India And Pakistan: ಜಮ್ಮು & ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಸರಿಯಾಗಿ ರುಬ್ಬಿದ ಭಾರತ!

ಭಾರತ ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದ್ದು, ಜಾಗತಿಕವಾಗಿ ಭಾರತದ ಹೆಸರು ಬಲಿಷ್ಠವಾದ ದೇಶಗಳ ಸಾಲಿಗೆ ಬಂದು ನಿಂತಿದೆ. ಆದರೆ ಭಾರತದ ಜೊತೆಯಲ್ಲೇ ಸ್ವಾತಂತ್ರ್ಯ ಪಡೆದಿರುವ ಪಾಕಿಸ್ತಾನ ಮಾತ್ರ ಇವತ್ತಿಗೂ ಭಿಕ್ಷೆ ಬೇಡಿಕೊಂಡು ಬದುಕುವ ಪರಿಸ್ಥಿತಿ ಇದೆ. ಹೀಗಿದ್ದಾಗಲೇ ಭಾರತದ ತಂಟೆಗೆ ಬಂದಿದ್ದ ಪಾಕಿಸ್ತಾನಕ್ಕೆ ಮತ್ತೊಮ್ಮೆ ಸರಿಯಾಗಿಯೇ ಮುಖಂಭಗವಾಗಿದೆ. ಭಾರತದ ಕಿರೀಟ ಅಂತಾನೇ ಕರೆಯುವ ಜಮ್ಮು & ಕಾಶ್ಮೀರ ತಂಟೆಗೆ ಬಂದ ಪಾಕ್ ಪ್ರಧಾನಿ ಮಾತಿಗೆ ಭಾರತದ ಉತ್ತರ ಹೇಗಿತ್ತು ಗೊತ್ತಾ? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.

ಪಾಪಿ ಪಾಕಿಸ್ತಾನಕ್ಕೆ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಸಖತ್ ಉತ್ತರ ನೀಡಿದ್ದಾರೆ. ಅಂದಹಾಗೆ ಭಾರತದ ಕುರಿತು ಪದೇ ಪದೇ ಮಾತನಾಡುವುದು ಪಾಕಿಸ್ತಾನದ ನಾಯಕರಿಗೆ & ಸೆಲೆಬ್ರಿಟಿಗಳಿಗೆ ಒಂದು ರೀತಿ ರೋಗವಾಗಿದೆ. ಅದೇ ರೀತಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ವಿಶ್ವಸಂಸ್ಥೆಯಲ್ಲಿ ಹೇಳಿಕೆ ನೀಡಿ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯ 79ನೇ ಅಧಿವೇಶನದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಭಾರತ ಮತ್ತು ಭಾರತದ ಪ್ರಮುಖ ಭಾಗ ಜಮ್ಮು & ಕಾಶ್ಮೀರದ ಬಗ್ಗೆ ಮಾತನಾಡಿದ್ದರು.

India Given Perfect Answer To Pakistan About Jammu And Kashmir Comment

ಭಾರತದ ಸೇನೆಯು ಬಲಿಷ್ಠವಾಗಿದ್ದು, ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ನಡೆಯುವ ಭಯ ಕಾಡುತ್ತಿದೆ ಎಂದು ಖುದ್ದು ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ವಿಶ್ವಸಂಸ್ಥೆಯಲ್ಲಿ ಹೇಳಿಕೆ ನೀಡಿದ್ದಾರೆ. ಜೊತೆಗೆ, ಜಮ್ಮು & ಕಾಶ್ಮೀರಕ್ಕೆ ಭಾರತ ನೀಡಿದ್ದ 370ನೇ ವಿಧಿಯಡಿ ವಿಶೇಷ ಸ್ಥಾನಮಾನವನ್ನ ಮತ್ತೆ ನೀಡಬೇಕು ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಹೇಳಿಕೆ ನೀಡಿರುವುದು ಭಾರತವನ್ನು ಕೆರಳಿಸಿತ್ತು. ಇದಕ್ಕೆ ಇದೀಗ ಭಾರತ ಕೂಡ ಸರಿಯಾಗಿ ಉತ್ತರ ನೀಡಿದೆ.

ಪಾಕಿಸ್ತಾನಕ್ಕೆ ಪಾಠ ಕಲಿಸಿದ ಭಾರತ

ವಿಶ್ವಸಂಸ್ಥೆ ಸಾಮಾನ್ಯ ಸಭೆಯ 79ನೇ ಅಧಿವೇಶನದಲ್ಲಿ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಮಾತನಾಡಿದರು, ಈ ಸಮಯದಲ್ಲಿ ಪಾಕಿಸ್ತಾನದ ಭಯೋತ್ಪಾದನೆ & ಆ ದೇಶದಲ್ಲಿ ಇರುವ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಅಲ್ಲದೆ ತನ್ನ ದೇಶದಲ್ಲೇ ನೂರಾರು ಸಮಸ್ಯೆ & ಕಂಟಕ ಇಟ್ಟುಕೊಂಡಿರುವ ಪಾಕಿಸ್ತಾನ, ಭಾರತದ ಬಗ್ಗೆ ಹಿಂಗೆಲ್ಲಾ ಮಾತನಾಡುತ್ತೆ ಎಂದು ಗರಂ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+