ಭಾರತದಲ್ಲಿ 6 ತಿಂಗಳ ನಂತರ ದಾಖಲೆ ಮಟ್ಟದಲ್ಲಿ ಕೊರೊನಾ ಪಾಸಿಟಿವ್ ಕೇಸ್ ಪತ್ತೆ: ಆರೋಗ್ಯ ಸಚಿವಾಲಯದ ಅಂಕಿಅಂಶ ತಿಳಿಯಿರಿ

ಬೆಂಗಳೂರು, ಏಪ್ರಿಲ್ 06: ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಲೇ ಇದೆ. ಆರು ತಿಂಗಳ ಬಳಿಕ ಕಳೆದ 24 ಗಂಟೆಯಲ್ಲಿ ದಾಖಲೆಯ ಮಟ್ಟದಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಅಂದರೆ ಬುಧವಾರ ಒಟ್ಟು 5,335 ಮಂದಿಯಲ್ಲಿ ಹೊಸದಾಗಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. ಕೆಲ ತಿಂಗಳುಗಳ ಬಳಿಕ ಇಷ್ಟು ಗರಿಷ್ಠ ಪ್ರಮಾಣದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

India registered 5,335 New COVID 19 Cases In The Last 24 Hours: Central Health Dept

ಕಳೆದ ವರ್ಷ 2022ರಲ್ಲಿ ಸೆಪ್ಟೆಂಬರ್ ತಿಂಗಳ 23 ರಿಂದ ಹೊಸ ಪ್ರಕರಣಗಳಲ್ಲಿ ಅಷ್ಟಾಗಿ ಏರಿಕೆ ಕಂಡು ಬಂದಿರಲಿಲ್ಲ. ಅದಾದ ಬಳಿಕ ಅಂದರೆ ಆರು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಬುಧವಾರ (ಏಪ್ರಿಲ್ 5)ರಂದೇ ಅತ್ಯಧಿk ಗರಿಷ್ಠ ಮಟ್ಟದ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ. ಇನ್ನೂ ಸಕ್ರಿಯ ಪ್ರಕರಣಗಳ ಸಂಖ್ಯೆ 25,587 ರಷ್ಟಿದೆ.

ಒಂದೇ ದಿನ 13 ಕೊರೊನಾ ಸೋಂಕಿತರು ಸಾವಿಗೀಡಾಗಿದ್ದು, ಅದರಿಂದ ದೇಶದ ಒಟ್ಟು ಸಾವಿನ ಸಂಖ್ಯೆ 5,30,929 ಕ್ಕೆ ಏರಿಕೆ ಆಗಿದೆ. ಕೇರಳ ಮತ್ತು ಪಂಜಾಬ್‌ನಿಂದ ತಲಾ ಒಬ್ಬರು, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ತಲಾ ಇಬ್ಬರು ಹಾಗೂ ಕೇರಳದಿಂದ ಏಳು ಮಂದಿ ಸಾವಿಗೀಡಾಗಿದ್ದಾರೆ ಎಂದು ಗುರುವಾರ ಬೆಳಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ದೈನಂದಿನ ವರದಿ ತಿಳಿಸಿದೆ.

ದೇಶದ ಪಾಸಿಟಿವಿಟಿ ದರ 3.32%

ಇನ್ನೂ ದೇಶದಲ್ಲಿ ಸಕಾರಾತ್ಮಕತೆಯ ದರವು ಶೇಕಡಾ 3.32 ಪ್ರತಿಶತದಷ್ಟಿದೆ ಸಾಪ್ತಾಹಿಕ ಧನಾತ್ಮಕತೆಯ ದರವು ಶೇಕಡಾ 2.89 ಪ್ರತಿಶತದಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.+

India registered 5,335 New COVID 19 Cases In The Last 24 Hours: Central Health Dept

ಕೇಂದ್ರ ಆರೋಗ್ಯ ಸಚಿವಾಲಯ ಹೇಳುವಂತೆ ದೇಸದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4.47 ಕೋಟಿ (4,47,39,054) ಆಗಿದೆ. ಇನ್ನೂ ಸಚಿವಾಲಯದ ವೆಬ್‌ಸೈಟ್ ನಲ್ಲಿ, ಸಕ್ರಿಯ ಪ್ರಕರಣಗಳು ಈಗ ಒಟ್ಟು ಸೋಂಕಿನ ಪ್ರಕರಣಗಳ ಪೈಕಿ ಶೇಕಡಾ 0.06 ಪ್ರತಿಶತದಷ್ಟಿದೆ ಎಂದು ತಿಳಿಸಲಾಗಿದೆ. ಇನ್ನೂ ಖುಷಿತ ವಿಚಾರವೇನೆಂದರೆ ರಾಷ್ಟ್ರೀಯ ಕೋವಿಡ್ ಚೇತರಿಕೆ ದರವು ಶೇಕಡಾ 98.75 ಪ್ರತಿಶತದಷ್ಟು ದಾಖಲಾಗಿದೆ.

