ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕ ಉತ್ಪಾದನೆ: 1.2 ಮಿಲಿಯನ್ ಟನ್ ಹೆಚ್ಚುವರಿ ಸಕ್ಕರೆ ರಫ್ತಿಗೆ ಕೇಂದ್ರ ಅನುಮತಿ

|
Google Oneindia Kannada News

ನವದೆಹಲಿ, ಆಗಸ್ಟ್ 5: ಸಕ್ಕರೆಯು ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿದ್ದು, ಸೆಪ್ಟಂಬರ್ 30 ಕ್ಕೆ ಕೊನೆಗೊಂಡ ಮಾರುಕಟ್ಟೆ ವರ್ಷದಲ್ಲಿ ಭಾರತವು 1.2 ಮಿಲಿಯನ್ ಟನ್‌ಗಳಷ್ಟು ಸಕ್ಕರೆಯನ್ನು ಹೆಚ್ಚುವರಿ ರಫ್ತು ಮಾಡಲು ಅನುಮತಿ ನೀಡಿದೆ. ಮೇ ಅಂತ್ಯದಲ್ಲಿ, ದೇಶೀಯ ಲಭ್ಯತೆ ಮತ್ತು ಬೆಲೆ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಈ ಮಾರುಕಟ್ಟೆ ವರ್ಷದಲ್ಲಿ ಸರ್ಕಾರವು 10 ಮಿಲಿಯನ್ ಟನ್‌ಗಳಿಗೆ ಸಕ್ಕರೆ ರಫ್ತನ್ನು ನಿರ್ಬಂಧಿಸಿತ್ತು.

ಸರ್ಕಾರವು ಇನ್ನೂ 1.2 ಮಿಲಿಯನ್ ಟನ್ ಸಕ್ಕರೆ ರಫ್ತಿಗೆ ಅವಕಾಶ ನೀಡಲಿದೆ ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಉತ್ಪಾದನೆಯ ನಡುವೆ ಭಾರತವು ಸಕ್ಕರೆ ರಫ್ತು ಮಿತಿಯನ್ನು 1.2 ಮಿಲಿಯನ್ ಟನ್‌ಗಳಷ್ಟು ಹೆಚ್ಚಿಸಲಿದೆ

ಸಾವಯವ ಬೆಲ್ಲದ ಕಡೆಗೆ ಮುಖ ಮಾಡಿದ ಮಂಡ್ಯದ ಜನತೆ!ಸಾವಯವ ಬೆಲ್ಲದ ಕಡೆಗೆ ಮುಖ ಮಾಡಿದ ಮಂಡ್ಯದ ಜನತೆ!

ದೇಶೀಯ ಲಭ್ಯತೆ ಮತ್ತು ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಮಾರುಕಟ್ಟೆ ವರ್ಷದಲ್ಲಿ 10 ಮಿಲಿಯನ್ ಟನ್‌ಗಳಿಗೆ ಸಕ್ಕರೆ ರಫ್ತು ಮಾಡುವುದನ್ನು ಸರ್ಕಾರವು ಮೇ ತಿಂಗಳಲ್ಲಿ ನಿರ್ಬಂಧಿಸಿದೆ. ಅಂದಿನಿಂದ ರಫ್ತು ಮಿತಿಯನ್ನು ಹೆಚ್ಚಿಸಬೇಕೆಂದು ಸಕ್ಕರೆ ಉದ್ಯಮ ಒತ್ತಾಯ ಮಾಡುತ್ತಲೇ ಇದೆ.

India Will Allow 1.2 Million Tonnes Of Additional Sugar Export Due To High Production

ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ವರ್ಷದಲ್ಲಿ ಸಾರ್ವಕಾಲಿಕ ಗರಿಷ್ಠವಾದ 10 ಮಿಲಿಯನ್ ರಫ್ತು ಮಿತಿಯನ್ನು ಈಗಾಗಲೇ ಮುಗಿಸಿವೆ ಮತ್ತು ಸಾಗಣೆಗಳು 11.2 ಮಿಲಿಯನ್ ಟನ್‌ಗಳಿಗೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಆಹಾರ ಸಚಿವಾಲಯ ಆಗಸ್ಟ್ ತಿಂಗಳ ಆರಂಭದಲ್ಲಿ ತಿಳಿಸಿದೆ.

