8,000 'ಎಕ್ಸ್ ಖಾತೆ'ಗಳ ನಿರ್ಬಂಧಕ್ಕೆ ಭಾರತ ಸರ್ಕಾರ ಆದೇಶ: India-Pakistan War
ನವದೆಹಲಿ, ಮೇ 09: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತ-ಪಾಕಿಸ್ತಾನ ಯುದ್ಧ ನಡೆಯುತ್ತಿದೆ. ಇತ್ತ ಭಾರತ ಸರ್ಕಾರವು ಸಾಮಾಜಿಕ ಮಾಧ್ಯಮ ವೇದಿಕೆ X (ಹಿಂದೆ Twitter) ಭಾರತದಲ್ಲಿ 8,000 ಕ್ಕೂ ಹೆಚ್ಚು ಖಾತೆಗಳನ್ನು ನಿರ್ಬಂಧಿಸುವಂತೆ ಭಾರತ ಸರ್ಕಾರ ಆದೇಶ ಮಾಡಿದೆ. ಈ ಕುರಿತು ಕಂಪನಿ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರದ ಈ ನಿರ್ದೇಶನವನ್ನು ಪಾಲಿಸುತ್ತಿರುವುದಾಗಿ ಕಂಪನಿ ಹೇಳಿಕೊಂಡಿದೆ.
ಈ ಕುರಿತು ಎಕ್ಸ್ ಕಂಪನಿಯು ಗುರುವಾರ ಹೇಳಿಕೆ ಬಿಡುಗಡೆ ಮಾಡಿದೆ. ಸರ್ಕಾರದ ಆದೇಶಗಳಲ್ಲಿ ಪ್ರಮುಖ ಬಳಕೆದಾರರು ಮತ್ತು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳಿಗೆ ಸೇರಿದ ಖಾತೆಗಳನ್ನು ನಿರ್ಬಂಧಿಸುವುದು ಸೇರಿದಂತೆ ಸಾವಿರಾರು ಎಕ್ಸ್ ಖಾತೆಗಳಿಗನ್ನು ನಿರ್ಬಂಧಿಸುವಂತೆ ಕೋರಲಾಗಿದೆ. ಸಿಕ್ಕ ಸಿಕ್ಕ ಎಕ್ಸ್ ಖಾತೆಗಳನ್ನು ನಿರ್ಬಂಧಿಸುವಂತೆ ಹೇಳದೇ ನಿರ್ದಿಷ್ಟ ಖಾತೆಗಳ ವಿರುದ್ಧ ಭಾರತ ಸಮರ ಸಾರಿಗೆ. ಈ ಆದೇಶದ ಹಿಂದಿನ ತಾರ್ಕಿಕತೆಯನ್ನು ಒಪ್ಪಲು ಸಾಧ್ಯವಿಲ್ಲ. ಇದು ವಾಕ್ ಸ್ವಾತಂತ್ರ್ಯದ ವಿರುದ್ಧ ಎಂದು ಕಂಪನಿ ಹೇಳಿಕೊಂಡಿದೆ.

ಸದ್ಯ 8000 ಎಕ್ಸ್ ಖಾತೆಗಳ ಪ್ರವೇಶ ನಿರ್ಬಂಧಕ್ಕೆ ಕಂಪನಿಗೆ ಯಾವುದೇ ಪುರಾವೆಗಳು ಇಲ್ಲವೇ ತಕ್ಕ ಸಮರ್ಥನೆಗಳು ಲಭ್ಯವಾಗಿಲ್ಲ. ನಿಷೇಧಿಸಲು ಯಾವ ಪೋಸ್ಟ್‌ಗಳು ಭಾರತೀಯ ಕಾನೂನನ್ನು ಉಲ್ಲಂಘಿಸಿವೆ ಎಂದು ಕೇಂದ್ರ ಸರ್ಕಾರ ತನ್ನ ನಿರ್ದೇಶನದಲ್ಲಿ ಹೇಳಿಲ್ಲ. ಆದರೆ ಸದ್ಯಕ್ಕೆ ಇಷ್ಟು ಖಾತೆ ನಿರ್ಬಂಧಕ್ಕೆ ಕಂಪನಿ ಮುಂದಾಗಿದೆ ಎಂದು ತಿಳಿಸಿದೆ.
ಸರ್ಕಾರ ಆದೇಶ ಪಾಲಿಸಿದಿದ್ದರೇ ಮುಂದೇನು?
ಮುಂದಿನ ಕಾನೂನು ಪರಿಣಾಮಗಳ ಬಗ್ಗೆ ಕಂಪನಿಯು ಕಳವಳ ವ್ಯಕ್ತವಾಗಿದೆ. ಕೇಂದ್ರ ಸರ್ಕಾರದ ಆದೇಶಗಳನ್ನು ಪಾಲಿಸಲು ವಿಫಲವಾದರೆ "ಕಂಪನಿಯ ಸ್ಥಳೀಯ ಉದ್ಯೋಗಿಗಳಿಗೆ ಗಮನಾರ್ಹ ದಂಡ ಮತ್ತು ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯು ಇದೆ. ಖಾತೆಗಳ ಸಂಪೂರ್ಣ ನಿಷೇಧ ಆಗುತ್ತಾ ಇಲ್ಲವೇ ಎಂಬುದು ಅನುಮಾನವಾಗಿದೆ. ಈ ಕ್ರಮವು ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ದುರ್ಬಲಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಆದರೆ ಭಾರತ ಸರ್ಕಾರ ರಾಷ್ಟ್ರದ ಹಿತ ದೃಷ್ಟಿಯಿಂದ ಇಂಥದ್ದೊಂದು ಆದೇಶ ಮಾಡಿರುವುದು ಗೊತ್ತಾಗಿದೆ.
ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಸಹಿತ ಭಾರತದಲ್ಲಿ ಎಕ್ಸ್ ಖಾತೆ ಪ್ರವೇಶಿಸುವಂತೆ ನೋಡಿಕೊಳ್ಳುವುದು ಆದ್ಯತೆ ಕರ್ತವ್ಯವಾಗಿದೆ. ಹೀಗಾಗಿ ಈ ಕೆಲಸ ಕಂಪನಿ ಮಾಡಲಿದೆ. ಭಾರತಿಯ ಮಾಹಿತಿ ತಿಳಿಯುವಂತೆ ಮಾಡವುದು ಅತ್ಯಗತ್ಯವಾಗಿದೆ. ಈ ಮೂಲಕ ಕಂಪನಿಯು ಸಾವಿರಾರು ಖಾತೆಗಳ ಪ್ರವೇಶ ಪೋಸ್ಟಗಳಿಗೆ ಅವಕಾಶ ನೀಡದಂತೆ ಮಾಡಲಿದೆ.












Click it and Unblock the Notifications