India rain: ಇಂದು ದೇಶದ ಈ ಭಾಗಗಳಲ್ಲಿ ಅಬ್ಬರದ ಮಳೆ ಮುಂದುವರೆಯುವ ಮುನ್ಸೂಚನೆ

ನವದೆಹಲಿ, ಆಗಸ್ಟ್‌, 26: ದೇಶದ ಕೆಲವೆಡೆ ಮುಂಗಾರು ಚುರುಕು ಪಡೆದಿದ್ದರೆ, ಇನ್ನು ದಕ್ಷಿಣ ಭಾರತದ ಬುತೇಕ ಭಾಗಗಳಲ್ಲಿ ಮಳೆಯಿಲ್ಲದೆ ಬಿಸಿಲಿನ ವಾತಾವರಣ ಮುಂದುವರೆದಿದೆ. ಪರಿಣಾಮ ಮುಂಗಾರು ನಂಬಿಕೊಂಡು ಬೆಳೆಗಳನ್ನು ಬೆಳೆದಿದ್ದ ಇಲ್ಲಿನ ಅನ್ನದಾತರಿಗೆ ಭರದ ಛಾಯೆ ಆವರಿಸುವ ಆತಂಕ ಎದುರಾಗಿದೆ. ಮತ್ತೊಂದೆಡೆ ಉತ್ತರ ಭಾರತದಲ್ಲಿ ಸುನಾಮಿಯಂತಹ ಮಳೆಯಾಗುತ್ತಿದ್ದು, ಇಂದು ಕೂಡ ಈ ಭಾಗದಲ್ಲಿ ಅಬ್ಬರದ ಮಳೆ ಮುಂದುವರೆಯಲಿದೆ ಎನ್ನುವ ಮುನ್ಸೂಚನೆ ಇದೆ.

ದೇಶದಾದ್ಯಂತ ಮಾನ್ಸೂನ್ ತಗ್ಗುತ್ತಿದೆ. ಕೆಲವೆಡೆ ಉತ್ತಮ ಮಳೆ ಸುರಿದಿದ್ದರೂ ಇನ್ನೂ ಹಲವೆಡೆ ತಗ್ಗಿದೆ. ಖಾಸಗಿ ಏಜೆನ್ಸಿ ಸ್ಕೈಮೆಟ್ ಪ್ರಕಾರ, ಫಿರೋಜ್‌ ಪುರ, ಕರ್ನಾಲ್, ಮೀರತ್, ಅಜಂಗಢ, ಪಾಟ್ನಾ, ದಿಯೋಗರ್ ಡೈಮಂಡ್ ಹಾರ್ಬರ್ ಮತ್ತು ಆಗ್ನೇಯದಿಂದ ಪೂರ್ವ ಮಧ್ಯ ಬಂಗಾಳ ಕೊಲ್ಲಿಯ ಮೂಲಕ ಮಾನ್ಸೂನ್ ಹಾದುಹೋಗುತ್ತಿದೆ. ಸಮುದ್ರ ಮಟ್ಟದಿಂದ 3.1ರಿಂದ 7.6 ಕಿಲೋ ಮೀಟರ್‌ ಎತ್ತರವಿರುವ ಚಂಡಮಾರುತದ ಪರಿಚಲನೆಯು ಪಶ್ಚಿಮ ಉತ್ತರ ಪ್ರದೇಶದ ದಕ್ಷಿಣದ ಕಡೆಗೆ ಸಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

India rain: Heavy rainfall forecast in these parts of the country today

ಇನ್ನು ನಿನ್ನೆ ಪೂರ್ವ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಅಬ್ಬರದ ಮಳೆ ಸುರಿದಿದೆ. ಮತ್ತೊಂದೆಡೆ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಉತ್ತರ ಪಂಜಾಬ್, ಪಶ್ಚಿಮ ಉತ್ತರ ಪ್ರದೇಶ, ಛತ್ತೀಸ್‌ಗಢ, ಮಧ್ಯಪ್ರದೇಶ, ಗುಜರಾತ್‌ನ ಕೆಲವು ಭಾಗಗಳು, ಕರಾವಳಿ ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆ ಬಿದ್ದಿದೆ ಎಂದು ತಿಳಿದುಬಂದಿದೆ.

ಇಂದು ಕೂಡ ಉತ್ತರ ಭಾರತದ ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಬ್ಬರದ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎನ್ನುವ ಮಾಹಿತಿಯನ್ನು ರವಾನಿಸಿದೆ.

ಹಿಮಾಚಲ ಪ್ರದೇಶ, ಈಶಾನ್ಯ ಭಾರತ, ಒಡಿಶಾ, ಕರಾವಳಿ ಆಂಧ್ರಪ್ರದೇಶ, ಛತ್ತೀಸ್‌ಗಢ, ಕೊಂಕಣ ಹಾಗೂ ಗೋವಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಾಧಾರಣ ಮಳೆ ಸುರಿದಿದೆ. ಇನ್ನು ಉತ್ತರಾಖಂಡ್, ಸಿಕ್ಕಿಂ, ಮಧ್ಯ ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಸಾಧಾರಣ ಮಳೆಯಾಗಿದ್ದು, ಕೆಲವು ಸ್ಥಳಗಳಲ್ಲಿ ಮಾತ್ರ ಅಬ್ಬರದ ಮಳೆಯಾಗಿದೆ. ಹಾಗೆಯೇ ಇಂದು ಕೂಡ ಈ ಭಾಗಗಳಲ್ಲಿ ಮಳೆರಾಯ ರೌದ್ರಾವತಾರ ತಾಳಲಿದ್ದಾನೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+