INDIA vs NDA : ಯಾವ ಬಣಕ್ಕೂ ಸೇರದೆ ತಟಸ್ಥವಾಗಿ ಉಳಿದ ಪಕ್ಷಗಳಿವು
ಈ ವಾರ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆದವು, 2024ರ ಲೋಕಸಭಾ ಚುನಾವಣೆಗೆ ರಣಾಂಗಣ ಸಿದ್ಧವಾಗುತ್ತಿದ್ದು, ಆಡಳಿತಾರೂಢ ಎನ್‌ಡಿಎಯನ್ನು ಸೋಲಿಸಲು ವಿಪಕ್ಷಗಳು ಒಗ್ಗಟ್ಟಾಗಿವೆ. ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ಸಭೆಯಲ್ಲಿ 26 ಪಕ್ಷಗಳು ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದ್ದು, ತಮ್ಮ ಒಕ್ಕೂಟಕ್ಕೆ ಇಂಡಿಯಾ ( ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್) ಎಂದು ಹೆಸರಿಟ್ಟುಕೊಂಡಿವೆ.
ಇದಕ್ಕೆ ವಿರುದ್ಧವಾಗಿ ಬಿಜೆಪಿ ಕೂಡ ದೆಹಲಿಯಲ್ಲಿ ಎನ್‌ಡಿಎ ಒಕ್ಕೂಟ ಪಕ್ಷಗಳ ಸಭೆ ನಡೆಸಿದೆ. 38 ಪಕ್ಷಗಳು ಈ ಸಭೆಯಲ್ಲಿ ಭಾಗವಹಿಸಿವೆ. ಇದರೊಂದಿಗೆ ರಾಜಕೀಯ ರಂಗೇರಿದ್ದು, ಬಿಜೆಪಿಗೆ ಪೈಪೋಟಿ ನೀಡಲು ವಿಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸಿವೆ.

ಎರಡೂ ಬಣಗಳಲ್ಲಿ ದೇಶದ ಪ್ರಮುಖ 64 ಪಕ್ಷಗಳು ಇದ್ದರೆ ಇನ್ನೂ 13 ಪಕ್ಷಗಳು ಯಾವುದೇ ಬಣಕ್ಕೆ ಸೇರದೆ ತಟಸ್ಥವಾಗಿ ಉಳಿದುಕೊಂಡಿವೆ. ಅದರಲ್ಲೂ ದಕ್ಷಿಣ ಭಾರತದ ಪ್ರಮುಖ ಪ್ರಾದೇಶಿಕ ಪಕ್ಷಗಳು ಯಾವುದೇ ಬಣಕ್ಕೆ ಸೇರದೆ ತಟಸ್ಥವಾಗಿ ಉಳಿದುಕೊಂಡಿರುವುದು ಕುತೂಹಲ ಮೂಡಿಸಿದೆ.
ತಟಸ್ಥ ಪಕ್ಷಗಳ ಪಟ್ಟಿಯಲ್ಲಿ ಬಹುಜನ ಸಮಾಜ ಪಕ್ಷ, ಬಿಜು ಜನತಾ ದಳ, ಜನತಾ ದಳ (ಜಾತ್ಯತೀತ), ಅಕಾಲಿದಳ, ಭಾರತ್ ರಾಷ್ಟ್ರ ಸಮಿತಿ, ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ, ಭಾರತೀಯ ರಾಷ್ಟ್ರೀಯ ಲೋಕದಳ, ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್, ಅಖಿಲ ಭಾರತ ಸೇರಿವೆ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಪ್ರಮುಖವಾಗಿದೆ.
