ಭಾರತ ಜೈಲ್ ಟೂರಿಸಂನ ವಿಹಂಗಮ ನೋಟಗಳು

ಇಲ್ಲಿ ಪಟ್ಟಿ ಮಾಡಿರುವ ನಮ್ಮ ದೇಶದ ಘನಂದಾರಿ ರಾಜಕಾರಿಣಿಗಳು ಜೈಲು ಸೇರಿದ್ದು ಯಾವುದೇ ಸಾಮಾಜಿಕ ಸುಧಾರಣೆಯ ಕ್ರಾಂತಿಗಾಗಿ ಅಲ್ಲ, ಬದಲಾಗಿ ಅವರೇ ಮಾಡಿದ ಸ್ವಯಂಕೃತ ಅಪರಾಧಗಳಿಂದಾಗಿ.

ಸಾರ್ವಜನಿಕರ ಕೋಟಿ ಕೋಟಿ ತೆರಿಗೆ ಹಣವನ್ನು, ದೇಶದ ನೈಸರ್ಗಿಕ ಸಂಪತ್ತನ್ನು ಲೂಠಿ ಹೊಡೆದು ಇಲ್ಲವೇ ಲಂಚ ಅಥವಾ ಇನ್ನಿತರ ಮಾಡಬಾರದ ಕೆಲಸವನ್ನು ಮಾಡಿ ಜೈಲು ಶಿಕ್ಷೆ ಅನುಭವಿಸಿದ/ಅನುಭಸಿತ್ತಿರುವ ನಮ್ಮ ರಾಜಕಾರಿಣಿಗಳಲ್ಲಿ ಮಾಜಿ ಕೇಂದ್ರ ಸಚಿವರೂ ಇದ್ದಾರೆ, ಮಾಜಿ ಮುಖ್ಯಮಂತ್ರಿಗಳೂ, ಹಾಲಿ ಮಾಜಿ ಶಾಸಕರೂ ಇದ್ದಾರೆ.

ಅಂತರಾಷ್ಟೀಯ ಮಟ್ಟದಲ್ಲಿ ದೇಶವನ್ನು ತಲೆತಗ್ಗಿಸುವಂತೆ ಮಾಡಿದ ಹಲವು ಹಗರಣಗಳು ನಡೆಯುತ್ತಲೇ ಇದೆ. ವ್ಯವಸ್ಥಿತವಾಗಿ ಅದಕ್ಕೆ ಕಡಿವಾಣ ಹಾಕುವ ಕಾನೂನು ನಮ್ಮ ಸಂವಿಧಾನದಲ್ಲಿ ಬರದೇ ಇದ್ದಲ್ಲಿ ಇಂಥಹ ಹಗರಣಗಳಿಗೆ ಕೊನೆ ಅನ್ನುವುದೇ ಇರುವುದಿಲ್ಲ.

ವಿವಿಧ ಕಾರಣಗಳಿಂದ ಜೈಲು ಶಿಕ್ಷೆ ಅನುಭವಿಸಿದ/ ಅನುಭವಿಸುತ್ತಿರುವ ರಾಜಕಾರಣಿಗಳ ಹೆಸರನ್ನು ಪಟ್ಟಿ ಮಾಡಲು ಹೊರಟರೆ ಅದು ಬೆಳೆಯುತ್ತಲೇ ಇರುತ್ತದೆ. ಸಾರ್ವಜನಿಕ ಜೀವನದಲ್ಲಿರುವ ರಾಜಕಾರಣಿಗಳು ಜೈಲಿನ ಊಟದ ರುಚಿಯನ್ನು ಕಂಡಿದ್ದು ಯಾವುದೇ ಜನಪರ ಹೋರಾಟಕ್ಕಾಗಿ ಅಲ್ಲ.

ಜೈಲು ಶಿಕ್ಷೆ ಅನುಭವಿಸಿದ/ಅನುಭವಿಸುತ್ತಿರುವ ರಾಜ್ಯದ ಮತ್ತು ದೇಶದ ಪ್ರಮುಖ 20 ರಾಜಕಾರಿಣಿಗಳ ಪಟ್ಟಿ ಸ್ಲೈಡಿನಲ್ಲಿ...

