Global Temperature: ಭಾರತ ಮಾತ್ರವಲ್ಲ 'ಬೆಂಕಿ'ಯಂತಾದ ಇಡೀ ಭೂಮಿ: ಜಾಗತಿಕ ಸಮಸ್ಯೆಯಾಗಿ ಕಾಡುತ್ತಿದೆ 'ತಾಪಮಾನ'
ಬೆಂಗಳೂರು, ಮೇ 01: ಬೇಸಿಗೆ ಬಂತೆಂದರೆ ಎಲ್ಲಿ ನೋಡಿದರೂ ಸಹ ತಾಪಮಾನ, ಬಿಸಲಿನ ಧಗೆ ಹೆಚ್ಚಾಗಿದ್ದರ ಕುರಿತು ಚರ್ಚೆ ಯಾಗುತ್ತಿದೆ. ಅಚ್ಚರಿ ಎಂದರೆ ಕೇವಲ ಭಾರತ ಮಾತ್ರವಲ್ಲದೇ ಜಾಗತಿಕವಾಗಿ ತಾಪಾಮಾನದ ಕಾವು ಜನರು ಬದುಕನ್ನು ಕಾಡಲು ಶುರು ಮಾಡಿದೆ. ಏಪ್ರಿಲ್ ಕೊನೆಯ ವಾರ ವಿಶ್ವದಲ್ಲಿ ಅತ್ಯಧಿಕ ತಾಪಮಾನ ದಾಖಲಾಗಿದೆ.
ಭಾರತದಲ್ಲಿ ಕಳೆದ ವರ್ಷ (2023) ಉತ್ತರದ ರಾಜ್ಯಗಳಲ್ಲಿ ಇನ್ನಿಲ್ಲದ ತಾಪಮಾನ ಕಾಡಿತ್ತು. ಈ ಭಾರಿ ದಕ್ಷಿಣ ರಾಜ್ಯಗಳಲ್ಲಿ ವಾಡಿಕೆಗಿಂತ ಅತ್ಯಧಿಕ ತಾಪಮಾನ ದಾಖಲಾಗುವ ಮೂಲಕ ಅನಾರೋಗ್ಯ ಹಾಗೂ ಹಲವರ ಸಾವಿಗೂ ಕಾರಣವಾಗಿದೆ. ಇದೇ ರೀತಿ ವಿಶ್ವದ ಇತರ ದೇಶಗಳಲ್ಲೂ ಉಷ್ಣಾಂಶ ಹೆಚ್ಚಾಗಿರುವ ಬಗ್ಗೆ ವಿಶ್ವ ಹವಾಮಾನ ಸಂಸ್ಥೆ (world meteorological organization) ಕಳವಳ ವ್ಯಕ್ತಪಡಿಸಿದೆ.

ಭಾರತ, ಸಿಂಗಾಪೂರ್, ಲಾವೋಸ್, ವಿಯೇಟ್ನಾಂ, ಥೈಲಾಂಡ್, ಮೈನ್ಮಾರ್, ಬಾಂಗ್ಲಾದೇಶ, ಚಿನಾ, ನೇಪಾಳ, ಇಂಡೋನೇಷಿಯಾ, ಚೀನಾ, ಫಿಲಿಫೈನ್ಸ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ 37 ಡಿಗ್ರಿ ಸೆಲ್ಸಿಯಸ್ ನಿಂದ 45 ಡಿಗ್ರಿ ಸೆಲ್ಸಿಯಸ್ ವರೆಗೆ ಸರಾಸರಿ ತಾಪಮಾನ ದಾಖಲಾಗಿದೆ ಎಂದು ವರದಿ ಮಾಹಿತಿ ನೀಡಿದೆ.
ಈ ಮೂಲಕ ಜಾಗತಿಕಾವಾಗಿ ಗರಿಷ್ಠ ತಾಪಮಾನವು ಹೆಚ್ಚಾಗುತ್ತಿದೆ. ಇದೊಂದು ಸಮಸ್ಯೆಯಾಗಿ ಜನರ ಮೇಲೆ ಅನಾರೋಗ್ಯ ಪರಿಣಾಮ ಬೀರುತ್ತಿದೆ. ಇಂದಿನ ಪರಿಸ್ಥಿತಿ ನೋಡಿದರೆ, ಭವಿಷ್ಯದಲ್ಲಿ ಹವಾಮಾನದಲ್ಲಿ ಬದಲಾವಣೆ, ಅಧಿಕ ಉಷ್ಣಾಂಶ, ಶಾಖದ ಅಲೆಯು ಮನುಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಮುನ್ಸೂಚನೆ ನೀಡಿದೆ.
ತಾಪಮಾನ ಹೆಚ್ಚಳಕ್ಕೆ ಕಾರಣಗಳು
ಬಹುತೇಕ ರಾಷ್ಟ್ರಗಳಲ್ಲಿ ಹಿಂದಿನ ವರ್ಷಗಳಂತೆ ಇತ್ತೀಚಿನ ದಿನಗಳಲ್ಲಿ ಸಮರ್ಪಕ ಮಳೆ ಬರುತ್ತಿಲ್ಲ. ನಗರೀಕರಣ ಪ್ರಭಾವದಿಂದ ಮಳೆ ನೀರು ಪುನಃ ಬಳಕೆ ಆಗುವುದಾಗಲಿ, ಇಂಗಿಸುವ ಪ್ರಕ್ರಿಯೆ ಆಗುತ್ತಿಲ್ಲ. ಮರ ಗಿಡಗಳ ಕಡಿತದಿಂದ ಹಸಿರಿನ ನಾಶವಾಗುತ್ತಿದೆ. ಎಚ್ಚೆತ್ತುಕೊಳ್ಳದ ಜನರು ಕೆರೆ, ಕಟ್ಟೆಗಳನ್ನು ವಶಕ್ಕೆ ಪಡೆದು, ಕಾಂಕ್ರೀಟು, ರಸ್ತೆ, ಮನೆ ನಿರ್ಮಿಸುತ್ತಿದ್ದಾರೆ. ಜಲಾಶಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಹೀಗೆ ನಾನಾ ಕಾರಣಗಳಿಂದ ಬಿಸಿಲಿಗೆ ಭೂಮಿಯ ಕಾಯುವಿಕೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಈ ರೀತಿಯ ಬೆಳವಣಿಗೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಕಾರಣಕ್ಕೆ ಜಾಗತಿಕವಾಗಿ ಭೂಮಿಯಲ್ಲಿ ಅತ್ಯಧಿಕ ತಾಪಮಾನ ದಾಖಲಾಗುತ್ತಿದೆ.
ಜಾಗತಿಕ ತಾಪಮಾನ ವರದಿ
ಬೇಸಿಗೆ ತಿಂಗಳಾದ ಏಪ್ರಿಲ್ ನಲ್ಲಿ ಭಾರತದಲ್ಲಿ ಸರಾಸರಿ 45.5 ಡಿಗ್ರಿ ಸೆಲ್ಸಿಯಸ್, ಥೈಲಾಂಡ್‌ನಲ್ಲಿ 44.6, ಸಿಂಗಾಪೂರ್ 36.7, ಲಾವೋಸ್ 42.4, ವಿಯೇಟ್ನಾಂ 42.4, ಮೈನ್ಮಾರ್ 45, ಬಾಂಗ್ಲಾದೇಶ 42.8, ಚಿನಾ 41.9, ನೇಪಾಳ 42.9, ಇಂಡೋನೇಷಿಯಾ 33, ಫಿಲಿಫೈನ್ಸ್ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದರಿಂದ ಭೂಮಿಯು ದಿನೇ ದಿನೇ ಬಿಸಲಿನಿಂದ ಕಾಯುತ್ತಿದೆ. ಪರಿಣಾಮ ಜನರಿಗೆ ವಿಪರೀತ್ ಸೆಕೆ ಆಗಲಿದೆ.
ಭಾರತದಲ್ಲಿ ಹೆಚ್ಚಾದ ಶಾಖದ ಅಲೆ
ಸದ್ಯ ಭಾರತದಲ್ಲಿ ಫೆಬ್ರವರಿ ಆರಂಭದಿಂದಲೇ ವ್ಯಾಪಕ ಬಿಸಲಿನ ಅನುಭವವಾಗುತ್ತಿದೆ. ದಕ್ಷಿಣ ರಾಜ್ಯಗಳಲ್ಲಿ ಅಲ್ಲಿ ಮಳೆ ಬಂದ ಪರಿಣಾಮ ಬಿಸಲಿನ ಕಾವು ಆ ಭಾಗದಲ್ಲಿ ಅಷ್ಟಾಗಿ ಕಂಡು ಬಂದಿಲ್ಲ ಎನ್ನಬಹುದು. ಆದರೆ ಈ ವರ್ಷ ಭಾರತದ ದಕ್ಷಿಣ ರಾಜ್ಯಗಳು ಅತ್ಯಧಿಕ ಶಾಖದ ಅಲೆಗೆ ಸಾಕ್ಷಿಯಾಗಿವೆ. ವರ್ಷದಿಂದ ವರ್ಷಕ್ಕೆ ಬಿಸಲಿನ ಪ್ರಮಾಣ ಹೆಚ್ಚಾಗುತ್ತಿರುವ ಬಗ್ಗೆ ಹವಾಮಾನ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.












Click it and Unblock the Notifications