ ಉಭಯ ದೇಶಗಳ ನಡುವೆ ಪಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಫೆ.27ರಂದು ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ವಾಯುಗಡಿ ಉಲ್ಲಂಘಿಸಿತ್ತು.
ಈ ವೇಳೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್, ಮಿಗ್-21 ಯುದ್ಧ ವಿಮಾನದ ಮೂಲಕ ಹಿಮ್ಮೆಟ್ಟಿಸಿದರಲ್ಲದೆ, ಎಫ್-16 ಹೊಡೆದುರುಳಿಸಿ, ಹೊಸ ದಾಖಲೆಯನ್ನೇ ಸೃಷ್ಟಿಸಿದ್ದರು. ಈ ವೇಳೆ ಪಾಕ್ ದಾಳಿಗೆ ತುತ್ತಾದ ಅಭಿನಂದನ್ ಅವರ ಫೈಟರ್ ಜೆಟ್ ಪತನಗೊಂಡು ಪಾಕಿಸ್ತಾನ ಸೇನೆಗೆ ಸೆರೆ ಸಿಕ್ಕಿದ್ದರು. 60 ಗಂಟೆಗಳ ಕಾಲ ಪಾಕ್ ವಶದಲ್ಲಿದ್ದರು.
ಬಾಲಕೋಟ್ ವೈಮಾನಿಕ ದಾಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಭಾರತದ ಮೇಲೆ ಪ್ರತಿದಾಳಿ ನಡೆಸಿದಾಗ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಮಿಗ್ -21 ಬಳಸಿ ಪಾಕಿಸ್ತಾನದ ದಾಳಿಯನ್ನು ತಡೆದಿದ್ದಲ್ಲದೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿದ್ದರು ಆ ವೇಳೆ ಪಾಕ್ ನ ಎಫ್ -16 ವಿಮಾನವನ್ನುರುಳಿಸಿದ್ದ ಅಭಿನಂದನ್ ಅವರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇಳಿದು ಪಾಕ್ ಸೈನಿಕರಿಂದ ಬಂಧನಕ್ಕೊಳಗಾಗಿದ್ದರು.
ಆದರೆ ಭಾರತ ಮತ್ತು ಅಂತರರಾಷ್ಟ್ರೀಯ ಸಮುದಾಯದ ಒತ್ತಡದ ಪರಿಣಾಮ ಅಭಿನಂದನ್ ಅವರನ್ನು ಎರಡು ದಿನಗಳ ನಂತರ ಪಾಕ್ ಸುರಕ್ಷಿತವಾಗಿ ಬಿಡುಗಡೆಗೊಳಿಸಿತ್ತು.