ಲಾಲೂ ಪ್ರಸಾದ್ ಯಾದವ್

ಲಾಲೂ ಪ್ರಸಾದ್ ಯಾದವ್

900 ಕೋಟಿ ರೂಪಾಯಿಯ ಮೇವು ಹಗರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಬಿಹಾರದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ರೈಲ್ವೆ ಸಚಿವ ಮತ್ತು ಹಾಲಿ ಸಂಸದ ಲಾಲೂ ಪ್ರಸಾದ್ ಯಾದವ್ ಗೆ ಐದು ವರ್ಷಗಳ ಕಠಿಣ ಶಿಕ್ಷೆ ಮತ್ತು 25ಲಕ್ಷ ದಂಡ ವಿಧಿಸಿದೆ. ಲಾಲು ಇನ್ನು 11 ವರ್ಷ ಸಂಸತ್ತಿನತ್ತ ಸುಳಿದಾಡುವಂತೆಯೂ ಇಲ್ಲ. ಸಿಬಿಐ ಕೋರ್ಟ್ ಅಕ್ಟೋಬರ್ 3, 2013ರಂದು ಈ ಶಿಕ್ಷೆ ಪ್ರಕಟಿಸಿತ್ತು.

ಡಾ. ಜಗನ್ನಾಥ್ ಮಿಶ್ರಾ

ಡಾ. ಜಗನ್ನಾಥ್ ಮಿಶ್ರಾ

ಬಿಹಾರದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಜಗನ್ನಾಥ್ ಮಿಶ್ರಾ ಮೇವು ಹಗರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಅಕ್ಟೋಬರ್ ಮೂರರಂದು ನಾಲ್ಕು ವರ್ಷಗಳ ಕಠಿಣ ಶಿಕ್ಷೆ ಮತ್ತು ನಾಲ್ಕು ಲಕ್ಷ ದಂಡ ವಿಧಿಸಿತ್ತು. ಸಿಬಿಐ ಕೋರ್ಟ್ ಅಕ್ಟೋಬರ್ 3, 2013ರಂದು ಈ ಶಿಕ್ಷೆ ಪ್ರಕಟಿಸಿತ್ತು.

ಸುರೇಶ್ ಬಾಬು

ಸುರೇಶ್ ಬಾಬು

ಕಂಪ್ಲಿ ಶಾಸಕ ಟಿಎಚ್ ಸುರೇಶ್ ಬಾಬು ಅವರನ್ನು ಸಿಬಿಐ ತಂಡ ಗುರುವಾರ ಸೆ, 19 2013 ಸಂಜೆ ಬಂಧಿಸಿದ್ದರು. ಬೆಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಶ್ ಬಾಬು ಅವರು ಪ್ರಮುಖ ಆರೋಪಿಯಾಗಿದ್ದರು.

ನಾಗೇಂದ್ರ

ನಾಗೇಂದ್ರ

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ ಸಂಬಂಧ ಸಿಬಿಐ ಜತೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಕೂಡ್ಲಿಗಿಯ ಪಕ್ಷೇತರ ಶಾಸಕ ನಾಗೇಂದ್ರ ಕೊನೆಗೂ ಬಂಧನಕ್ಕೀಡಾಗಿದ್ದಾರೆ. ಅಕ್ಟೋಬರ್ 3, 2103ರಂದು ಸಿಬಿಐ ನಾಗೇಂದ್ರ ಅವರನ್ನು ಬಂಧಿಸಿತ್ತು.

ಸತೀಶ್ ಸೈಲ್

ಸತೀಶ್ ಸೈಲ್

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ ಸಂಬಂಧ ಕಾರವಾರದ ಪಕ್ಷೇತರ ಶಾಸಕ ಸತೀಶ್ ಸೈಲ್ ಅವರನ್ನು ಸಿಬಿಐ 20.09.2013ರಂದು ಬಂಧಿಸಿತ್ತು.

ಹರತಾಳು ಹಾಲಪ್ಪ

ಹರತಾಳು ಹಾಲಪ್ಪ

ಸ್ನೇಹಿತನ ಹೆಂಡತಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಹಾಲಪ್ಪ ಮೇಲೆ. 09.05.2010 ರಂದು ಶಿವಮೊಗ್ಗದಲ್ಲಿ ಹಾಲಪ್ಪ ಪೊಲೀಸರಿಗೆ ಶರಣಾಗಿದ್ದರು. 24.06.2010ರಂದು ಕೋರ್ಟ್ ಇವರಿಗೆ ಜಾಮೀನು ನೀಡಿತ್ತು.

