Tunnel: ಜಲಗರ್ಭದಲ್ಲಿ ಬಸ್ಸು, ರೈಲು: 104 ಅಡಿ ಆಳದ ನದಿಯೊಳಗೆ ಜನ ಸಂಚಾರ, ಭಾರತದಲ್ಲಿ ಇದೇ ಮೊದಲು

ನವದೆಹಲಿ: ಭಾರತದಲ್ಲಿ ಪ್ರಪ್ರಥಮ ಬಾರಿಗೆ ನದಿ ನೀರಿನ ಆಳದಲ್ಲಿ ಸುರಂಗ ರಸ್ತೆ ಹಾಗೂ ರೈಲು ಮಾರ್ಗ ನಿರ್ಮಾಣಕ್ಕೆ ಮುಂದಾಗಿದೆ. ದೇಶದ ಮಟ್ಟಿಗೆ ಇದೊಂದು ಅತ್ಯಂತ ಮಹತ್ವದ ಯೋಜನೆಯಾಗಿದೆ. ನದಿಯ ಆಳದೊಳಗೆ ಅವಳಿ (ಸುರಂಗ) ಕೊಳವೆಗಳ ಮೂಲಕ ಜನರನ್ನು ಹೊತ್ತ ರೈಲು ಮತ್ತು ವಾಹನಗಳು ಚಲಿಸಲಿವೆ. ಎಲ್ಲಿಂದ-ಎಲ್ಲಿಗೆ ಸಂಪರ್ಕ ಕಲ್ಪಿಸುತ್ತದೆ? ಯಾವ ನದಿ ಕೆಳಗೆ ಯೋಜನೆ ಬರುತ್ತದೆ, ಏನೆಲ್ಲ ಪ್ರಯೋಜನ, ಯಾವೆಲ್ಲ ರಾಜ್ಯಗಳು, ಭಾಗಗಳನ್ನು ಸಂಪರ್ಕಿಸುತ್ತದೆ? ಅಂದಾಜು ವೆಚ್ಚದ ಪೂರ್ಣ ಮತ್ತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ದೇಶದ ಈಶಾನ್ಯ ಭಾಗದಲ್ಲಿ ಈ ಸಾರಿಗೆ ಮೂಲ ಸೌಕರ್ಯ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಬೃಹತ್ ಮಟ್ಟದ 33 ಕಿಲೋ ಮೀಟರ್ ಉದ್ದದ ಯೋಜನೆಯನ್ನು ಬ್ರಹ್ಮಪುತ್ರ ನದಿಯ ಕೆಳಗೆ ಸಾಕಾರಗೊಳಿಸಲು ತಯಾರಿ ಮಾಡಿಕೊಳ್ಳಲಾಗಿದೆ. ಅಸ್ಸಾಂ ವ್ಯಾಪ್ತಿಯಲ್ಲಿ ರಸ್ತೆ ಮತ್ತು ರೈಲು ಸಾರಿಗೆ ಸುಧಾರಣೆ ಆಗಲಿದೆ. ಮಣಿಪುರ, ಅರುಣಾಚಲ ಪ್ರದೇಶ ಮತ್ತು ಈಶಾನ್ಯ ಭಾಗಗಳಿಗೆ ಪ್ರಮುಖ ಸಂಪರ್ಕವನ್ನು ಬಲಪಡಿಸುತ್ತದೆ. ಈ ಯೋಜನೆ ಅನುಷ್ಠಾನವು ಭಾರತ ತಂತ್ರಜ್ಞಾನ, ಎಂಜಿನಿಯರಿಂಗ್, ರಸ್ತೆ ಮತ್ತು ರೈಲು ಮೂಲ ಸೌಕರ್ಯ ಕ್ಷೇತ್ರದ ಮಟ್ಟಿಗೆ ಮೈಲಿಗಲ್ಲಾಗಲಿದೆ.

India to Build First Underwater Road-Rail Tunnel Beneath Brahmaputra in Assam

ಈ ಸುರಂಗ ರಸ್ತೆ, ರೈಲು ಯೋಜನೆಯಿಂದ 6.5 ಗಂಟೆ ಪ್ರಯಾಣವನ್ನು ಕೇವಲ 30 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ. ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಾತ್ಕಾಲಿಕ ಅಥವಾ ಸ್ಥಾಯಿ ಸರ್ಕಾರಿ ಗುಂಪು ಇರುವ 'ಭಾರತೀಯ ಅಂತರ-ಸಚಿವಾಲಯ ಸಮಿತಿ (ಐಎಂಪಿ) ;ವತಿಯಿಂದ ಈ ಯೋಜನೆ ಆರಂಭಿಸಲು ಎಲ್ಲ ಹಂತಗಳಿಗೂ ಈಗಾಗಲೇ ತಾತ್ವಿಕ ಅನುಮೋದನೆ ನೀಡಲಾಗಿದೆ.

