ಪಾಕ್ ವಿರುದ್ಧ ಕ್ರಿಕೆಟ್ ಆಡದಿರುವುದು ನಾವು ಶರಣಾಗುವುದಕ್ಕಿಂತಲೂ ಕೀಳು: ತರೂರ್

ನವದೆಹಲಿ, ಫೆಬ್ರವರಿ 22: ಪುಲ್ವಾಮಾ ದಾಳಿಗೆ ಪಾಕಿಸ್ತಾನವೇ ಹೊಣೆಯಾಗಿರುವುದರಿಂದ ಮುಂಬರುವ ವಿಶ್ವಕಪ್ ಕ್ರಿಕೆಟ್‌ನಲ್ಲಿ ಅದರೊಂದಿಗೆ ಪಂದ್ಯ ಆಡಬಾರದು ಎಂಬ ಒತ್ತಾಯಗಳು ಕೇಳಿಬರುತ್ತಿವೆ.

ಭಾರತೀಯ ಕ್ರಿಕೆಟ್ ಮಂಡಳಿ ಸಹ ಪಾಕಿಸ್ತಾನದೊಂದಿಗೆ ಮುಖಾಮುಖಿಯಾಗದಂತೆ ವೇಳಾಪಟ್ಟಿ ಬದಲಿಸಲು ಒತ್ತಡ ಹೇರುವ ಪ್ರಯತ್ನ ನಡೆಸಿದೆ. ಆದರೆ ಸಂಸದ ಶಶಿ ತರೂರ್ ಉಭಯ ತಂಡಗಳ ನಡುವೆ ವಿಶ್ವಕಪ್ ಕ್ರಿಕೆಟ್ ಪಂದ್ಯ ನಡೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೆ ಅವರು ಸಮರ್ಥನೀಯ ಕಾರಣವನ್ನೂ ನೀಡಿದ್ದಾರೆ.

India pakistan world cup cricket pulwama attack shashi tharoor it would be worse than a surrender

'1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ವಿಶ್ವಕಪ್‌ನಲ್ಲಿ ಆಡಿತ್ತು. ಮತ್ತು ಪಂದ್ಯವನ್ನು ಕೂಡ ಗೆದ್ದುಕೊಂಡಿತ್ತು. ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದು ಕೇವಲ ಎರಡು ಅಂಕಗಳನ್ನು ಕಳೆದುಕೊಳ್ಳುವ ವಿಚಾರವಾಗಲಾರದು. ಅದು ಶರಣಾಗತಿಯಾಗುವುದಕ್ಕಿಂತಲೂ ಹೀನಾಯವಾದದ್ದು. ಇದೊಂದು ರೀತಿ ನಾವು ಹೋರಾಟ ಮಾಡದೆಯೇ ಸೋತಂತೆ' ಎಂದು ತರೂರ್ ಹೇಳಿದ್ದಾರೆ.

ನಾವು ಕ್ರಿಕೆಟ್‌ಅನ್ನು ಬೇರೆ ಕ್ರಮಗಳಿಗೆ ಪರ್ಯಾಯವಾಗಿ ಬಳಸಿಕೊಳ್ಳಬಾರದು. ಸರ್ಕಾರ ಅದಕ್ಕೆ ಬದಲಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಪ್ರದರ್ಶಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+