ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊರೊನಾವೈರಸ್ ಹೆಚ್ಚಾಗುವುದರ ಹಿಂದಿನ ಕಾರಣ!

|
Google Oneindia Kannada News

ನವದೆಹಲಿ, ಆಗಸ್ಟ್.05: ಕೊರೊನಾವೈರಸ್ ಸೋಂಕು ಹರಡುವಿಕೆಗೆ ಕಡಿವಾಣಕ್ಕೆ ಲಾಕ್ ಡೌನ್ ಕ್ರಮವೇ ಅಸ್ತ್ರವಲ್ಲ. ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸುವುದು ಒಂದು ತಾತ್ಕಾಲಿಕ ಕ್ರಮವಷ್ಟೇ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಸ್ಪಷ್ಟಪಡಿಸಿದೆ.

Recommended Video

ಶ್ರೀರಾಮನ ಭಕ್ತಿಯಲ್ಲಿ ಮುಳುಗಿಹೋದ ಮೋದಿ | Oneindia Kannada

ಭಾರತದಲ್ಲಿ ಎರಡು ಅವಧಿಯ ಲಾಕ್ ಡೌನ್ ಘೋಷಿಸಿದ ನಂತರ ದೇಶ ಇದೀಗ ಅನ್ ಲಾಕ್ ಆಗಿದೆ. ಕೊರೊನಾವೈರಸ್ ಸೋಂಕು ನಿಗ್ರಹಿಸುವ ನಿಟ್ಟಿನಲ್ಲಿ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊವಿಡ್-19 ಸೋಂಕು ತಪಾಸಣೆ ಪ್ರಮಾಣವು ತೀರಾ ಕಡಿಮೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಸಿಹಿಸುದ್ದಿ: 35 ರೂಪಾಯಿಗೆ ಕೊರೊನಾವೈರಸ್ ಸೋಂಕಿತರಿಗೆ ಔಷಧಿ!ಸಿಹಿಸುದ್ದಿ: 35 ರೂಪಾಯಿಗೆ ಕೊರೊನಾವೈರಸ್ ಸೋಂಕಿತರಿಗೆ ಔಷಧಿ!

ವಿಶ್ವದಾದ್ಯಂತ ಕೊರೊನಾವೈರಸ್ ಸೋಂಕಿಗೆ ಲಸಿಕೆ ಕಂಡು ಹಿಡಿಯುವ ನಿಟ್ಟಿನಲ್ಲಿ ಸಂಶೋಧನೆಗಳನ್ನು ನಡೆಸಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ಸಂಶೋಧಕಿ ಸೌಮ್ಯ ಸ್ವಾಮಿನಾಥನ್ ತಿಳಿಸಿದ್ದಾರೆ. ವಿಜಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ವಿಶ್ವದಾದ್ಯಂತ ಕೊರೊನಾವೈರಸ್ ಸೋಂಕು ನಿವಾರಣೆಗೆ 28 ಬಗೆಯ ವ್ಯಾಕ್ಸಿನ್ ಗಳನ್ನು ವೈದ್ಯಕೀಯ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಐದು ಬಗೆಯ ವ್ಯಾಕ್ಸಿನ್ ಗಳು ಎರಡನೇ ಹಂತದ ಪ್ರಯೋಗದಲ್ಲಿವೆ. ಹಾಗೂ 150 ರೀತಿಯ ವ್ಯಾಕ್ಸಿನ್ ಗಳನ್ನು ವೈದ್ಯಕೀಯ ಪ್ರಯೋಗಪೂರ್ವ ಹಂತದಲ್ಲಿ ಸಂಶೋಧಿಸಲಾಗುತ್ತಿದೆ ಎಂದು ಸೌಮ್ಯ ಸ್ವಾಮಿನಾಥನ್ ಅವರು ಮಾಹಿತಿ ನೀಡಿದರು.

ಕೊರೊನಾವೈರಸ್ ತಪಾಸಣೆಯಲ್ಲಿ ಹಿಂದಿದೆಯಾ ಭಾರತ?

ಕೊರೊನಾವೈರಸ್ ತಪಾಸಣೆಯಲ್ಲಿ ಹಿಂದಿದೆಯಾ ಭಾರತ?

ಭಾರತದಲ್ಲಿ ಕೊರೊನಾವೈರಸ್ ಸೋಂಕು ತಪಾಸಣೆಯ ವೇಗವನ್ನು ಹೆಚ್ಚಿಸುವುದರ ಮೂಲಕ ಸೋಂಕು ಹರಡುವಿಕೆ ಪ್ರಮಾಣವನ್ನು ತಗ್ಗಿಸುವ ಕಾರ್ಯವನ್ನು ಮಾಡಬೇಕಿದೆ. ಆದರೆ ಅನ್ಯರಾಷ್ಟ್ರಗಳಿಗೆ ಹೋಲಿಕೆ ಮಾಡಿ ನೋಡಿದ್ದಲ್ಲಿ ಭಾರತವು ಕೊವಿಡ್-19 ಸೋಂಕು ತಪಾಸಣೆಯಲ್ಲಿ ಬಹಳಷ್ಟು ಹಿಂದೆ ಬಿದ್ದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ. ಜರ್ಮನಿ, ತೈವಾನ್, ದಕ್ಷಿಣ ಕೊರಿಯಾ ಮತ್ತು ಜಪಾನ್ ಗಳಿಗೆ ಹೋಲಿಸಿದ್ದಲ್ಲಿ ಭಾರತದಲ್ಲಿ ತಪಾಸಣೆಯ ವೇಗೆ ಕಡಿಮೆಯಾಗಿದೆ ಎಂದು WHO ತಿಳಿಸಿದೆ.

