ಭಾರತವು ನಿರ್ಭೀತ, ನಿರ್ಣಾಯಕ ಸರ್ಕಾರ ಹೊಂದಿದೆ: ರಾಷ್ಟ್ರಪತಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದು, ನಾಳೆ ಕೇಂದ್ರ ಬಜೆಟ್‌ಗೆ ಒಂದು ದಿನ ಮುಂಚಿತವಾಗಿ ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ.
ನವದೆಹಲಿ, ಜನವರಿ 31: ಬಹುನಿರೀಕ್ಷೆತ ಭಾರತ ಸರ್ಕಾರದ ಬಜೆಟ್ ಅಧಿವೇಶನ ಮಂಗಳವಾರ ಆರಂಭವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತಕ್ಕೆ ನಿರ್ಭೀತ ನಿರ್ಣಾಯಕ ಸರ್ಕಾರವನ್ನು ಹೊಂದಿದೆ ಎಂದು ಹೇಳಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದು, ನಾಳೆ ಕೇಂದ್ರ ಬಜೆಟ್‌ಗೆ ಒಂದು ದಿನ ಮುಂಚಿತವಾಗಿ ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು. ಬಜೆಟ್ ಅಧಿವೇಶನದ ಮೊದಲ ಭಾಗವು ಫೆಬ್ರವರಿ 13 ರಂದು ಮುಕ್ತಾಯಗೊಳ್ಳಲಿದ್ದು, ಎರಡನೇ ಭಾಗವು ಮಾರ್ಚ್ 13 ರಿಂದ ಏಪ್ರಿಲ್ 6 ರವರೆಗೆ ನಡೆಯಲಿದೆ.
ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಶ್ರೀನಗರದಿಂದ ವಿಮಾನಗಳು ವಿಳಂಬವಾಗಿರುವ ಕಾರಣ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಕಾಂಗ್ರೆಸ್ ಸಂಸದರು ರಾಷ್ಟ್ರಪತಿ ಭಾಷಣಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಪಕ್ಷದ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ಸೋಮವಾರ ಭಾರತ್ ಜೋಡೋ ಯಾತ್ರೆಯ ಸಮಾರೋಪ ಕಾರ್ಯಕ್ರಮಗಳಿಗಾಗಿ ಕಾಂಗ್ರೆಸ್ ನಾಯಕರು ಮತ್ತು ಸಂಸದರು ಶ್ರೀನಗರದಲ್ಲಿದ್ದಾರೆ.

ಈ ಸರ್ಕಾರವು ಭಯೋತ್ಪಾದನೆ, ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿದೆ. ಡಿಜಿಟಲ್ ಆರ್ಥಿಕತೆಗೆ ಒತ್ತು ನೀಡಿದ್ದು, ಪ್ರಗತಿಪರ ಕಾರ್ಯಗಳಿಗೆ ಬಹುದೊಡ್ಡ ಹೆಜ್ಜೆ ಇಟ್ಟಿದೆ. ಆದಿವಾಸಿಗಳಿಗೆ ಬೆಂಬಲವಾಗಿ ನಿಂತಿರುವ ಸರ್ಕಾರ ಅವರ ಏಳಿಗೆಗೆ ಮಂಡಳಿಗಳನ್ನು ರಚಿಸಲಾಗಿದೆ. ಎಂದು ಹೇಳಿದ್ದಾರೆ.
ಸಾಮಾಜಿಕ ನ್ಯಾಯ ಎತ್ತಿಹಿಡಿದಿರುವ ಸರ್ಕಾರವು ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಂಡಿದೆ. ನಾರಿಶಕ್ತಿ ಹೆಸರಿನಲ್ಲಿ ಮಹಿಳಾ ಸಬಲೀಕರಣಕ್ಕೆ ಕಂಕಣಬದ್ಧವಾಗಿದೆ. ಮಕ್ಕಳು, ಮಹಿಳೆಯರ ಸಬಲೀಕರಣಕ್ಕೆ ಬದ್ಧವಾಗಿದೆ. ಮಹಿಳಾ ರೋಜಗಾರ್ ಯೋಜನೆ, ಮಹಿಳಾ ಕೇಂದ್ರಿತ ಯೋಜನೆಗಳು, ಬೇಟಿ ಬಜಾವ್, ಬೇಟಿ ಪಡಾವೋದಿಂದ ಬಾಲಕಿಯ ಏಳಿಗೆ ಸಾಧ್ಯವಾಗಿದೆ.
ಪಿಎಂ ಮಾತೃ ಬಂಧನ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆ ಮಹಿಳೆಯರಿಗೆ ಮಕ್ಕಳು, ಗ್ರಾಮೀಣ ಜನರಿಗೆ ವರದಾನವಾಗಿದೆ. ಎಲ್ಲೆಡೆ ಶೌಚಾಲಯ ನಿರ್ಮಾಣದಿಂದ ಮಹಿಳೆಯರ ಸ್ವಾಭಿಮಾನವನ್ನು ಸಾರಲಾಗಿದೆ. ಎಲ್ಲರಿಗೂ ಬ್ಯಾಂಕ್ ಖಾತೆಗಳಿಂದ ಅವರ ಆರ್ಥಿಕ ಸ್ಥಿತಿಗತಿ ಸುಧಾರಿಸಿದೆ.