ಕೋವಿಡ್ ರೋಗಿಗಳ ಸಾವಿನ ಪ್ರಮಾಣ 1.19%

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ/ಗುಣಮುಖರಾದವರ ಸಂಖ್ಯೆ 4,41,82,538 ಕ್ಕೆ ಹೆಚ್ಚಳವಾಗಿದೆ. ಸೋಂಕಿನಿಂದ ಸಾವಿಗೀಡಾತ್ತಿರುವವರ ಪ್ರಮಾಣವು ಶೇಕಡಾ 1.19 ರಷ್ಟಿದೆ. ದೇಶಾದ್ಯಂತ ಇನ್ನೂ ಕೋವಿಡ್ ಲಸಿಕಾಕರಣ ನಡೆಯುತ್ತಿದೆ. ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಈವರೆಗೆ 220.66 ಕೋಟಿ ಕೋವಿಡ್ ಲಸಿಕೆಗಳನ್ನು ಅರ್ಹರಿಗೆ ನೀಡಲಾಗಿದೆ. ಲಸಿಕೆ ಪಡೆಯದವರು, ಬೂಸ್ಟರ್ ಡೋಸ್ ಪಡೆಯದವರು ಕೂಲಡೇ ಪಡೆಯುವಂತೆ ಆರೋಗ್ಯ ಸಚಿವಾಲಯ ಕೋರಿದೆ.

ಮಹಾರಾಷ್ಟ್ರ ರಾಜ್ಯದ ರಾಜಧಾನಿ ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ (ಬುಧವಾರ) ಹೊಸದಾಗಿ 211 ಪಾಸಿಟಿವ್ ಪ್ರಕರಣಗಳು ವರದಿ ಆಗಿವೆ. ಇಲ್ಲಿ ಒಬ್ಬ ರೋಗಿ ಸಾವಿಗೀಡಾಗಿದ್ದಾರೆ. ಪುಣೆ ಜಿಲ್ಲೆಯ ಪಿಂಪ್ರಿ-ಚಿಂಚ್‌ವಾಡ್ ಕೈಗಾರಿಕಾ ಪಟ್ಟಣದಲ್ಲಿ ಎರಡನೇ ಸಾವು ವರದಿಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ವರದಿ ತಿಳಿಸಿದೆ. ಮಹಾರಾಷ್ಟ್ರದ ಕೊರೊನಾ ವೈರಸ್ ಸಾವಿನ ಪ್ರಮಾಣ ಶೇಕಡಾ 1.82 ರಷ್ಟಿದೆ ಎಂದು ತಿಳಿದು ಬಂದಿದೆ.

India registered 5,335 New COVID 19 Cases In The Last 24 Hours: Central Health Dept

ಮುಂಬೈ- ದೆಹಲಿಯಲ್ಲಿ ದಾಖಲಾದ ಪ್ರಕರಣಗಳ ಮಾಹಿತಿ

ಮುಂಬೈನಲ್ಲಿ ಒಂದೇ ದಿನದಲ್ಲಿ ಗುಣಮುಖರ ಸಂಖ್ಯೆ ದುಪ್ಪಟ್ಟಾಗಿದೆ. ಇಲ್ಲಿ 485 ರೋಗಿಗಳು ಸೋಂಕಿನಿಂದ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಒಇಟ್ಟು ಗುಣಮುಖರ ಸಂಖ್ಯೆ 79,94,545 ಕ್ಕೆ ಏರಿಕೆ ಆಗಿದ್ದು, ಸಕ್ರೀಯ ಪ್ರಕರಣಗಳು 3,874 ರಷ್ಟಿವೆ. ಒಟ್ಟಾರೆ ಮಹಾರಾಷ್ಟ್ರ ರಾಜ್ಯದಲ್ಲಿ ಒಂದೇ ದಿನ 9,002 ಹೊಸ ಕೊರೊನಾ ಸೋಂಕಿನ ಪರೀಕ್ಷೆ ಮಾಡಲಾಗಿದ್ದು, ಇದುವರೆಗೆ ಅಲ್ಲಿನ ಒಟ್ಟು ತಪಾಸಣೆ ಸಂಖ್ಯೆ 8,66,64,387 ಕ್ಕೆ ಹೆಚ್ಚಳವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದಾಖಲಾದ ಕೊರೊನಾ ಪಾಸಿಟಿವ್ ಪ್ರಕರಣಗಳನ್ನು ನೋಡುವುದಾದರೆ, ಇಲ್ಲಿ

ಕಳೆದ 24 ಗಂಟೆಗಳಲ್ಲಿ ಸರಿಸುಮಾರು 509 ಮಂದಿಗೆ ಕೋವಿಡ್ ತಗುಲಿದೆ. ಅದಕ್ಕೆ ಪ್ರತಿಯಾಗಿ 424 ರೋಗಿಗಳ ಮಾತ್ರವೇ ಗುಣಮುಖರಾಗಿದ್ದಾರೆ. ಹೊಸ ಪ್ರಕರಣಗಳಿಗಿಂತ ಚೇತರಿಕೆ ಪ್ರಮಾಣ ದೆಹಲಿಯಲ್ಲಿ ಕಡಿಮೆ ಇದೆ ಆರೋಗ್ಯ ಇಲಾಖೆಯನ್ನು ಚಿಂತೆಗೀಡು ಮಾಡಿದೆ. ಇಲ್ಲಿ ಒಟ್ಟು 1,795 ಸಕ್ರಿಯ ಪ್ರಕರಣಗಳು ಇವೆ ಎಂದು ವರದಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+