ಮಾನದಂಡ ಇಟ್ಟುಕೊಂಡು ತಪಾಸಣೆ ನಡೆಸಲಾಗುತ್ತಿದೆಯೇ?

ಮಾನದಂಡ ಇಟ್ಟುಕೊಂಡು ತಪಾಸಣೆ ನಡೆಸಲಾಗುತ್ತಿದೆಯೇ?

ಅಮೆರಿಕಾದಲ್ಲಿ ಅತಿಹೆಚ್ಚು ಜನರನ್ನು ಪ್ರತಿನಿತ್ಯ ಕೊರೊನಾವೈರಸ್ ಸೋಂಕು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಅದೇ ರೀತಿ ಭಾರತದಲ್ಲಿ ಆರೋಗ್ಯ ಇಲಾಖೆಗಳು ಒಂದು ನಿರ್ದಿಷ್ಟ ಮಾನದಂಡವನ್ನು ಇಟ್ಟುಕೊಂಡು ಕೊವಿಡ್-19 ತಪಾಸಣೆ ನಡೆಸಬೇಕು. ದಿನಕ್ಕೆ 1 ಲಕ್ಷದಿಂದ 10 ದವರೆಗೂ ಒಂದು ಗುರಿಯನ್ನು ಹೊಂದಬೇಕು. ಇಷ್ಟು ಜನರಲ್ಲಿ ಅದೆಷ್ಟು ಮಂದಿಗೆ ಸೋಂಕು ತಗಲಿರುವುದು ದೃಢವಾಗುತ್ತದೆ ಎನ್ನುವುದನ್ನು ಪತ್ತೆ ಮಾಡುವುದುಕ್ಕೆ ಸುಲಭವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ಸಂಶೋಧಕಿ ಸೌಮ್ಯ ಸ್ವಾಮಿನಾಥನ್ ತಿಳಿಸಿದ್ದಾರೆ.

24 ಗಂಟೆಯಲ್ಲಿ 52,509 ಮಂದಿಗೆ ಕೊರೊನಾ, 857 ಸಾವು24 ಗಂಟೆಯಲ್ಲಿ 52,509 ಮಂದಿಗೆ ಕೊರೊನಾ, 857 ಸಾವು

ಬೆಂಕಿ ಜೊತೆಗೆ ಕಣ್ಣು ಮುಚ್ಚಿಕೊಂಡು ಹೋರಾಡಲಾದೀತೇ?

ಬೆಂಕಿ ಜೊತೆಗೆ ಕಣ್ಣು ಮುಚ್ಚಿಕೊಂಡು ಹೋರಾಡಲಾದೀತೇ?

ದೇಶದಲ್ಲಿ ಕೊರೊನಾವೈರಸ್ ಸೋಂಕು ಪರೀಕ್ಷೆಯಲ್ಲಿ ದೃಢಪಡುತ್ತಿರುವ ಪ್ರಕರಣಗಳ ದರವು ಶೇಕಡಾ ಪ್ರಮಾಣಕ್ಕಿಂತ ಹೆಚ್ಚಿನದಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯ ನಡೆಸಲಾಗುತ್ತಿರುವ ಕೊವಿಡ್-19 ಪರೀಕ್ಷೆಗಳ ಸಂಖ್ಯೆ ಸಾಕಾಗುವುದಿಲ್ಲ. ಸಾಕಷ್ಟು ಸಂಖ್ಯೆಯ ಪರೀಕ್ಷೆಗಳಿಲ್ಲದೆ, ವೈರಸ್ ವಿರುದ್ಧ ಹೋರಾಡುವುದು "ಬೆಂಕಿಯ ಜೊತೆಗೆ ಕಣ್ಣುಮುಚ್ಚಿ ಹೋರಾಡುವಂತಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ಸಂಶೋಧಕಿ ಸೌಮ್ಯ ಸ್ವಾಮಿನಾಥನ್ ವಾಖ್ಯಾನಿಸಿದ್ದಾರೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಸಂಪರ್ಕತಡೆಯನ್ನು ಸೌಲಭ್ಯಗಳು, ಐಸಿಯುಗಳು ಮತ್ತು ಆಮ್ಲಜನಕದ ಸರಬರಾಜುಗಳ ಲಭ್ಯತೆಯನ್ನು ಸರ್ಕಾರಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನೊಂದು ವರ್ಷ ಎಚ್ಚರಿಕೆ ವಹಿಸುವುದು ಅಗತ್ಯ

ಇನ್ನೊಂದು ವರ್ಷ ಎಚ್ಚರಿಕೆ ವಹಿಸುವುದು ಅಗತ್ಯ

ಕೊರೊನಾವೈರಸ್ ಸೋಂಕಿಗೆ ವಿರುದ್ಧವಾಗಿ ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆ ಬಗ್ಗೆ ವಿಜ್ಞಾನಿ ಸಮುದಾಯವು ಅಧ್ಯಯನ ನಡೆಸುತ್ತಿದೆ. ಮುಂದಿನ 12 ತಿಂಗಳು ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕ್ರಮಗಳನ್ನು ಜಾರಿಗೆ ತರುವುದು ನಿರ್ಣಾಯಕವಾಗಿವೆ. ಏಕೆಂದರೆ ಈಗಾಗಲೇ ಕೊರೊನಾವೈರಸ್ ವಿಶ್ವದ ಪ್ರತಿಯೊಂದು ದೇಶಕ್ಕೂ ಹರಡಿದ್ದು, "ಸಮುದಾಯದಲ್ಲಿ ಹಂತವನ್ನು ತಲುಪಿದೆ ಎಂದು ತಿಳಿಸಿದ್ದಾರೆ.

ಜಗತ್ತಿನಾದ್ಯಂತ 7 ಲಕ್ಷ ಕೊವಿಡ್ ಸಾವು, ಯಾವ ದೇಶದಲ್ಲಿ ಎಷ್ಟು?ಜಗತ್ತಿನಾದ್ಯಂತ 7 ಲಕ್ಷ ಕೊವಿಡ್ ಸಾವು, ಯಾವ ದೇಶದಲ್ಲಿ ಎಷ್ಟು?

ಲಾಕ್ ಡೌನ್ ಸರ್ಕಾರಕ್ಕೆ ಸಮಯವನ್ನು ನೀಡುವುದಷ್ಟೇ!

ಲಾಕ್ ಡೌನ್ ಸರ್ಕಾರಕ್ಕೆ ಸಮಯವನ್ನು ನೀಡುವುದಷ್ಟೇ!

ಕೊರೊನಾವೈರಸ್ ವಿರುದ್ಧ ಹೋರಾಡುವುದಕ್ಕೆ ಲಾಕ್ ಡೌನ್ ಒಂದು ತಾತ್ಕಾಲಿಕ ಕ್ರಮವಷ್ಟೇ. ಲಾಕ್ ಡೌನ್ ನಿಂದಾಗಿ ಸಾರ್ವಜನಿಕರು ಹತ್ತಿರವಾಗುವುದು ತಪ್ಪುತ್ತದೆಯಷ್ಟೇ. ಈ ಲಾಕ್ ಡೌನ್ ಅವಧಿಯಲ್ಲಿ ಸರ್ಕಾರಗಳು ಕೊವಿಡ್-19 ನಿಯಂತ್ರಣಕ್ಕೆ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವುದನ್ನು ತೀರ್ಮಾನಿಸಬೇಕು. ಅದನ್ನು ಬಿಟ್ಟು ಲಾಕ್ ಡೌನ್ ನಿಂದಲೇ ಕೊವಿಡ್-19ಗೆ ಕಡಿವಾಣ ಹಾಕುವುದಕ್ಕೆ ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ.

ದೇಶದಲ್ಲಿ ಕೊವಿಡ್-19 ಪ್ರಕರಣ ಮತ್ತು ತಪಾಸಣೆ ಪ್ರಮಾಣ

ದೇಶದಲ್ಲಿ ಕೊವಿಡ್-19 ಪ್ರಕರಣ ಮತ್ತು ತಪಾಸಣೆ ಪ್ರಮಾಣ

ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 19 ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲೇ ದೇಶದಲ್ಲಿ 52509 ಮಂದಿಗೆ ಕೊವಿಡ್-19 ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದೇ ದಿನ 857 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 39795ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 19,08,255ಕ್ಕೆ ಏರಿಕೆಯಾಗಿದ್ದು, ಈ ಪೈಕಿ 12,82,216 ಸೋಂಕಿತರು ಗುಣಮುಖರಾಗಿದ್ದಾರೆ. ಭಾರತದಲ್ಲಿ 5,86,244 ಸಕ್ರಿಯ ಪ್ರಕರಣಗಳಿವೆ. ಇದುವರೆದೂ ದೇಶದಲ್ಲಿ 2,14,84,402 ಜನರನ್ನು ಕೊವಿಡ್-19 ಸೋಂಕು ತಪಾಸಣೆಗೆ ಒಳಪಡಿಸಲಾಗಿದೆ.

English summary
India's Covid-19 Testing Rate Is Lower Than Other Countries, Says WHO Chief Scientist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X