ಮದ್ರಾ ಯೋಜನೆಯಿಂದ ಎಲ್ಲರಿಗೂ ಆರ್ಥಿಕ ಶಕ್ತಿ ಸಿಕ್ಕಿದಂತಾಗಿದ್ದು, ಪ್ರಧಾನ ಮಂತ್ರಿ ಯೋಜನೆಯು ಅವರಿಗೆ ಒತ್ತಾಸೆಯಾಗಿದೆ, ಇಲ್ಲಿ ಪುರುಷರು ಹಾಗೂ ಮಹಿಳೆ ಇಬ್ಬರಿಗೂ ಮಧ್ಯಮ ಕುಟುಂಬಗಳಿಗೆ ಬಲ ಬಂತಾಗಿದೆ. ಇದರಿಂದ ಎಲ್ಲರ ವಿಕಾಸ ಸಾಧ್ಯವಾಗಿದೆ. ಆಧುನಿಕ ಸಂಸತ್ತಿನ ಭವನ ನಿರ್ಮಾಣ ಭರದಿಂದ ಸಾಗಿದೆ. ಭಾರತದಲ್ಲಿ ಈ ಸರ್ಕಾರದಿಂದ ಖಾಸಗಿ ಸ್ಯಾಟಲೈಟ್ ಉಡಾವಣೆ ಸಾಧ್ಯವಾಗಿದೆ.
ಮಹನೀಯರ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳು ಶ್ಲಾಘನೆಗೆ ಒಳಗಾಗಿವೆ. ಡಿಜಿಟಲ್ ಇಂಡಿಯಾ ಶಕ್ತಿ ಇಂದು ಜಗತ್ತಿಗೆ ಗೊತ್ತಾಗಿದೆ. ಅಯೋಧ್ಯಾ ಅಭಿವೃದ್ಧಿ ಕಾರ್ಯಗಳು ಜನಮನ್ನಣೆ ಪಡೆದಿವೆ. ಅಲ್ಲದೆ ನ್ಯಾನೋ ತಂತ್ರಜ್ಞಾನದಿಂದ ದೇಶಕ್ಕೆ ಒಳಿತಾಗಿದೆ.
ಭಾರತಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಿಂದ ಸಂಚಾರ ವ್ಯವಸ್ಥೆ ಸುಧಾರಿಸಿದೆ. ಸರ್ಕಾರ ವನ್ಯಜೀವಿ ಸಂರಕ್ಷಣೆಗೆ ವಿಶೇಷ ಒತ್ತು ನೀಡಿದೆ. ನೇತಾಜಿ ಸುಭಾಷ್ ಚಂದ್ರ ಭೋಸ್ ಹಾಲೋಗ್ರಾಂ ಪ್ರತಿಮೆ ಎಲ್ಲರ ಆಕರ್ಷಣೆಯಾಗಿದೆ.
ರಾಷ್ಟ್ರಪತಿ ಅವರು ಹೇಳಿದ ಪ್ರಮುಖ 5 ಅಂಶಗಳೆಂದರೆ 1. ಇಂದು, ಭಾರತವು ಸ್ಥಿರ, ನಿರ್ಭೀತ ಮತ್ತು ನಿರ್ಣಾಯಕ ಸರ್ಕಾರವನ್ನು ಹೊಂದಿದೆ. 2. ಈ ಸರ್ಕಾರವು ತಂದ ದೊಡ್ಡ ಬದಲಾವಣೆ ಎಂದರೆ ಇಂದು ಪ್ರತಿಯೊಬ್ಬ ಭಾರತೀಯನ ವಿಶ್ವಾಸವು ಮೇಲಿರುತ್ತದೆ ಮತ್ತು ಭಾರತದ ಕಡೆಗೆ ಪ್ರಪಂಚದ ದೃಷ್ಟಿಕೋನ ಬದಲಾಗಿದೆ. 3. ಸರ್ಜಿಕಲ್ ಸ್ಟ್ರೈಕ್‌ಗಳಿಂದ ಭಯೋತ್ಪಾದನೆ ನಿಗ್ರಹದವರೆಗೆ, ಎಲ್‌ಒಸಿ ಮೇಲಿನ ಕಠಿಣ ನಿರ್ಧಾರಗಳಿಂದ ಎಲ್‌ಎಸಿ, ಆರ್ಟಿಕಲ್ 370 ಮತ್ತು ತ್ರಿವಳಿ ತಲಾಖ್ ಬಗ್ಗೆ ಸರ್ಕಾರ ನಿರ್ಣಾಯಕವಾಗಿದೆ. 4. ನನ್ನ ಸರ್ಕಾರ ಎಲ್ಲಾ ತುಳಿತಕ್ಕೊಳಗಾದ ಸಮುದಾಯಗಳ ನಿರೀಕ್ಷೆಗಳನ್ನು ಈಡೇರಿಸಿದೆ. ಬಡವರು, ದಲಿತರು, ಆದಿವಾಸಿಗಳು. ಅವರಿಗೆ ಕನಸು ಕಾಣುವ ಧೈರ್ಯವನ್ನು ನೀಡಿದೆ. 5. ಸರ್ಕಾರವು ದೇಶದ ಹಿತಾಸಕ್ತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಂಡಿತು. ನನ್ನ ಸರ್ಕಾರವು ಭ್ರಷ್ಟಾಚಾರವು ಸಾಮಾಜಿಕ ನ್ಯಾಯದ ದೊಡ್ಡ ಶತ್ರುವಾಗಿದೆ. ಪ್ರಾಮಾಣಿಕರನ್ನು ಗೌರವಿಸುವಂತೆ ನಾವು ಖಚಿತಪಡಿಸಿದ್ದೇವೆ ಎಂದು ಮುರ್ಮು ಹೇಳಿದ್ದಾರೆ.












Click it and Unblock the Notifications