ಮೋದಿ ನಾಯಕತ್ವದಲ್ಲಿ ಭಾರತ ಸುರಕ್ಷಿತವಾಗಿದೆ : ಅಮಿತ್ ಶಾ

ನವದೆಹಲಿ, ಫೆಬ್ರವರಿ 26 : 'ಉಗ್ರರ ತರಬೇತಿ ಶಿಬಿರಗಳನ್ನು ನಾಶ ಮಾಡಿರುವುದು ಭಾರತ ಬದಲಾಗಿದೆ ಎಂಬುದಕ್ಕೆ ಉದಾಹರಣೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಸುರಕ್ಷಿತವಾಗಿದೆ' ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದರು.

ನವದೆಹಲಿಯಲ್ಲಿ ಮಂಗಳವಾರ ಮಾತನಾಡಿದ ಅಮಿತ್ ಶಾ, 'ಭಾರತೀಯ ಸೇನಾಪಡೆಗಳ ಶೌರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇಂದಿನ ದಾಳಿಯಿಂದಾಗಿ ನರೇಂದ್ರ ಮೋದಿ ಅವರಂತಹ ಪ್ರಭಾವಿ ವ್ಯಕ್ತಿಯ ನೇತೃತ್ವದಲ್ಲಿ ಭಾರತ ಸುರಕ್ಷಿತವಾಗಿದೆ ಎಂಬ ಸಂದೇಶ ರವಾನೆಯಾಗಿದೆ' ಎಂದರು.

India Safe Under PM Modis Strong leadership : Amit Shah

'ಭಾರತ ಈಗ ಬದಲಾಗಿದೆ ಬದಲಾದ ಭಾರತ ಉಗ್ರವಾದ, ಅವರನ್ನು ಬೆಂಬಲಿಸುವವರು, ಅವರಿಗೆ ಆರ್ಥಿಕ ಸಹಾಯ ನೀಡುವವರನ್ನು ಬೆಂಬಲಿಸುವುದಿಲ್ಲ' ಎಂದು ಅಮಿತ್ ಶಾ ಹೇಳಿದರು.

ಮಂಗಳವಾರ ಮುಂಜಾನೆ ಭಾರತೀಯ ವಾಯುಪಡೆ ವಿಮಾನಗಳು ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿವೆ. 100ಕ್ಕೂ ಹೆಚ್ಚು ಉಗ್ರರು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ.

ಗಡಿನಿಯಂತ್ರಣ ರೇಖೆಯಾಚೆಗಿನ ಬಾಲಕೋಟ್, ಚಕೋತಿ ಮತ್ತು ಮುಜಾಫರಾಬಾದ್ ಪ್ರದೇಶದಲ್ಲಿದ್ದ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ತರಬೇತಿ ಶಿಬಿರಗಳನ್ನು ನಾಶ ಮಾಡಲಾಗಿದೆ.

ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯು ಭಾರತದಲ್ಲಿ ಮತ್ತಷ್ಟು ದಾಳಿಗಳನ್ನು ಮಾಡಲು ಯೋಜನೆ ರೂಪಿಸಿತ್ತು. ಅದಕ್ಕಾಗಿ ಗಡಿಭಾಗದಲ್ಲಿ ತರಬೇತಿಯನ್ನು ನಡೆಸುತ್ತಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+