ಯೋಜನೆ ಪ್ರಮುಖ ವಿವರಗಳು

* ಗೋಹ್ಪುರ್ - ನುಮಲಿಗಢ ಸಂಪರ್ಕಿಸುವ ರಸ್ತೆ-ರೈಲು ಮಾರ್ಗ ಯೋಜನೆ ಇದಾಗಿದೆ.

* ಒಟ್ಟು ಯೋಜನೆಯ ಉದ್ದ: 33.7 ಕಿಲೋ ಮೀಟರ್ ಮೀ

* ನೀರೊಳಗಿನ ಸುರಂಗ ಮಾರ್ಗ: 15.8 ಕಿಲೋ ಮೀಟರ್

* ನದಿಪಾತ್ರದ ಎಷ್ಟು ಆಳದಲ್ಲಿ ನಿರ್ಮಾಣ: 32 ಮೀಟರ್

* ಎರಡು (ಅವಳಿ) ಕೊಳವೆಯಲ್ಲಿ ರಸ್ತೆ, ರೈಲು ಮಾರ್ಗ ನಿರ್ಮಾಣ

India to Build First Underwater Road-Rail Tunnel Beneath Brahmaputra in Assam

ಸುರಂಗ ಸಂರಚನೆ ಹೇಗಿರಲಿದೆ?

* ರೈಲು ಸುರಂಗ: ಏಕ ವಿದ್ಯುದ್ದೀಕೃತ ಹಳಿ, ನಿಲುಭಾರವಿಲ್ಲದ (Ballastless design) ವಿನ್ಯಾಸ

* ರಸ್ತೆ ಸುರಂಗ: 2 ಏಕ ದಿಕ್ಕಿನಲ್ಲಿ ಸಂಚಾರ ಪಥಗಳ ನಿರ್ಮಾಣ

* ಸುರಕ್ಷತೆಗಾಗಿ ರೈಲು ಸಂಚಾರದ ಸಮಯದಲ್ಲಿ ರಸ್ತೆ ಸಂಚಾರ ಸ್ಥಗಿತಗೊಳಿಸಲು ಪ್ಲಾನ್

ಬೃಹತ್ ಸಾರಿಗೆ ಸಂಪರ್ಕ ಸುಧಾರಣೆ, ಲಿಂಕ್

* ಪ್ರಯಾಣದ ಸಮಯ ಕಡಿತ: 6.5 ಗಂಟೆಗಳಿಂದ ಕೇವಲ 30 ನಿಮಿಷಕ್ಕೆ ಇಳಿಕೆ

* ದೂರ ಕಡಿತ: ಮೊದಲು ಕ್ರಮಿಸಬೇಕಿದ್ದ 240 ಕಿಲೋ ಮೀಟರ್ ದೂರವು 34 ಕಿಮೀ.ಗೆ ಇಳಿಕೆ

* ಸಂಪರ್ಕ ಲಿಂಕ್: ಅರುಣಾಚಲ ಪ್ರದೇಶ, ಮಣಿಪುರ ಮತ್ತು ಈಶಾನ್ಯ ಪ್ರದೇಶಕ್ಕೆ ಸಂಪರ್ಕ ಸುಧಾರಣೆ

ಅಂದಾಜು ವೆಚ್ಚ ಮತ್ತು ನಿರ್ಮಾಣ ಕಾಲಮಿತಿ

* ಅಂದಾಜು ವೆಚ್ಚ: ₹18,600 ಕೋಟಿ

* ರಸ್ತೆ ಸಾರಿಗೆ, ರೈಲ್ವೆ ಮತ್ತು ರಕ್ಷಣೆಯಿಂದ ಜಂಟಿಯಾಗಿ ಹಣಕಾಸು ನೆರವು

* ಕಾಮಗಾರಿ ಮಂಜೂರಾದ ಬಳಿಕ 5 ವರ್ಷಗಳಲ್ಲಿ ಪೂರ್ಣಗೊಳಿಸಲು ಗಡುವು

* ಅಸ್ಸಾಂ ಚುನಾವಣೆಗೆ (ಮಾರ್ಚ್‌ 2026) ಮುನ್ನ ಕೇಂದ್ರ ಸಚಿವ ಸಂಪುಟದ ಅಂತಿಮ ಅನುಮೋದನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+