Putin in India: ಪುಟಿನ್ ಭಾರತ ಭೇಟಿಗೂ ಮೊದಲೇ $2 ಮಿಲಿಯನ್ ಜಲಂತರ್ಗಾಮಿ ನೌಕೆ ಒಪ್ಪಂದ
ದೆಹಲಿ, ಡಿಸೆಂಬರ್ 04: ಭಾರತಕ್ಕೆ ರಷ್ಯಾ ದೇಶದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಆಗಮಿಸಿದ್ದಾರೆ. ಅವರಿಗೆ ದೆಹಲಿಯಲ್ಲಿ ಭವ್ಯ ಸ್ವಾಗತ ಸಿಕ್ಕಿದೆ. ಇದಕ್ಕೂ ಮೊದಲೇ ಭಾರತವು ರಷ್ಯಾದಿಂದ ಸುಮಾರು 2 ಶತಕೋಟಿಗೆ ಪರಮಾಣು ಚಾಲಿತ ದಾಳಿ ಜಲಾಂತರ್ಗಾಮಿ ನೌಕೆಯನ್ನು ಗುತ್ತಿಗೆಗೆ ಪಡೆಯಲಿದೆ. ಈ ಮೂಲಕ ಎರಡು ದೇಶಗಳ ಸಂಬಂಧ ಮತ್ತಷ್ಟು ಉತ್ತಮವಾಗಲಿದೆ.
ಈ ಗುತ್ತಿಗೆ ಒಪ್ಪಂದದಿಂದ ಒಂದು ದಶಕದ ಮಾತುಕತೆಗಳು ಮುಕ್ತಾಯಗೊಂಡಿವೆ. ಒಪ್ಪಂದವು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತ ಭೇಟಿಯ ಒಂದು ವಾರದ ಮೊದಲು ಆಗಿದೆ. ಮುಖ್ಯವಾಗಿ ಈ ದ್ವಿಪಕ್ಷೀಯ ರಕ್ಷಣಾ ಮತ್ತು ಇಂಧನ ಸಹಕಾರ ಪ್ರತಿಬಿಂಬವಾಗಿದೆ. ತರಬೇತಿಯ ಉದ್ದೇಶ ಹೊಂದಿದ್ದು, ಈ ಜಲಾಂತರ್ಗಾಮಿ ನೌಕೆಯನ್ನು ಎರಡು ವರ್ಷಗಳಲ್ಲಿ ತಲುಪಿಸಲಾಗುವುದು ಎಂದು ರಷ್ಯಾ ತಿಳಿಸಿದೆ.

ಜಲಾಂತರ್ಗಾಮಿ ನೌಕೆ ಪಡೆಯುವ ಗುತ್ತಿಗೆ ಬಗೆಗಿನ ಚರ್ಚೆಗಳು ಸಮಸ್ಯೆಗಳಿಂದ ಕೂಡಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಸದ್ಯ ಆ ಸಮಸ್ಯೆ ಬಗೆಹರಿದಿದ್ದು, ದರ್ಶಕಗಳ ಮಾತುಕತೆ ಇತ್ಯರ್ಥವಾಗಿದೆ. ಇದೇ ವಿಚಾರವಾಗಿ ಭಾರತೀಯ ಅಧಿಕಾರಿಗಳ ತಂಡವು ನವೆಂಬರ್‌ನಲ್ಲಿ ರಷ್ಯಾದ ಹಡಗುಕಟ್ಟೆಗೆ ಭೇಟಿ ನೀಡಿತ್ತು. ವಿಶೇಷವೆಂದರೆ ಒಪ್ಪಂದದಡಿ ಗುತ್ತಿಗೆ ಪಡೆಯಲಾಗುತ್ತಿರುವ ಜಲಾಂತರ್ಗಾಮಿ ನೌಕೆಯನ್ನು ಯುದ್ಧಕ್ಕಾಗಿ ನಿಯೋಜಿಸಲಾಗುವುದಿಲ್ಲ. ಬದಲಿಗೆ ಭಾರತದ ಪರಮಾಣು-ಜಲಾಂತರ್ಗಾಮಿ ಕಾರ್ಯಾಚರಣೆಗಳ ತರಬೇತಿ ಪಡೆಯಲಾಗುತ್ತದೆ.
ರಷ್ಯಾ -ಭಾರತ ದೇಶಗಳ ಜಲಾಂತರ್ಗಾಮಿ ನೌಕೆಯ ಗುತ್ತಿಗೆ 10 ವರ್ಷಗಳ ಅವಧಿಗೆ ಸಿಮೀತವಾಗಿದೆ. ಇನ್ನೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುರುವಾರ ಸಂಜೆ ಭಾರತಕ್ಕೆ ಆಗಮಿಸಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಪೂರ್ಣ ಪ್ರಮಾಣದ ಆಕ್ರಮಣ ಮಾಡಿದ ನಂತರ ಪುಟಿನ್ ಅವರ ಮೊದಲ ಭೇಟಿ ಆಗಿದೆ. ಮೋದಿ ಅವರು ರಷ್ಯಾ ಮತ್ತು ಚೀನಾ ಎರಡರೊಂದಿಗೂ ಸಂಬಂಧ ವಿಸ್ತರಿಸದ್ದಾರೆ. ಇದರ ಹಿಂದೆ ವಿದೇಶಾಂಗ, ರಾಜತಾಂತ್ರಿಕ ಉದ್ದೇಶಗಳು ಇವೆ ಎಂದು ವಿಶ್ಲೇಷಿಸಲಾಗಿದೆ.












Click it and Unblock the Notifications