ಕೃಷ್ಣಯ್ಯ ಶೆಟ್ಟಿ

ಕೃಷ್ಣಯ್ಯ ಶೆಟ್ಟಿ

ರಾಚೇನಹಳ್ಳಿ ಭೂ ಹಗರಣಕ್ಕೆ ಸಂಬಂಧ ಪಟ್ಟಂತೆ ಮಾಲೂರಿನ ಬಿಜೆಪಿ ಶಾಸಕರಾಗಿದ್ದ ಕೃಷ್ಣಯ್ಯ ಶೆಟ್ಟಿ ಅವರು 15.10.2011ರಲ್ಲಿ ಬಂಧನಕ್ಕೊಳಗಾಗಿದ್ದರು. ಬಿಡುಗಡೆಗೊಂಡ ನಂತರ ಬಿಜೆಪಿ ತೊರೆದು ಕಳೆದ ವಿಧಾನಸಭಾ ಚುನವಾಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಂತರದ ದಿನಗಳಲ್ಲಿ ಕೆ ಎಚ್ ಮುನಿಯಪ್ಪ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು.

ಕಟ್ಟಾ ಸುಬ್ರಮಣ್ಯ ನಾಯ್ಡು

ಕಟ್ಟಾ ಸುಬ್ರಮಣ್ಯ ನಾಯ್ಡು

ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಅವರನ್ನು 08.08.2011ರಲ್ಲಿ ಬಂಧಿಸಲಾಗಿತ್ತು. ಜಾಮೀನು ಮೇಲೆ ಬಿಡುಗಡೆಗೊಂಡ ಕಟ್ಟಾಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನಲೆಯಲ್ಲಿ ತನ್ನ ಶಿಷ್ಯನನ್ನು ಹೆಬ್ಬಾಳ ಕ್ಷೇತ್ರದಲ್ಲಿ ನಿಲ್ಲಿಸಿ ಬಿಜೆಪಿ ಟಿಕೆಟಿನಿಂದ ಗೆಲ್ಲಿಸಿದ್ದರು.

ಅಮರ್ ಸಿಂಗ್

ಅಮರ್ ಸಿಂಗ್

ವೋಟಿಗಾಗಿ ನೋಟು ಕೇಸಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಅಮರ್ ಸಿಂಗ್ ಅವರನ್ನು 06.09.2011ರಲ್ಲಿ ಬಂಧಿಸಲಾಗಿತ್ತು. ತದನಂತರ ಅಮರ್ ಸಿಂಗ್ ಬಿಡುಗಡೆಗೊಂಡಿದ್ದರು

ವೈ ಎಸ್ ಜಗನ್ ಮೋಹನ್ ರೆಡ್ಡಿ

ವೈ ಎಸ್ ಜಗನ್ ಮೋಹನ್ ರೆಡ್ಡಿ

ಅಕ್ರಮವಾಗಿ ಆಸ್ತಿ ಸಂಪಾದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಕಡಪಾ ಸಂಸದ ವೈಎಸ್ ಜಗನ್‌ಮೋಹನ್ ರೆಡ್ಡಿಯನ್ನು ಸಿಬಿಐ ಭಾನುವಾರ ಸಂಜೆ (27.05.2012) ಬಂಧಿಸಿದ್ದರು. ಅಕ್ರಮ ಆಸ್ತಿ ಪ್ರಕರಣದ ಆರೋಪಿಯಾಗಿ ಜೈಲು ಸೇರಿ ಸುಮಾರು ಒಂದು ವರ್ಷದ ನಂತರ ವೈಎಸ್ಸಾರ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿಗೆ 24.09.2013 ರಂದು ಬಿಡುಗಡೆ ಭಾಗ್ಯ ಸಿಕ್ಕಿತ್ತು.

ಬಿ ಎಸ್ ಯಡಿಯೂರಪ್ಪ

ಬಿ ಎಸ್ ಯಡಿಯೂರಪ್ಪ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಡಿ-ನೋಟಿಫಿಕೇಶನಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಕೋರ್ಟ್ ಜಾಮೀನು ನಿರಾಕರಿಸಿದ ಹಿನ್ನಲೆಯಲ್ಲಿ 15.10.2011 session ಕೋರ್ಟಿಗೆ ಶರಣಾದರು. ಯಡಿಯೂರಪ್ಪ ಅವರನ್ನು ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು. 08.11.2011 ರಂದು ಯಡಿಯೂರಪ್ಪ ಜೈಲಿನಿಂದ ಬಿಡುಗಡೆಗೊಂಡಿದ್ದರು.

