India-EU Trade Pact: ಭಾರತ & ಯುರೋಪ್ ನಡುವೆ ಮಹತ್ವದ ಆರ್ಥಿಕ ಒಪ್ಪಂದ, ಭರ್ಜರಿ ಲಾಭದ ನಿರೀಕ್ಷೆ
ಭಾರತ ಮತ್ತು ಯುರೋಪ್ ಒಕ್ಕೂಟದ ನಡುವೆ ಮಹತ್ವದ ವ್ಯಾಪಾರ ಮಾತುಕತೆ ಇದೀಗ ಅಂತಿಮ ಹಂತಕ್ಕೆ ಬಂದು ನಿಂತಿದೆ. ಜಗತ್ತಿನ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ ಕೂಡ ಒಂದಾಗಿದ್ದು, ಜಗತ್ತಿನ ಶ್ರೀಮಂತ ದೇಶಗಳನ್ನೇ ಹೆಚ್ಚಾಗಿ ಹೊಂದಿರುವ ಯುರೋಪ್ ಒಕ್ಕೂಟದ ಜೊತೆಯಲ್ಲಿ ಇದೀಗ ಮಹತ್ವದ ಮಾತುಕತೆ ನಡೆಯುತ್ತಿದೆ. ದಾವೋಸ್ ಶೃಂಗಸಭೆಯಲ್ಲಿ ಈ ಕುರಿತು ಗಂಭೀರ ಚರ್ಚೆ ಆರಂಭ ಆಗಿದ್ದು, ಯುರೋಪಿಯನ್ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಭಾರತಕ್ಕೆ ವ್ಯಾಪಾರದ ದೃಷ್ಟಿಯಿಂದ ಯುರೋಪ್ ಒಕ್ಕೂಟದ ಜೊತೆಗೆ ಒಪ್ಪಂದ ಮಾಡಿಕೊಳ್ಳುವುದು ಬಹುಮುಖ್ಯ, ಏಕೆಂದರೆ ಯುರೋಪ್ ಒಕ್ಕೂಟ ಭಾರತದ ಜೊತೆಗೆ ವ್ಯಾಪಾರ ನಡೆಸಲು ತೆರಿಗೆಯಲ್ಲಿ ವಿನಾಯಿತಿ ನೀಡುತ್ತಾ ಬಂದಿದೆ. ಹೀಗಾಗಿಯೇ 2025ರ ಆರ್ಥಿಕ ವರ್ಷದಲ್ಲಿ ಭಾರತ ಮತ್ತು ಯುರೋಪ್ ಒಕ್ಕೂಟದ ನಡುವೆ ಬರೋಬ್ಬರಿ 76 ಬಿಲಿಯನ್ ಡಾಲರ್ ಮೊತ್ತದ ವ್ಯಾಪಾರ ನಡೆದಿದೆ.

ಈ ಹಂತದಲ್ಲಿ ಕಡಿಮೆ ತೆರಿಗೆ ಕೂಡ ಭಾರತಕ್ಕೆ ಸಹಾಯಕವಾಗಿದೆ. ಹೀಗಿದ್ದಾಗ ಯುರೋಪ್ ಒಕ್ಕೂಟದ ಜೊತೆ ಭಾರತ ಅಂತಿಮ ಹಂತದ ಮಾತುಕತೆಯಲ್ಲಿ ಇದ್ದು, ಭಾರತದಿಂದ ರಫ್ತು ಮಾಡುವ ವಸ್ತುಗಳಿಗೆ ಉತ್ತಮ ಬೆಲೆ ಸಿಗುತ್ತಿದೆ. ಇದೇ ಸಮಯದಲ್ಲಿ ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ವ್ಯಾಪಾರ ಮಾತುಕತೆ ಮಹತ್ವದ ಹಂತ ತಲುಪುತ್ತಿದೆ, ಎಂದು ಯುರೋಪಿಯನ್ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ತಿಳಿಸಿದ್ದಾರೆ.
ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿಯಾಗಿ ಆಗಮನ
ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲೇ ಈ ವಿಚಾರವನ್ನು ಉರ್ಸುಲಾ ಅವರು ತಿಳಿಸಿದ್ದು ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ. ವ್ಯಾಪಾರದಲ್ಲಿ ನ್ಯಾಯಯುತ ಸುಂಕ, ಉತ್ತಮ ಪಾಲುದಾರಿಕೆ ಮತ್ತು ಒತ್ತಡ ರಹಿತ ವ್ಯಾಪಾರ ನೀತಿಯನ್ನು ಅವರು ಪಸ್ತಾಪಿಸಿದ್ದಾರೆ. ಈ ಮೂಲಕ ಭಾರತದ ಜೊತೆಯಲ್ಲಿ ಯುರೋಪ್ ಒಕ್ಕೂಟ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿರುವುದು ಲಾಭದಾಯಕ ಆಗಲಿದ್ದು, ಆ ಹಿನ್ನೆಲೆ ಮಾತುಕತೆ ಅಂತಿಮ ಹಂತವನ್ನು ತಲುಪುತ್ತಿದೆ ಎಂದಿದ್ದಾರೆ.
ಮತ್ತೊಂದು ಪ್ರಮುಖ ವಿಚಾರ ಏನೆಂದರೆ ಈ ಬಾರಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಯುರೋಪ್ ಒಕ್ಕೂಟದ ಅಧ್ಯಕ್ಷರಾದ ಉರ್ಸುಲಾ ಅವರು ವಿಶೇಷ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಉರ್ಸುಲಾ ಜೊತೆ ಯುರೋಪ್ ಒಕ್ಕೂಟದ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರು ಕೂಡ ಮುಖ್ಯ ಅತಿಥಿಯಾಗಿ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅದಕ್ಕೂ ಮೊದಲೇ ಭಾರತ & ಯುರೋಪ್ ಒಕ್ಕೂಟದ ನಡುವೆ ಆರ್ಥಿಕ ಒಪ್ಪಂದ ಏರ್ಪಡುವ ನಿರೀಕ್ಷೆ ಮೂಡಿದೆ.
ಭಾರತಕ್ಕೆ ಯುರೋಪ್ ಲಾಭದಾಯ ಮಾರುಕಟ್ಟೆ
ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನ ಹಿನ್ನೆಲೆ ಜನವರಿ 25 ಭಾನುವಾರದಿಂದ 27 ಮಂಗಳವಾರ ತನಕ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಯುರೋಪ್ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ & ಯುರೋಪ್ ಒಕ್ಕೂಟದ ಅಧ್ಯಕ್ಷ ಆಂಟೋನಿಯೊ ಕೋಸ್ಟಾ. ಭಾರತದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಈ ಇಬ್ಬರೂ ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದರ ಜೊತೆಯಲ್ಲೇ ಹಲವು ವಿಶೇಷ ಸಭೆಗಳು ಕೂಡ ನಡೆಯಲಿದ್ದು, ವ್ಯಾಪಾರ ಮಾತುಕತೆ ಕೂಡ ಅಂತಿಮ ರೂಪ ಪಡೆಯಲಿದೆ.
ಅತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಭಾರಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಹೇರಿಕೆ ಮಾಡುತ್ತಿರುವ ನಡುವೆ, ಯುರೋಪ್ ಒಕ್ಕೂಟದ ಜೊತೆಗೆ ಭಾರತ ಇದೀಗ ಉತ್ತಮ ಬಾಂಧವ್ಯ ಉಳಿಸಿಕೊಂಡು ವ್ಯಾಪಾರ ಮುಂದುವರಿಸುವ ಅನಿವಾರ್ಯತೆ ಇದೆ. ಭಾರತದ ವಸ್ತುಗಳಿಗೆ ಯುರೋಪ್ ಅತಿದೊಡ್ಡ, ಲಾಭದಾಯಕ ಮಾರುಕಟ್ಟೆಯನ್ನು ಹಲವು ವರ್ಷಗಳಿಂದಲೂ ಒದಗಿಸುತ್ತಾ ಬಂದಿದೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications