India vs Pakistan: ಬ್ಲ್ಯಾಕ್‌ಔಟ್ ಮಾಡಿ ಪಾಕ್ ಕಣ್ಣಿಗೆ ಮಣ್ಣೆರಚಿದ ಭಾರತ
ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾನ ಮತ್ತೆ ಬಾಲಬಿಚ್ಚಿದೆ. ಭಾರತದ ಮೇಲೆ ದಾಳಿ ನಡೆಸಿದ ಪಾಕ್‌ಗೆ ತಕ್ಕ ಉತ್ತರ ನೀಡಿದೆ. ಪಾಕಿಸ್ತಾನದ ಡ್ರೋನ್ ಹಾಗೂ ಫೈಟರ್ ಜೆಟ್‌ಗಳನ್ನು ಭಾರತ ಉಡೀಸ್ ಮಾಡಿದೆ. ತಂಟೆಗೆ ಬಂದ ಪಾಕಿಸ್ತಾನಕ್ಕೇ ನುಗ್ಗಿ ಭಾರತ ಬಗ್ಗುಬಡಿಯಲಾರಂಭಿಸಿದೆ. ಇನ್ನು ಗಡಿ ಭಾಗದಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗಿರುವುದರಿಂದ ಪಾಕಿಸ್ತಾನದ ಕಣ್ಣಿಗೆ ಮಣ್ಣೆರಚಲು ಹಲವೆಡೆ ಬ್ಲ್ಯಾಕ್‌ಔಟ್ ಘೋಷಿಸಲಾಗಿದೆ.
ಪಾಕಿಸ್ತಾನವು ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿ ಗಡಿಯಲ್ಲಿ ತನ್ನ ಕುತಂತ್ರ ಬುದ್ಧಿ ತೋರುತ್ತಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಹಲವೆಡೆ ಬ್ಲ್ಯಾಕ್‌ಔಟ್ ಘೋಷಿಸಲಾಗುತ್ತಿದೆ. ಈ ಬಗ್ಗೆ ಜನರಿಗೆ ಮುನ್ಸೂಚನೆ ನೀಡಲಾಗುತ್ತಿದ್ದು, ಎಲ್ಲಡೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಪಾಕ್ ಕಣ್ಣಿಗೆ ಮಣ್ಣೆರಚುತ್ತಿದೆ. ಜಮ್ಮುಕಾಶ್ಮೀರದ ಪೂಂಚ್ ಸೈರನ್ ಶಬ್ದ ಕೇಳಿದ ನಂತರ ಸಂಪೂರ್ಣ ವಿದ್ಯುತ್ ಕಡಿತಗೊಳಿಸಲಾಗಿದೆ.

ಈ ರೀತಿ ಸಂಪೂರ್ಣ ಬ್ಲ್ಯಾಕ್‌ಔಟ್ ಮಾಡುವುದರಿಂದ ಎಲ್ಲೆಡೆ ಕಗ್ಗತ್ತಲು ಆವರಿಸುತ್ತದೆ. ಇದರಿಂದ ಪಾಕಿಸ್ತಾನದ ದಾಳಿಗಳನ್ನು ತಪ್ಪಿಸಬಹುದು ಎಂದು ಈ ಪ್ಲ್ಯಾನ್ ಮಾಡಲಾಗಿದೆ. ಪಂಜಾಬ್‌ನ ಜಲಂಧರ್‌ನಲ್ಲಿ ಬ್ಲ್ಯಾಕ್‌ಔಟ್ ಮಾಡಲಾಗಿದೆ. ಜಮ್ಮುವಿನ ನಿವಾಸಿಗಳು, ಪಾಕಿಸ್ತಾನದಿಂದ ಹಾರಿಸಲಾದ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಸುರಿಮಳೆಯಿಂದ ಹೆಚ್ಚು ಭೀತಿ ಉಂಟಾಗಿದೆ ಎಂದಿದ್ದಾರೆ. ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಕಾಶ್ಮೀರದ ಹೆಚ್ಚಿನ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ವರದಿಯಾಗಿದೆ.
ಜಮ್ಮು, ಪಠಾಣ್‌ಕೋಟ್ ಮತ್ತು ಉಧಂಪುರದಲ್ಲಿರುವ ಸೇನಾ ನೆಲೆಗಳನ್ನು ಇಂದು ಜಮ್ಮು ಮತ್ತು ಕಾಶ್ಮೀರದ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಮೂಲದ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಗುರಿಯಾಗಿಸಿಕೊಂಡಿವೆ. ಈ ಪ್ರಯತ್ನವನ್ನು ತ್ವರಿತವಾಗಿ ತಟಸ್ಥಗೊಳಿಸಲಾಯಿತು. ಯಾವುದೇ ಸಾವುನೋವುಗಳು ಅಥವಾ ವಸ್ತು ನಷ್ಟಗಳು ವರದಿಯಾಗಿಲ್ಲ. ಭಾರತವು ತನ್ನ ಸಾರ್ವಭೌಮತ್ವವನ್ನು ರಕ್ಷಿಸಲು ಮತ್ತು ತನ್ನ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಭಾರತೀಯ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.
ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (ಬಿಸಿಎಎಸ್) ದೇಶಾದ್ಯಂತದ ಎಲ್ಲ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ಭದ್ರತಾ ಕ್ರಮಗಳನ್ನು ಹೆಚ್ಚಿಸುವಂತೆ ಸೂಚನೆ ನೀಡಿದೆ. ಎಲ್ಲಾ ವಿಮಾನ ನಿಲ್ದಾಣಗಳಲ್ಲಿನ ಎಲ್ಲಾ ಪ್ರಯಾಣಿಕರು ಸೆಕೆಂಡರಿ ಲ್ಯಾಡರ್ ಪಾಯಿಂಟ್ ಚೆಕ್‌ಗೆ ಒಳಗಾಗುತ್ತಾರೆ. ಟರ್ಮಿನಲ್ ಕಟ್ಟಡಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಏರ್ ಮಾರ್ಷಲ್ ಅವರನ್ನು ಅದಕ್ಕೆ ಅನುಗುಣವಾಗಿ ನಿಯೋಜಿಸುವುದಾಗಿ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಗಡಿ ಪರಿಸ್ಥಿತಿಯನ್ನು ಅವಲೋಕಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಡಿ ಕಾವಲು ಪಡೆಗಳ ಮಹಾನಿರ್ದೇಶಕರೊಂದಿಗೆ ಮಾತನಾಡಿದ್ದಾರೆ. ವಿಮಾನ ನಿಲ್ದಾಣದ ಭದ್ರತೆಗೆ ಸಂಬಂಧಿಸಿದಂತೆ ಅವರು ಸಿಐಎಸ್‌ಎಫ್ ಮಹಾನಿರ್ದೇಶಕರ ಜೊತೆಯೂ ಮಾತನಾಡಿದ್ದಾರೆ.












Click it and Unblock the Notifications