ಸುರೇಶ್ ಕಲ್ಮಾಡಿ

ಸುರೇಶ್ ಕಲ್ಮಾಡಿ

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಅವ್ಯವಹಾರ ನಡೆಸಿರುವ ಆರೋಪದ ಮೇಲೆ ಕೂಟದ ಮುಖ್ಯಸ್ಥ ಸುರೇಶ್ ಕಲ್ಮಾಡಿ ಅವರನ್ನು ಸಿಬಿಐ ಪೊಲೀಸರು 26.04.2011 ರಂದು ಬಂಧಿಸಿದ್ದರು. 19.01.2012 ರಂದು ಕಲ್ಮಾಡಿ ತಿಹಾರ್ ಜೈಲಿನಿಂದ ಬಿಡುಗಡೆಗೊಂಡಿದ್ದರು.

ಜನಾರ್ಧನ ರೆಡ್ಡಿ

ಜನಾರ್ಧನ ರೆಡ್ಡಿ

ಆಂಧ್ರ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಯ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು 05.09.2011ರ ನಸುಕಿನ ಜಾವ ಜನಾರ್ಧನ ರೆಡ್ಡಿ ಮತ್ತು ಓಬಳಾಪುರಂ ಮೈನಿಂಗ್ ಕಂಪನಿಯ ಎಂಡಿ ಶ್ರೀನಿವಾಸ ರೆಡ್ಡಿಯವರನ್ನು ಬಂಧಿಸಿದ್ದರು. ರೆಡ್ಡಿ ಇನ್ನೂ ಚಂಚಲಗೂಡ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಓಂ ಪ್ರಕಾಶ್ ಚೌತಾಲ

ಓಂ ಪ್ರಕಾಶ್ ಚೌತಾಲ

ಪ್ರಾಥಮಿಕ ಶಿಕ್ಷಕರ ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಹರಿಯಾಣಾದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲ, ಅವರ ಪುತ್ರ ಹಾಗೂ ಶಾಸಕ ಅಜಯ್ ಚೌತಾಲ ಸೇರಿದಂತೆ ಇತರ 54 ಮಂದಿಯನ್ನು ತಪ್ಪಿತಸ್ಥರೆಂದು ದಿಲ್ಲಿ ಕೋರ್ಟ್ ತೀರ್ಪು ನೀಡಿ, (22.01.2013) ಹತ್ತು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು. ದೇಶದ ರಾಜಕಾರಣಿಯೊಬ್ಬರಿಗೆ ಭ್ರಷ್ಟಾಚಾರ ಹಗರಣದಲ್ಲಿ ವಿಧಿಸಲಾಗಿರುವ ಅತ್ಯಂತ ಕಠಿಣ ಶಿಕ್ಷೆ ಇದಾಗಿದೆ.

ಸುಖ್ ರಾಮ್

ಸುಖ್ ರಾಮ್

1996ರಲ್ಲಿ ಖಾಸತಿ ಕಂಪೆನಿಯೊಂದಕ್ಕೆ ಲಾಭದಾಯಕ ಗುತ್ತಿಗೆ ನೀಡಲು 3 ಲಕ್ಷ ರೂಪಾಯಿಗಳ ಲಂಚ ಪಡೆದುದಕ್ಕಾಗಿ ದೆಹಲಿ ನ್ಯಾಯಾಲಯವು (19.11.2011) ಮಾಜಿ ದೂರಸಂಪರ್ಕ ಸಚಿವ ಸುಖ್ ರಾಮ್ ಅವರಿಗೆ 5 ವರ್ಷಗಳ ಕಠಿಣ ಸೆರೆವಾಸ ಹಾಗೂ 4 ಲಕ್ಷ ರೂಗಳ ದಂಡ ವಿಧಿಸಿತ್ತು. 86ರ ಹರೆಯದ ಸುಖ್ ರಾಮ್ ಅವರು ಪಿ ವಿ ನರಸಿಂಹ ರಾವ್ ಸಂಪುಟದಲ್ಲಿ ದೂರಸಂಪರ್ಕ ಸಚಿವರಾಗಿದ್ದಾಗ ಹರ್ಯಾಣ ಟೆಲಿಕಾಂ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆಗೆ 30 ಕೋಟಿ ರೂಪಾಯಿಗಳ ಗುತ್ತಿಗೆ ನೀಡಲು ತಮ್ಮ ಹುದ್ದೆಯನ್ನು ದುರುಪಯೋಗಿಸಿಕೊಂಡು ಅಪರಾಧ ಎಸಗಿದ್ದಾರೆ ಎಂದು ದೆಹಲಿ ನ್ಯಾಯಾಲಯ ತೀರ್ಪು ನೀಡಿತ್ತು.

