ಅಮೆರಿಕಕ್ಕೆ ಟ್ರಂಪ್ ಇದ್ದಂಗೆ ಭಾರತದ ಪಾಲಿಗೆ ಮೋದಿ: ರಾಹುಲ್ ಟಾಂಗ್

Posted By:
Subscribe to Oneindia Kannada

ಬುಲಂದ್ ಷಹರ್ (ಉತ್ತರಪ್ರದೇಶ), ಫೆಬ್ರವರಿ 9: ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಈಚೆಗೆ ಆಯ್ಕೆ ಅದರು. ಆದರೆ ಭಾರತಕ್ಕೆ 'ಟ್ರಂಪ್' ಮಾದರಿಯಲ್ಲಿ ನರೇಂದ್ರ ಮೋದಿ ಎರಡೂವರೆ ವರ್ಷದಿಂದ ಇದ್ದಾರೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಬುಲಂದ್ ಷಹರ್ ನ ಚುನಾವಣಾ ಪ್ರಚಾರದ ವೇಳೆ ಹೇಳಿದರು.

ಸಮಾಜದ ಎಲ್ಲ ವರ್ಗದವರೂ ನೋಟು ನಿಷೇಧದಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಅಮೆರಿಕನ್ನರು ಟ್ರಂಪ್ ನ ಈಚೆಗೆ ಆರಿಸಿದರು. ಆದರೆ ಭಾರತದಲ್ಲಿ ಟ್ರಂಪ್ ಮಾದರಿಯಲ್ಲಿ ಮೋದಿ ಎರಡೂವರೆ ವರ್ಷದಿಂದ ಇದ್ದಾರೆ ಎಂದು ಹೀಗಳೆದರು. ಅಪನಗದೀಕರಣ ಕಾರಣಕ್ಕೆ ರೈತರು ಗೊಬ್ಬರ, ಆಲೂಗಡ್ಡೆಗೆ ಬೀಜ ಖರೀದಿಸಲು ಆಗುತ್ತಿಲ್ಲ ಎಂದರು.[ರೈನ್ ಕೋಟ್ ಹಾಕ್ಕೊಂಡು ಸ್ನಾನ ಮಾಡೋದು ಸಿಂಗ್ ಗೆ ಗೊತ್ತು: ಮೋದಿ]

'India Had A Donald Trump In The Form Of Narendra Modi'

ನೋಟು ಬದಲಾವಣೆಗೆ ಸರತಿಯಲ್ಲಿ ನಿಂತಾಗ ಎಷ್ಟೋ ಮಂದಿ ಪ್ರಾಣ ಬಿಟ್ಟರು. ಆ ಸಂದರ್ಭದಲ್ಲಿ ಸಾವನ್ನಪ್ಪಿದ ಯಾರಿಗೂ ಕೇಂದ್ರ ಸರಕಾರ ಪರಿಹಾರ ನೀಡಲಿಲ್ಲ ಎಂದರು. ಇನ್ನು ಕುಶಲಕರ್ಮಿಗಳು, ಸಣ್ಣ ಪ್ರಮಾಣದ ತಯಾರಕರು ತಯಾರಿಸುವ ವಸ್ತುಗಳ ಮೇಲೆ ಮೇಡ್ ಇನ್ ಇಂಡಿಯಾ ಎಂಬುದರ ಬದಲು ಆ ಪಟ್ಟಣ ಅಥವಾ ನಗರಗಳ ಹೆಸರಿರಲಿ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Taking a dig at Prime Minister Narendra Modi, Congress Vice President Rahul Gandhi said on Wednesday in Uttar Pradesh, that the United States elected Donald Trump as President, but India had a "Trump" in the form of Narendra Modi two and a half years ago.
Please Wait while comments are loading...