| ಎನ್‌ಡಿಎ ಮೈತ್ರಿಕೂಟದ ಪಕ್ಷಗಳು | ಇಂಡಿಯಾ ಮೈತ್ರಿಕೂಟದ ಪಕ್ಷಗಳು | ತಟಸ್ಥ ಪಕ್ಷಗಳು | |
| ಬಿಜೆಪಿ | ಕಾಂಗ್ರೆಸ್ | ಬಿಜೆಡಿ | |
| ಶಿವಸೇನೆ (ಶಿಂಧೆ) | ಟಿಎಂಸಿ | ಜೆಡಿಎಸ್ | |
| ಎನ್‌ಸಿಪಿ (ಅಜಿತ್ ಪವಾರ್) | ಡಿಎಂಕೆ | ಬಿಆರ್‌ಎಸ್ | |
| ಆರ್‌ಎಲ್‌ಎಸ್‌ಪಿ | ಆಮ್ ಆದ್ಮಿ ಪಾರ್ಟಿ | ವೈಎಸ್‌ಆರ್‌ಪಿ | |
| ಎಐಎಡಿಎಂಕೆ | ಜೆಡಿಯು | ಟಿಡಿಪಿ | |
| ಅಪ್ನಾದಳ (ಸೋನೆಯ್‌ಲಾಲ್) | ಆರ್‌ಜೆಡಿ | ಬಿಎಸ್‌ಪಿ | |
| ಎನ್‌ಪಿಪಿ | ಎನ್‌ಸಿಪಿ (ಶರದ್ ಪವಾರ್) | ಎಐಎಂಐಎಂ | |
| ಎನ್‌ಡಿಪಿಪಿ | ಜೆಎಂಎಂ | ಅಕಾಲಿದಳ (ಬಾದಲ್) | |
| ಎಜೆಎಸ್‌ಯು | ಶಿವಸೇನೆ (ಉದ್ಧವ್) | ಬಿಡಿಎಫ್ | |
| ಎಸ್‌ಕೆಎಂ | ಎಸ್‌ಪಿ | ಗೋವಾ ಫಾರ್ವರ್ಡ್ ಪಾರ್ಟಿ | |
| ಎಂಎನ್‌ಎಫ್ | ಆರ್‌ಎಲ್‌ಡಿ | ಜನತಾ ಕಾಂಗ್ರೆಸ್ (ಜೋಗಿ) | |
| ಐಪಿಎಫ್‌ಟಿ | ಅಪ್ನಾದಳ (ಕಾಮೇರವಾಡಿ) | ಡೆಮಾಕ್ರಟಿಕ್ ಪ್ರೊಗ್ರೆಸ್ಸೀವ್ ಆಜಾದ್ ಪಾರ್ಟಿ | |
| ಎನ್‌ಪಿಎಫ್ | ನ್ಯಾಷನಲ್ ಕಾನ್ಫರೆನ್ಸ್ | ಎಂಎನ್‌ಎಸ್ | |
| ಆರ್‌ಪಿಐ (ಅಠಾವಳೆ) | ಪಿಡಿಪಿ | ||
| ಎಜಿಪಿ | ಸಿಪಿಐ (ಎಂ) | ||
| ಪಿಎಂಕೆ | ಸಿಪಿಐ | ||
| ತಮಿಳ್ ಮಾನಿಲಾ ಕಾಂಗ್ರೆಸ್ | ಆರ್‌ಎಸ್‌ಪಿ | ||
| ಯುಪಿಪಿಎಲ್ | ಎಎಫ್‌ಬಿ | ||
| ಎಸ್‌ಬಿಎಸ್‌ಪಿ | ಎಂಡಿಎಂಕೆ | ||
| ಎಸ್‌ಎಡಿ (ಸಂಯುಕ್ತ) | ವಿಸಿಕೆ | ||
| ಎಂಜಿಪಿ | ಕೆಎಂಡಿಕೆ | ||
| ಜನನಾಯಕ ಜನತಾ ಪಕ್ಷ | ಎಂಎಂಕೆ | ||
| ಪ್ರಹಾರ್ ಜನಶಕ್ತಿ | ಐಯುಎಂಎಲ್ | ||
| ರಾಷ್ಟ್ರೀಯ ಸಮಾಜ ಪಕ್ಷ | ಕೇರಳ ಕಾಂಗ್ರೆಸ್ | ||
| ಜನ ಸುರಾಜ್ಯ ಶಕ್ತಿ | ಕೇರಳ ಕಾಂಗ್ರೆಸ್ (ಜೆ) | ||
| ಕುಕಿ ಪೀಪಲ್ಸ್ ಒಕ್ಕೂಟ | ಸಿಪಿಐ (ಎಂ) ಎಲ್ | ||
| ಯುಡಿಪಿ | |||
| ಎಚ್‌ಪಿಡಿಪಿ | |||
| ನಿಶಾದ್ ಪಕ್ಷ | |||
| ಆಲ್ ಇಂಡಿಯಾ ಎನ್‌ಆರ್ ಕಾಂಗ್ರೆಸ್ | |||
| ಹಿಂದೂಸ್ತಾನಿ ಅವಾಮ್ ಮೋರ್ಚಾ | |||
| ಜನಸೇನಾ | |||
| ಹರಿಯಾಣ ಲೋಕಹಿತ ಪಕ್ಷ | |||
| ಭಾರತೀಯ ಧರ್ಮ ಜನಸೇನಾ | |||
| ಕೇರಳ ಕಾಮರಾಜ್ ಕಾಂಗ್ರೆಸ್ | |||
| ಪುತಿಯಾ ತಮಿಳಗಂ | |||
| ಲೋಕಜನ ಶಕ್ತಿ (ಆರ್) | |||
| ಗೋರ್ಖಾ ನ್ಯಾಷನಲ್ ಲಿಬರೇಷನ್ ಫ್ರಂಟ್ |












Click it and Unblock the Notifications