Get Updates
Get notified of breaking news, exclusive insights, and must-see stories!

ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯ ಎರಡನೇ ಪರೀಕ್ಷೆ ಯಶಸ್ವಿ

ನವದೆಹಲಿ, ಸೆಪ್ಟೆಂಬರ್ 30: 400 ಕಿ.ಮೀ ಗೂ ಮೀರಿದ ಟಾರ್ಗೆಟ್ ನ್ನು ತಲುಪಿ ಹೊಡೆದುರುಳಿಸಬಲ್ಲ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯ ಮತ್ತೊಂದು ಆವೃತ್ತಿಯ ಪರೀಕ್ಷೆಯನ್ನು ಯಾಶಸ್ವಿಯಾಗಿ ಪೂರೈಸಲಾಗಿದೆ.

ಇದರಿಂದ ಭಾರತದ ರಕ್ಷಣಾ ಪಡೆಗೆ ಮತ್ತಷ್ಟು ಬಲ ಬಂದಂತಾಗಿದೆ. ಡಿಆರ್ ಡಿಒದ ಪಿಜೆ-10 ಪ್ರಾಜೆಕ್ಟ್ ನ ಅಡಿಯಲ್ಲಿ ಈ ಸ್ಥಳೀಯ ಬೂಸ್ಟರ್ ನ್ನು ಹೊಂದಿರುವ ಕ್ಷಿಪಲಡಾಖ್ ನಲ್ಲಿ ಚೀನಾ ಗಡಿ ಕ್ಯಾತೆಯ ಹಿನ್ನೆಲೆಯಲ್ಲಿ ಈಗಾಗಲೇ ಬ್ರಹ್ಮೋಸ್ ಕ್ಷಿಪಣಿಗಳನ್ನು ನಿಯೋಜಿಸಿರುವ ಬೆನ್ನಲ್ಲೇ ಈ ವಿಸ್ತರಿತ ಆವೃತ್ತಿಯ ಪರೀಕ್ಷೆ ಯಶಸ್ವಿಯಾಗಿರುವುದು ಮಹತ್ವ ಪಡೆದುಕೊಂಡಿದೆ.

ಸೆ.30 ರಂದು ಪರೀಕ್ಷೆ ಮಾಡಲಾಯಿತು. ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯ ಎರಡನೇ ವಿಸ್ತರಿತ ಶ್ರೇಣಿ ಆವೃತ್ತಿಯಾಗಿದೆ. ಕ್ಷಿಪಣಿಯ ಏರ್‌ಫ್ರೇಮ್‌ ಹಾಗೂ ಬೂಸ್ಟರ್ ನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ರಷ್ಯಾ ಹಾಗೂ ಭಾರತದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದ್ದ ಬ್ರಹ್ಮೋಸ್ ಕ್ಷಿಪಣಿ ಪ್ರಾರಂಬದಲ್ಲಿ 290- ಕಿ.ಮೀ ಸಂಚರಿಸುವ ಸಾಮರ್ಥ್ಯ ಹೊಂದಿತ್ತು.

India Successfully Test-Fires Over 400 Km Strike Range BrahMos Supersonic Cruise Missile

2007ರಲ್ಲಿ ಭೂಮಿಯಿಂದ ಭೂಮಿಗೆ ಉಡಾವಣೆಗೊಳ್ಳುವ ಬ್ರಹ್ಮೋಸ್‌ ಕ್ಷಿಪಣಿ ಸೇನೆಯನ್ನು ಸೇರಿತ್ತು. ಆಕಾಶದಿಂದ ಉಡಾಯನ ಮಾಡಲು ಈಗ ಎಫ್ಆರ್‌ಸಿ ಸಿಕ್ಕಿದೆ. 2014ರಲ್ಲಿ ಸಮುದ್ರದಿಂದಲೂ ಉಡಾವಣೆ ಮಾಡಬಲ್ಲ ಬ್ರಹ್ಮೋಸ್‌ ಕ್ಷಿಪಣಿ ನೌಕಾಪಡೆಗೆ ಸೇರ್ಪಡೆಗೊಂಡಿತ್ತು.

ರಷ್ಯಾದ ಪಿ-800 ಕ್ಷಿಪಣಿ ಮಾದರಿಯಲ್ಲಿಯೇ ಬ್ರಹ್ಮೋಸ್ ತಯಾರು ಮಾಡಲಾಗಿದೆ. ಭಾರತ ಮತ್ತು ರಷ್ಯಾದ ಎರಡು ನದಿಗಳ ಹೆಸರನ್ನು ಸೇರಿಸಿ ಕ್ಷಿಪಣಿಗೆ ಬ್ರಹ್ಮೋಸ್ ಎಂದು ನಾಮಕರಣ ಮಾಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+