ಪಾಕ್‌ ಬಣ್ಣ ಬಯಲು ಮಾಡಲು ವಿವಿಧ ರಾಷ್ಟ್ರಗಳಿಗೆ ಸರ್ವಪಕ್ಷ ಸಂಸದರ ನಿಯೋಗ ಪ್ರವಾಸ

ಪಾಕಿಸ್ತಾನದ ಭಯೋತ್ಪಾದನೆಗೆ ಪ್ರತಿಯಾಗಿ ಭಾರತವು ಇತ್ತೀಚೆಗೆ ನಡೆಸಿದ ಆಪರೇಷನ್ ಸಿಂಧೂರ್ ಬಗ್ಗೆ ಪ್ರಮುಖ ರಾಷ್ಟ್ರಗಳಲ್ಲಿ ಒಗ್ಗಟ್ಟಿನ ಹೋರಾಟವನ್ನು ಪ್ರದರ್ಶಿಸಲು ಸರ್ವಪಕ್ಷ ಸಂಸದರ ನಿಯೋಗವನ್ನು ರಚಿಸಲಾಗಿದೆ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ಈ ತಿಂಗಳ ಕೊನೆಯಲ್ಲಿ ಏಳು ಸರ್ವಪಕ್ಷ ಸಂಸದರ ನಿಯೋಗಗಳನ್ನು ಪ್ರಮುಖ ರಾಷ್ಟ್ರಗಳ ರಾಜಧಾನಿಗಳಿಗೆ ಕಳುಹಿಸಲು ನಿರ್ಧರಿಸಲಾಗಿದೆ.

ಆಪರೇಷನ್ ಸಿಂಧೂರ್ ನಂತರ ರಾಜತಾಂತ್ರಿಕವಾಗಿ ಈ ಹೆಜ್ಜೆ ಇಡಲಾಗುತ್ತಿದೆ. ಈ ನಿಯೋಗಗಳನ್ನು ಕಾಂಗ್ರೆಸ್‌ನ ಶಶಿ ತರೂರ್, ಬಿಜೆಪಿ ಪಕ್ಷದಿಂದ ರವಿಶಂಕರ್ ಪ್ರಸಾದ್, ಜೆಡಿಯು ಪಕ್ಷದಿಂದ ಸಂಜಯ್ ಕುಮಾರ್ ಝಾ, ಬಿಜೆಪಿಯ ಬೈಜಯಂತ್ ಪಾಂಡಾ, ಡಿಎಂಕೆ ಪಕ್ಷದ ಕನಿಮೋಳಿ ಕರುಣಾನಿಧಿ, ಎನ್‌ಸಿಪಿ-ಎಸ್‌ಪಿ ಪಕ್ಷದ ಸುಪ್ರಿಯಾ ಸುಳೆ ಹಾಗೂ ಶಿವಸೇನೆಯ ಶ್ರೀಕಾಂತ್ ಏಕನಾಥ್ ಶಿಂಧೆ ಈ ನಿಯೋಗಗಳ ನೇತೃತ್ವ ವಹಿಸಲಿದ್ದಾರೆ.

india-sends-all-party-delegation-to-major-nations-over-operation-sindhoor-pakistan-terror

ರವಿಶಂಕರ್, ಶಶಿ ತರೂರ್, ಸುಪ್ರಿಯಾ ಸುಳೆ, ಕನಿಮೊಳಿ ಅವರು ಯುಎಸ್, ಯುಕೆ, ಜಪಾನ್‌ಗೆ ಸಂಸದರ ತಂಡಗಳನ್ನು ಮುನ್ನಡೆಸಲಿದ್ದಾರೆ. ಪ್ರತಿ ನಿಯೋಗದಲ್ಲಿ ಬಿಜೆಪಿ, ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಜೆಡಿಯು, ಎನ್‌ಸಿಪಿ (ಶರದ್ ಪವಾರ್ ಬಣ), ಬಿಜೆಡಿ, ಶಿವಸೇನೆ (ಯುಬಿಟಿ) ಮತ್ತು ಸಿಪಿಎಂನ ವ್ಯಕ್ತಿಗಳು ಸೇರಿದಂತೆ ಐದರಿಂದ ಎಂಟು ಸಂಸದರು ಇರುತ್ತಾರೆ.

ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ನೇತೃತ್ವದಲ್ಲಿ ಮೇ 23ರಿಂದ ಪ್ರಾರಂಭವಾಗುವ 10 ದಿನಗಳ ಅಂತರರಾಷ್ಟ್ರೀಯ ಪ್ರವಾಸಕ್ಕಾಗಿ ರಾಜಕೀಯ ಕ್ಷೇತ್ರಗಳ ಸುಮಾರು 40 ಸಂಸದರು ಅಮೆರಿಕ, ಯುಕೆ, ಯುಎಇ, ಜಪಾನ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳಿಗೆ ಪ್ರಯಾಣ ಬೆಳೆಸಲಿದ್ದಾರೆ.

ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರ ಬೆಂಬಲ ನೀಡುತ್ತಿರುವ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವುದು ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತ ನಡೆಸಿದ ನಿಖರವಾದ ದಾಳಿಯ ಹಿಂದಿನ ತಾರ್ಕಿಕತೆಯನ್ನು ವಿವರಿಸುವ ಜವಾಬ್ದಾರಿಯನ್ನು ಈ ನಿಯೋಗಗಳಿಗೆ ನೀಡಲಾಗಿದೆ.

ಕಾಶ್ಮೀರ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಭಾರತದ ನಿಲುವನ್ನು ಪ್ರಸ್ತುತಪಡಿಸಲು ಕೇಂದ್ರ ಸರ್ಕಾರವು ಈ ಬಹು ಪಕ್ಷಗಳ ಸಂಸದರನ್ನು ನಿಯೋಜಿಸುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಎನ್‌ಸಿಪಿ-ಎಸ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ಈ ನಿಯೋಗದಲ್ಲಿ ತಮ್ಮ ಸೇರ್ಪಡೆಯನ್ನು ದೃಢಪಡಿಸಿದ್ದಾರೆ. ಈ ಧ್ಯೇಯವನ್ನು ರಾಷ್ಟ್ರೀಯ ಏಕತೆಯ ವಿಷಯ ಎಂದು ಕರೆದಿದ್ದಾರೆ.

ಕೇಂದ್ರ ಸಚಿವ ಕಿರಣ್ ರಿಜಿಜು ಅವರಿಂದ ನನಗೆ ಕರೆ ಬಂತು. ಅವರು ಈ ಸಮಿತಿಗಳಲ್ಲಿ ಒಂದರ ಭಾಗವಾಗಲು ನನ್ನನ್ನು ಕೇಳಿಕೊಂಡರು. ನಮ್ಮ ರಾಷ್ಟ್ರದ ಪ್ರಶ್ನೆ ಬಂದಾಗ ನಾವೆಲ್ಲರೂ ಒಟ್ಟಿಗೆ ಇರುತ್ತೇವೆ. ನಮ್ಮ ದೇಶದ ದೃಷ್ಟಿಕೋನವನ್ನು ಮಂಡಿಸಲು ನಾವು ಇತರ ದೇಶಗಳಿಗೆ ಹೋಗುತ್ತೇವೆ ಎಂಬುದು ಸ್ಪಷ್ಟವಾಗಿದೆ. ಅತ್ಯಂತ ಮುಖ್ಯವಾದ ಕ್ಷಣಗಳಲ್ಲಿ ಭಾರತ ಒಗ್ಗಟ್ಟಿನಿಂದ ನಿಲ್ಲುತ್ತದೆ ಎಂದು ಹೇಳಿದ್ದಾರೆ.

ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ಸಂದೇಶವನ್ನು ಹೊತ್ತುಕೊಂಡು ಏಳು ಸರ್ವಪಕ್ಷ ನಿಯೋಗಗಳು ಶೀಘ್ರದಲ್ಲೇ ಪ್ರಮುಖ ಪಾಲುದಾರ ರಾಷ್ಟ್ರಗಳಿಗೆ ಭೇಟಿ ನೀಡಲಿವೆ. ರಾಜಕೀಯವನ್ನು ಮೀರಿ, ಭಿನ್ನಾಭಿಪ್ರಾಯಗಳನ್ನು ಮೀರಿ ರಾಷ್ಟ್ರೀಯ ಏಕತೆಯ ಪ್ರಬಲ ಪ್ರತಿಬಿಂಬವಾಗಿ ಹೆಜ್ಜೆ ಇಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+