• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಯೆಟ್ನಾಂ ಕೈ ಕುಲುಕಿದರೆ ಚೀನಾ ಮುಖ ಕೆಂಪಾಯಿತೇಕೆ?

By Mahesh
|

ನವದೆಹಲಿ, ಅ.29: ವಿಯೆಟ್ನಾಂ ದೇಶದ ಜೊತೆಗೆ ಭಾರತ ಕೈ ಜೋಡಿಸಿದೆ. ರಕ್ಷಣೆ, ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹ ಸೇರಿದಂತೆ ಏಳು ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಮೂಲಕ ದಕ್ಷಿಣ ಚೀನಾ ಸಮುದ್ರಕ್ಕೆ ಭಾರತ ಲಗ್ಗೆ ಇಡುತ್ತಿದ್ದಂತೆ ಅತ್ತ ಚೀನಾದ ಮುಖ ಕೆಂಪಾಗಿದೆ.ಹೈಡ್ರೋಕಾರ್ಬನ್ ಮತ್ತು ತೈಲ ನಿಕ್ಷೇಪಗಳ ಅಧ್ಯಯನಕ್ಕೆ ಭಾರತಕ್ಕೆ ಮುಂದಾಗಿರುವುದು ಚೀನಿಯರ ಹುಬ್ಬೇರಿಸಿದೆ.

ಭಾರತ ಪ್ರವಾಸದಲ್ಲಿರುವ ವಿಯೆಟ್ನಾಂ ಪ್ರಧಾನಿ ನಾಗ್ವೆನ್ ಟಾನ್‌ಡಂಗ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದರು. ದಕ್ಷಿಣ ಚೀನಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಂಶೋಧನಾ ಚಟುವಟಿಕೆಗೆ ಉಭಯ ದೇಶಗಳು ಒಪ್ಪಂದ ಮಾಡಿಕೊಂಡಿರುವುದನ್ನು ಚೀನಾ ಆಕ್ಷೇಪಿಸಿದೆ. ಚೀನಾ ದೇಶಕ್ಕೆ ಈಗ ಈ ವ್ಯಾಪ್ತಿಯಲ್ಲಿರುವ ದ್ವೀಪ ಸಮೂಹಗಳ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಭೀತಿ ಆವರಿಸಿದೆ.

"ವಿಯೆಟ್ನಾಮ್ ಜೊತೆಗಿನ ರಕ್ಷಣಾ ಸಂಬಂಧವು ನಮ್ಮ ಪ್ರಮುಖ ವಿಚಾರ ಗಳಲ್ಲೊಂದಾಗಿದೆ. ವಿಯೆಟ್ನಾಮಿನ ಭದ್ರತೆ ಹಾಗೂ ರಕ್ಷಣಾ ಪಡೆಗಳನ್ನು ಆಧುನೀಕರಿಸುವ ವಿಚಾರದಲ್ಲಿ ಭಾರತವು ಎಂದಿಗೂ ಆ ರಾಷ್ಟ್ರಕ್ಕೆ ಬದ್ಧರಾಗಿದ್ದೇವೆ.ಜಂಟಿ ಸಮರಾಭ್ಯಾಸ ಹಾಗೂ ರಕ್ಷಣಾ ಸಾಮಗ್ರಿಗಳಲ್ಲಿ ಸಹಕಾರಕ್ಕೂ ಭಾರತ ಬದ್ಧವಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮೋದಿ ಹಾಗೂ ಟಾನ್ ಡಂಗ್ ದ್ವೀಪಕ್ಷೀಯ ಮಾತುಕತೆ ನಂತರ ಸಹಿ ಹಾಕಿದ ಒಪ್ಪಂದಗಳು:

* 2020ರ ವೇಳೆಗೆ ಉಭಯ ದೇಶಗಳ ನಡುವಿನ ವ್ಯವಹಾರ ಮೌಲ್ಯ 7 ಬಿಲಿಯನ್ ಯುಎಸ್ ಡಾಲರ್ ನಿಂದ 20 ಮಿಲಿಯನ್ ಡಾಲರ್ ಗೆ ಏರಿಕೆಯಾಗಲಿದೆ.

* ಜೇಟ್ ಏರ್ ವೇಸ್ ಹಾಗೂ ವಿಯೆಟ್ನಾಂ ಏರ್ ಲೈನ್ಸ್ ನಡುವೆ ಒಪ್ಪಂದವಾಗಿದ್ದು, ನ.5ರಿಂದ ಹೊ ಚಿನ್ ಮಿನ್ ನಗರಕ್ಕೆ ನೇರ ವಿಮಾನ ಸಂಪರ್ಕ ಸಾಧ್ಯವಾಗಲಿದೆ.

* ನಲಂದಾ ವಿಶ್ವವಿದ್ಯಾಲಯ ಅಭಿವೃದ್ಧಿ ಹಾಗೂ ಕೌಶಲ್ಯ ವಿನಿಮಯ ಕಾರ್ಯಕ್ರಮ

* ವಿಯೆಟ್ನಾಂನ ಕ್ವಾಂಗ್ ನಾಮ್ ಪ್ರಾಂತ್ಯದ ವಿಶ್ವ ಪಾರಂಪರಿಕ ತಾಣದ ಉಳಿವಿಗಾಗಿ ಭಾರತದ ನೆರವು.

* ವಿಯೆಟ್ನಾಂನಲ್ಲಿ ಭಾರತದಿಂದ ಇಂಗ್ಲೀಷ್ ಭಾಷೆ ಹಾಗೂ ಮಾಹಿತಿ ತಂತ್ರಜ್ಞಾನ ತರಬೇತಿ ಕೇಂದ್ರ ಸ್ಥಾಪನೆ.

* 2015-17 ರ ತನಕ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು/

* ಆಡಿಯೋ ವಿಡಿಯೋ ಕಾರ್ಯಕ್ರಮಗಳ ವಿನಿಮಯ.

* ಓಎಮ್ ಜಿಸಿ ಹಾಗೂ ಪೆಟ್ರೋ ವಿಯೆಟ್ನಾಂ ನಡುವೆ ಸಂಶೋಧನಾ ಚಟುವಟಿಕೆ ಒಪ್ಪಂದ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Notwithstanding Chinese objections, India today went ahead to enhance its presence in hydrocarbon-rich South China Sea and inked a pact with Vietnam for exploration in two additional oil and gas blocks besides deciding to step up cooperation in key areas of defence, security, trade and counter-terrorism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more