ಭೂ ಸೇನೆ ಬತ್ತಳಿಕೆಗೆ ಇಸ್ರೇಲ್ ನ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಆಗಸ್ಟ್ 28: ಎಂಆರ್'ಎಸ್ಎಎಂ' ಕ್ಷಿಪಣಿ ವ್ಯವಸ್ಥೆಯನ್ನು ಹೊಂದುವ ಭಾರತೀಯ ಭೂಸೇನೆಯ ಕನಸು ಕೊನೆಗೂ ನನಸಾಗಲಿದೆ.

ಪುಲ್ವಾಮಾದಲ್ಲಿ ಉಗ್ರರ ದಾಳಿ: 3 ಯೋಧರು ಹುತಾತ್ಮ

'ಎಂಆರ್'ಎಸ್ಎಎಂ' (ಮೀಡಿಯಂ ರೇಂಜ್ ಸರ್ಪೇಸ್ ಟು ಏರ್ ಮಿಸೈಲ್ ಸಿಸ್ಟಂ) ಎಂದರೆ ನೆಲದಿಂದ ಆಕಾಶಕ್ಕೆ ಚಿಮ್ಮುವ ಹಾಗೂ 70 ಕಿಲೋಮೀಟರ್ ವ್ಯಾಪ್ತಿಯಲ್ಲಿ ಖಂಡಾಂತರ ಕ್ಷಿಪಣಿ, ಫೈಟರ್ ಜೆಟ್, ಹೆಲಿಕಾಪ್ಟರ್ ಗಳನ್ನು ಹೊಡೆದುರುಳಿಸಬಲ್ಲ ಕ್ಷಿಪಣಿ ವ್ಯವಸ್ಥೆಯಾಗಿದೆ. ಈ ಕ್ಷಿಪಣಿ ವ್ಯವಸ್ಥೆ ಸೇರ್ಪಡೆಯಾದರೆ ಭಾರತೀಯ ಸೇನೆಯ ಬಲ ಹೆಚ್ಚಲಿದೆ.

2020ಕ್ಕೆ ರೆಡಿ

2020ಕ್ಕೆ ರೆಡಿ

2020ರ ಹೊತ್ತಿಗೆ ಈ ವ್ಯವಸ್ಥೆ ಸಿದ್ದವಾಗಲಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್'ಡಿಒ) ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಜತೆ ಸೇರಿ ಈ ತಂತ್ರಜ್ಞಾನವನ್ನು ಭಾರತೀಯ ಸೇನೆಯ ಬತ್ತಳಿಕೆ ಸೇರಿಸಲಿದೆ. ಹಾಗೆ ನೋಡಿದರೆ ಈ ತಂತ್ರಜ್ಞಾನ ಈಗಾಗಲೇ ವಾಯು ಸೇನೆ ಮತ್ತು ನೌಕಾ ಸೇನೆ ಬಳಿ ಇದೆ. ಇದೀಗ ಭೂ ಸೇನೆಗೂ ಈ ತಂತ್ರಜ್ಞಾನ ಹೊಂದಲಿದೆ.

ಸಾಮರ್ಥ್ಯ

ಸಾಮರ್ಥ್ಯ

ನೆಲದಿಂದ ಆಕಾಶಕ್ಕೆ ಚಿಮ್ಮುವ ಹಾಗೂ 70 ಕಿಲೋಮೀಟರ್ ವ್ಯಾಪ್ತಿಯಲ್ಲಿ ಖಂಡಾಂತರ ಕ್ಷಿಪಣಿ, ಫೈಟರ್ ಜೆಟ್, ಹೆಲಿಕಾಪ್ಟರ್, ಡ್ರೋನ್, ಎಡಬ್ಲ್ಯೂಸಿಎಸ್ ವಿಮಾನಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯ ಇದಕ್ಕಿದೆ.

360 ಡಿಗ್ರಿ ಕಾರ್ಯಾಚರಣೆ

360 ಡಿಗ್ರಿ ಕಾರ್ಯಾಚರಣೆ

'ಮೀಡಿಯಂ ರೇಂಜ್ ಸರ್ಪೇಸ್ ಟು ಏರ್ ಮಿಸೈಲ್ ಸಿಸ್ಟಂ' ಎಂದು ಕರೆಯಲಾಗುವ ಎಂಆರ್'ಎಸ್ಎಎಂ ಟ್ರಕ್ ನಂತಿರುವ ಸಂಚಾರಿ ಕ್ಷಿಪಣಿ ವ್ಯವಸ್ಥೆಯಾಗಿದೆ. ಟ್ರಂಕ್ ನಿಂತಿರುವ ಜಾಗದಿಂದ 70 ಕಿಲೋಮೀಟರ್ ಸುತ್ತಳತೆಯಲ್ಲಿ 360 ಡಿಗ್ರಿಯಲ್ಲಿ ಕೋನದಲ್ಲಿ ಬರುವ ಶತ್ರುಗಳ ಕ್ಷಿಪಣಿ, ಫೈಟರ್ ಜೆಟ್, ಹೆಲಿಕಾಪ್ಟರ್, ಡ್ರೋನ್ ಮೊದಲಾದವನ್ನ ಹೊಡೆದುರುಳಿಸಲಿದೆ.

17,000 ಕೋಟಿಯ ಡೀಲ್

17,000 ಕೋಟಿಯ ಡೀಲ್

ಈ ಕ್ಷಿಪಣಿ ವ್ಯವಸ್ಥೆಯನ್ನು ಪಡೆಯಲು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಜತೆ ಡಿಆರ್'ಡಿಒ 17,000 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದೆ. 40 ಕ್ಷಿಪಣಿ ಘಟಕಗಳು ಮತ್ತು 200 ಮಿಸೈಲ್ ಗಳನ್ನು ಪಡೆದುಕೊಳ್ಳುವ ಒಪ್ಪಂದ ಇದಾಗಿದ್ದು ಎರಡೂ ಸಂಸ್ಥೆಗಳು ಒಟ್ಟಾಗಿ ಇವನ್ನು ಅಭಿವೃದ್ಧಿಪಡಿಸಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a major boost to the Indian Armed forces, the advanced medium range surface to air missile or MRSAM system capable of shooting down ballistic missiles, fighter jets and attack helicopters from a range of 70 kilometres will be in place by 2020.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