ಮೋದಿ ಪ್ರಮಾಣವಚನಕ್ಕೆ ಇಮ್ರಾನ್ ಖಾನ್‌ಗೆ ಆಹ್ವಾನವಿಲ್ಲ
Recommended Video
ನವದೆಹಲಿ, ಮೇ 28: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗೆ ಆಹ್ವಾನ ನೀಡದಿರಲು ಭಾರತ ನಿರ್ಧರಿಸಿದೆ. 2014ರಲ್ಲಿ ಮೋದಿ ಪ್ರಮಾಣವಚನ ಸ್ವೀಕರಿಸುವಾಗ ಸಾರ್ಕ್ ದೇಶಗಳ ಮುಖ್ಯಸ್ಥರನ್ನು ಆಹ್ವಾನಿಸಿದ್ದರು. ಹೀಗಾಗಿ ಪಾಕಿಸ್ತಾನದ ಅಂದಿನ ಪ್ರಧಾನಿ ನವಾಜ್ ಷರೀಫ್ ಕೂಡ ಪ್ರಮಾಣವಚನಕ್ಕೆ ಆಗಮಿಸಿದ್ದರು. ಈ ಭೇಟಿ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.
ಈ ಹಿನ್ನೆಲೆಯಲ್ಲಿ ಈ ಬಾರಿ ಪಾಕಿಸ್ತಾನ ಪ್ರಧಾನಿಯನ್ನು ಆಹ್ವಾನಿಸುವ ಸಾಹಸಕ್ಕೆ ಮೋದಿ ಸರ್ಕಾರ ಮುಂದಾಗಿಲ್ಲ. 'ನೆರೆಹೊರೆ ದೇಶಗಳು ಮೊದಲು' ಎಂಬ ವಿದೇಶಾಂಗ ನೀತಿಯ ಹೊರತಾಗಿಯೂ ಇಮ್ರಾನ್ ಖಾನ್‌ಗೆ ಆಹ್ವಾನ ನೀಡಲಾಗಿಲ್ಲ. ಬದಲಾಗಿ ಬಿಮ್ಸ್ಟೆಕ್ ದೇಶಗಳ ಮುಖ್ಯಸ್ಥರನ್ನು ಆಹ್ವಾನಿಸಲಾಗಿದೆ.
ಮೇ ೩೦ರ ಸಂಜೆ ನಡೆಯುವ ಪ್ರಮಾಣವಚನ ಕಾರ್ಯಕ್ರಮದಲ್ಲಿ ಶ್ರೀಲಂಕಾ, ಥೈಲ್ಯಾಂಡ್, ನೇಪಾಳ, ಭೂತಾನ್, ಮಾರಿಷಸ್, ಕರ್ಗಿಜಸ್ತಾನದ ಪ್ರಧಾನಿಗಳು ಭಾಗವಹಿಸುವ ಸಾಧ್ಯತೆಯಿದೆ. ಬಾಂಗ್ಲಾದೇಶದ ಪ್ರಧಾನಿ ವಿದೇಶ ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ ಸರ್ಕಾರದ ಹಿರಿಯ ಸಚಿವರು ಭಾಗವಹಿಸಲಿದ್ದಾರೆ.

ಈ ಮೂಲಕ ನೆರೆಹೊರೆಯ ದೇಶಗಳಲ್ಲೂ ಪಾಕಿಸ್ತಾನವನ್ನು ನಿರ್ಲಕ್ಷಿಸಿ ತೆರೆಮರೆಗೆ ಕಳುಹಿಸುವ ಪ್ರಯತ್ನಕ್ಕೆ ಭಾರತ ಮುಂದಾಗಿದೆ. ಪಾಕ್ ಪ್ರಧಾನಿ ಶುಭಾಶಯಲ್ಲೂ ಖಡಕ್ ಆಗಿ ಪ್ರತಿಕ್ರಿಯಿಸಿದ್ದ ಮೋದಿ, ಶಾಂತಿ ಮಾತುಕತೆಯ ಆಸೆಯಿದ್ದರೆ ಭಯೋತ್ಪಾದನೆಗೆ ತಡೆ ಹಾಕಿ ಎಂದು ಸ್ಪಷ್ಟ ಸಂದೇಶ ನೀಡಿದ್ದರು.












Click it and Unblock the Notifications