ಶಿಬು ಸೊರೆನ್

ಶಿಬು ಸೊರೆನ್

ಮಾಜಿ ಜಾರ್ಖಂಡ್ ಮುಖ್ಯಮಂತ್ರಿ ಮತ್ತು ಕಲ್ಲಿದ್ದಲು ಸಚಿವ ಶಿಬು ಸೊರೆನ್ ಹನ್ನೆರಡು ವರ್ಷದ ಹಿಂದೆ ತನ್ನ ಆಪ್ತ ಸಹಾಯಕ ಶಶಿರ್ನಾಥ್ ಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 05.12.2006 ರಲ್ಲಿ ಜೈಲು ಶಿಕ್ಷೆಗೆ ಒಳಗಾಗಿದ್ದರು.

ಮಧು ಕೋಡ

ಮಧು ಕೋಡ

ಎರಡು ಸಾವಿರ ಕೋಟಿ ಅಕ್ರಮ ಆಸ್ತಿ ಗಳಿಗೆ ಸಂಬಂಧಿಸಿದಂತೆ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡ ಅವರನ್ನು 30.11.2009ರಲ್ಲಿ ಜೈಲು ಶಿಕ್ಷೆಗೆ ಒಳಗಾದರು.

ಎ ರಾಜಾ

ಎ ರಾಜಾ

2ಜಿ ತರಂಗಗುಚ್ಛ ಹಗರಣದ ಸರದಾರ ಮಾಜಿ ಕೇಂದ್ರ ಸಚಿವ ಎ ರಾಜಾ ಅವರನ್ನು 02.02.2011ರ ಬೆಳಿಗ್ಗೆ ಸಿಬಿಐ ಬಂಧಿಸಿದೆ. ವಾರದಲ್ಲಿ ಎರಡನೇ ಬಾರಿ ವಿಚಾರಣೆ ನಡೆಸಿದ ನಂತರ ಸಿಬಿಐ ರಾಜಾ ಅವರನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು. 14.05.2012ರಂದು ರಾಜಾ ಬಿಡುಗಡೆ ಗೊಂಡಿದ್ದರು.

ಕನ್ನಿಮೋಳಿ

ಕನ್ನಿಮೋಳಿ

2ಜಿ ತರಂಗಗುಚ್ಛ ಹಗರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ರಾಜ್ಯಸಭಾ ಸದಸ್ಯೆ ಮತ್ತು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಮಗಳು ಕನ್ನಿಮೋಳಿ ಅವರನ್ನು ಮತ್ತು ಕಲೈಂಜರ್ ಟಿವಿಯ ಎಂಡಿ ಶರತ್ ಕುಮಾರ್ ಅವರನ್ನು ಸಿಬಿಐ 21.05.2011ರಂದು ಬಂಧಿಸಿತ್ತು. ನವೆಂಬರ್ 30, 2011 ರಂದು ಕನ್ನಿಮೋಳಿ ತಿಹಾರ್ ಜೈಲಿನಿಂದ ಬಿಡುಗಡೆಗೊಂಡಿದ್ದರು.

ವೈ ಸಂಪಂಗಿ

ವೈ ಸಂಪಂಗಿ

ಲಂಚ ಸ್ವೀಕಾರ ಪ್ರಕರಣವೊಂದರಲ್ಲಿ ಕೆಜಿಎಪ್ ಬಿಜೆಪಿ ಮಾಜಿ ಶಾಸಕ ವೈ.ಸಂಪಂಗಿಯವರನ್ನು ತಪ್ಪಿತಸ್ಥ ಎಂದು ತೀರ್ಪು ಲೋಕಾಯುಕ್ತ ಕೋರ್ಟ್ ತೀರ್ಪು ನೀಡಿತ್ತು. 02.06.2012ರಲ್ಲಿ ಸಂಪಂಗಿ ಅವರನ್ನು ಬಂಧಿಸಲಾಗಿತ್ತು. ಜೈಲಿನಿಂದ ಬಿಡುಗಡೆಗೊಂಡ ನಂತರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಇವರಿಗೆ ಟಿಕೆಟ್ ನಿರಾಕರಿಸಿತ್ತು. ತನ್ನ ತಾಯಿ ರಾಮಕ್ಕನನ್ನು ಬಿಜೆಪಿ ಟಿಕೆಟಿನಿಂದ ಕಣಕ್ಕಿಳಿಸಿ ಗೆಲ್ಲಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+