ಮೋದಿ ಸರಕಾರದಿಂದ ಯೋಧರಿಗೆ ಭರ್ಜರಿ ದೀಪಾವಳಿ ಬೋನಸ್

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 13 : ಭಾರತೀಯ ಯೋಧರಿಗೆ ಈ ದೀಪಾವಳಿಯಂದು ನರೇಂದ್ರ ಮೋದಿಯಿಂದ ಭರ್ಜರಿ ಬಳುವಳಿ ದೊರೆಯಲಿದೆ. ವೇತನ ಆಯೋಗದ ಶಿಫಾರಸಿನ ಪ್ರಕಾರ, ಯೋಧರಿಗೆ ಬರಬೇಕಾದ ಬಾಕಿ ಮೊತ್ತದ ಶೇ.10ರಷ್ಟು ಅಕ್ಟೋಬರ್ 30ರೊಳಗೆ ದೊರೆಯಲಿದೆ.

ಇದರಂತೆ, ಪ್ರತಿ ಯೋಧನಿಗೂ ಹೆಚ್ಚೂಕಡಿಮೆ ಒಂದು ತಿಂಗಳ ಸಂಬಳ ಬೋನಸ್ ರೂಪದಲ್ಲಿ ಈ ದೀಪಾವಳಿಗೆ ದೊರೆಯಲಿದೆ. ವೇತನ ಆಯೋಗದ ಶಿಫಾರಸಿನಂತೆ ಸಿವಿಲ್ ಸೇವೆಯಲ್ಲಿರುವವರಿಗೆ ಬಾಕಿ ಮೊತ್ತ ಬಂದಿದ್ದರೆ, ಯೋಧರಿಗೆ ಮಾತ್ರ ಇನ್ನೂ ಬರಬೇಕಾದ ಹಣ ಇನ್ನೂ ಬಂದಿಲ್ಲ. [ಗಡಿಯಲ್ಲಿ ಹೈ ಅಲರ್ಟ್ : ಶಸ್ತ್ರಸನ್ನದ್ಧವಾಗಿದೆ ಭಾರತೀಯ ಸೇನೆ]

India soldiers to get 10 percent of arrears before Deepavali

ವೇತನ ಆಯೋಗದ ಆದೇಶದಲ್ಲಿ ಕೆಲ ತಿದ್ದುಪಡಿಗಳನ್ನು ಸೇನೆಯ ದಂಡನಾಯಕರು ಸೂಚಿಸಿದ್ದರಿಂದ ಯೋಧರಿಗೆ ಬರಬೇಕಾದ ಬಾಕಿ ಮೊತ್ತ ಇನ್ನೂ ಸಿಕ್ಕಿಲ್ಲ. ಅಂಗವಿಕಲರಿಗೆ ಸಿಗಬೇಕಾದ ವೇತನ ಮತ್ತು ಪಿಂಚಣಿಗೆ ಸಂಬಂಧಿಸಿದಂತೆ ವೇತನ ಆಯೋಗದ ಶಿಫಾರಸಿನಲ್ಲಿ ಸಾಕಷ್ಟು ತಪ್ಪುಗಳಿವೆ ಎಂದು ಸೇನಾಪತಿಗಳು ತಗಾದೆ ಎತ್ತಿದ್ದಾರೆ.

ವೇತನ ಆಯೋಗದ ಶಿಫಾರಸುಗಳು ಇನ್ನೂ ಜಾರಿಯಾಗದಿದ್ದರೂ, ಬರಬೇಕಾದ ಬಾಕಿ ಮೊತ್ತದ ಶೇ.10ರಷ್ಟು ತುರ್ತಾಗಿ ಯೋಧರಿಗೆ ನೀಡಬೇಕೆಂಬ ಮನವಿಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಹೀಗಾಗಿ, ಈ ದೀಪಾವಳಿಗೆ ಪ್ರತಿ ಯೋಧರ ಮನೆಮನೆಗಳಲ್ಲಿಯೂ ಆತಂಕದ ಕಾರ್ಮೋಡ ಕಳೆದು ಸಂತಸದ ಜ್ಯೋತಿ ಬೆಳಗಲಿದೆ. [ಸರ್ಜಿಕಲ್ ಸ್ಟ್ರೈಕ್ ನಡೆದದ್ದು ಹೇಗೆ? 10 ಬೆಳವಣಿಗೆಗಳು]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India soldiers to get 10 percent of arrears before Deepavali. Narendra Modi government has decided to sanction 10% of arrears to soldiers, though dispute regarding pay commission recommendations are yet to be solved. Services chiefs have raised objections with respect to recommendations by pay commission.
Please Wait while comments are loading...