ಸಮೀಕ್ಷೆ: ಚುನಾವಣೆ ನಡೆದರೆ ಎನ್ ಡಿಎಗೆ 349 ಸ್ಥಾನ!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 18: ಈಗ ದೇಶದ ಜನತೆಯ ಒಲವು ಯಾವ ಪಕ್ಷದ ಕಡೆಗೆ ಇದೆ? ಅಕಸ್ಮಾತ್ ಲೋಕಸಭೆಗೆ ಚುನಾವಣೆ ನಡೆದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸಿ ಜಯಭೇರಿ ಬಾರಿಸಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ರಚನೆ ಮಾಡುತ್ತದೆ ಎಂದು ಇಂಡಿಯಾ ಟುಡೇ ನಡೆಸಿದ Mood of the Nation (MOTN) ಸಮೀಕ್ಷೆಯಿಂದ ತಿಳಿದು ಬಂದಿದೆ.

ಎನ್‌ಡಿಎ ಪಕ್ಷ 349ಕ್ಕೂ ಹೆಚ್ಚು ಸ್ಥಾನ ಪಡೆದು ಕೇಂದ್ರದಲ್ಲಿ ಅಧಿಕಾರ ಪಡೆದುಕೊಳ್ಳುತ್ತದೆ, ಕಾಂಗ್ರೆಸ್‌‌ 47ಕ್ಕಿಂತಲೂ ಕಡಿಮೆ ಸ್ಥಾನ ಪಡೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

India Today Mood of the Nation poll : Ruling NDA will bag 349 seats

ಸಮೀಕ್ಷೆ ಪ್ರಕಾರ ಮತಗಳು: ಎನ್‌ಡಿಎಗೆ ಪ್ರತಿಶತ 42ರಷ್ಟು ಮತ, ಯುಎಪಿಎಗೆ 28ರಷ್ಟು ಮತ ಹಾಗೂ ಇತರೆ ಪಕ್ಷಗಳಿಗೆ ಶೇ. 30ರಷ್ಟು ಮತ ಬರುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಇತರೆ ಪಕ್ಷಗಳು 119 ಸ್ಥಾನ ಪಡೆದುಕೊಳ್ಳಬಹುದು.

ಪ್ರಧಾನಿ ಮೋದಿಯವರಿಗೆ ಕಪ್ಪು ಹಣದ ವಿರುದ್ಧದ ಹೋರಾಟ, ನೋಟ್‌ ಬ್ಯಾನ್‌, ಪಾಕ್‌ ಆಕ್ರಮಿತ ಕಾಶ್ಮೀರದ ಮೇಲೆ ನಡೆಸಿರುವ ಸರ್ಜಿಕಲ್‌ ಸ್ಟ್ರೈಕ್ಸ್‌‌ ಹಾಗೂ ಸ್ವಚ್ಛ ಭಾರತ ವರದಾನವಾದರೆ, ಹಣದುಬ್ಬರ, ರೈತರ ಆತ್ಮಹತ್ಯೆ, ನಿರುದ್ಯೋಗ ಸರ್ಕಾರಕ್ಕೆ ಮಾರಕವಾಗಿ ಪರಿಣಮಿಸುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.

ಇಂಡಿಯಾ ಟುಡೇ 6 ತಿಂಗಳಿಗೊಮ್ಮೆ ಸಮೀಕ್ಷೆ ನಡೆಸುತ್ತಿದ್ದು, 2015ರಲ್ಲಿ ಎನ್‌ಡಿಎ ಸರ್ಕಾರ 288 ಸ್ಥಾನ, 2016ರಲ್ಲಿ 286 ಸ್ಥಾನ ಹಾಗೂ 2017ರಲ್ಲಿ 360 ಸ್ಥಾನ ಪಡೆದುಕೊಳ್ಳಲಿದೆ ಎಂದು ಸಮೀಕ್ಷೆಯಲ್ಲಿ ಹೇಳಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi has proven he is still the tallest leader in India, according to the Mood of the Nation (MOTN) survey. If elections were to be held today the ruling NDA will bag 349 seats. Congress is not expected to cross 47 seats

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X