36 ಮಿಲಿಯನ್ ಟನ್ ಸಕ್ಕರೆ ಉತ್ಪಾದನೆ

2020-21 ರಲ್ಲಿ, ಸಕ್ಕರೆ ರಫ್ತು 7 ಮಿಲಿಯನ್ ಟನ್‌ಗಳಷ್ಟಿತ್ತು, ಹಿಂದಿನ ವರ್ಷದಲ್ಲಿ 5.96 ಮಿಲಿಯನ್ ಟನ್‌ಗಳಷ್ಟಿತ್ತು.ಇಂಡಸ್ಟ್ರಿ ಬಾಡಿ ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್ ​​(ISMA) ಅಂದಾಜಿನ ಪ್ರಕಾರ 2022-23 ಮಾರ್ಕೆಟಿಂಗ್ ವರ್ಷದಲ್ಲಿ ಭಾರತದ ಸಕ್ಕರೆ ಉತ್ಪಾದನೆಯು 35.5 ಮಿಲಿಯನ್ ಟನ್‌ಗಳಿಗೆ ಹೆಚ್ಚಾಗಬಹುದು ಎಂದು ಹೇಳಿದೆ, ಏಕೆಂದರೆ ಬೆಳೆಯನ್ನು ಎಥೆನಾಲ್ ಉತ್ಪಾದನೆಗೆ ಬಳಸಲಾಗುತ್ತದೆ. ಸೆಪ್ಟೆಂಬರ್‌ಗೆ ಕೊನೆಗೊಳ್ಳುವ ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ ಸಕ್ಕರೆ ಉತ್ಪಾದನೆಯು 36 ಮಿಲಿಯನ್ ಟನ್‌ಗಳು ಎಂದು ಅಂದಾಜಿಸಲಾಗಿದೆ.

India Will Allow 1.2 Million Tonnes Of Additional Sugar Export Due To High Production

ಎಥೆನಾಲ್ ಉತ್ಪಾದನೆಯನ್ನು ಪರಿಗಣಿಸುವ ಮೊದಲು, ನಿವ್ವಳ ಸಕ್ಕರೆ ಉತ್ಪಾದನೆಯು ಪ್ರಸ್ತುತ 2021-22 ಮಾರುಕಟ್ಟೆ ವರ್ಷದಲ್ಲಿ 39.4 ಮಿಲಿಯನ್ ಟನ್‌ಗಳಿತ್ತು, ಅದು 2022-23 ರಲ್ಲಿ 39.99 ಮಿಲಿಯನ್ ಟನ್‌ಗಳಿಗೆ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ.

Breaking: ಕಬ್ಬಿನ FRP ದರ ಹೆಚ್ಚಿಸಿದ ಕೇಂದ್ರ, ರೈತರ ಆಕ್ರೋಶBreaking: ಕಬ್ಬಿನ FRP ದರ ಹೆಚ್ಚಿಸಿದ ಕೇಂದ್ರ, ರೈತರ ಆಕ್ರೋಶ

ಕಬ್ಬಿನ ರಸ ಮತ್ತು ಬಿ-ಮೊಲಾಸಿಸ್‌ಗಳನ್ನು ಎಥೆನಾಲ್‌ ಉತ್ಪಾದನೆಗೆ ಬಳಸುವುದರಿಂದ ಮುಂದಿನ 2022-23 ಮಾರುಕಟ್ಟೆ ವರ್ಷದಲ್ಲಿ ಸುಮಾರು 4.5 ಮಿಲಿಯನ್ ಟನ್‌ಗಳಷ್ಟು ಸಕ್ಕರೆ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ ಎಂದು ಐಎಸ್‌ಎಂಎ ಅಂದಾಜಿಸಿದೆ.

ವಾರ್ಷಿಕ ದೇಶೀಯ ಬೇಡಿಕೆಯು 2022-23 ರಲ್ಲಿ ಸುಮಾರು 27.5 ಮಿಲಿಯನ್ ಟನ್‌ ಎಂದು ಹೇಳಲಾಗಿದ್ದು. 8 ಮಿಲಿಯನ್ ಹೆಚ್ಚುವರಿಯಾಗಿದ್ದು ರಫ್ತು ಮಾಡಲಾಗಿದೆ.

English summary
India will allow 1.2 million tonnes of additional sugar export in this marketing year ending Septembar 30 over the 10 million cap, due to avoid any price fall due to the production glut after surplus production. Food Secretary Sudhanshu Pandey in New Delhi said the government will further increase the sugar export cap by 1.2 million tonnes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X