ಭಾರತದಲ್ಲಿ 75 ಲಕ್ಷ ದಾಟಿದ ಕೊರೊನಾ ಸೋಂಕಿತರು
ನವದೆಹಲಿ, ಅಕ್ಟೋಬರ್ 19: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 75 ಲಕ್ಷ ದಾಟಿದೆ. ಇಂದು 55,722 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಒಂದೇ ದಿನದಲ್ಲಿ 579 ಮಂದಿ ಸಾವನ್ನಪ್ಪಿದ್ದಾರೆ. 7,72,055 ಸಕ್ರಿಯ ಪ್ರಕರಣಗಳಿವೆ. 66,63,608 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ 1,14,610 ಮಂದಿ ಮೃತಪಟ್ಟಿದ್ದಾರೆ.

ಭಾನುವಾರ 61,871 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಂತೆ ದೇಶದಲ್ಲಿ 24 ಗಂಟೆಯಲ್ಲಿ 1033 ಜನರ ಸಾವನ್ನಪ್ಪಿದ್ದಾರೆ.
Recommended Video
Political Popcorn with Lavanya : Dr BL Shankar, ಈಗ ಆಗಿರೋದೆ ಸಾಕು ಇನ್ಮೇಲೆ ಚುನಾವಣೆಗೆ ನಿಲ್ಲಲ್ಲಾ!?! Part2












Click it and Unblock the Notifications