ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4 ಮಿಲಿಯನ್ ದಾಟಿದ ಕೊರೊನಾ ವೈರಸ್ ಪ್ರಕರಣ: ಭಾರತದ ಕೆಟ್ಟ ದಾಖಲೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 5: ಭಾರತದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಶುಕ್ರವಾರ ನಾಲ್ಕು ಮಿಲಿಯನ್ ಗಡಿ ದಾಟಿದೆ. 30 ಲಕ್ಷದ ಗಡಿಯನ್ನು ದಾಟಿದ ಕೇವಲ 13 ದಿನಗಳಲ್ಲಿಯೇ ಭಾರತದ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 40 ಲಕ್ಷ ಕ್ರಮಿಸಿದೆ. ಕಳೆದ 24 ಗಂಟೆಗಳಲ್ಲಿಯೇ 87,800 ಪ್ರಕರಣಗಳು ವರದಿಯಾಗಿವೆ. ಇದು ದಿನವೊಂದರಲ್ಲಿ ವರದಿಯಾದ ಅತಿ ಹೆಚ್ಚಿನ ಸಂಖ್ಯೆ.

Recommended Video

ದಾರಿ ತೋರಿದ ಗುರುವಿಗೆ ನಮನ | Happy teachers day | Oneindia Kannada

ಅಮೆರಿಕ ಮತ್ತು ಬ್ರೆಜಿಲ್ ಬಳಿಕ ನಾವೆಲ್ ಕೊರೊನಾ ವೈರಸ್‌ನಲ್ಲಿ 40 ಲಕ್ಷ ಪ್ರಕರಣಗಳನ್ನು ದಾಟಿದ ಮೂರನೇ ದೇಶ ಭಾರತ. ಮೊದಲ ಪ್ರಕರಣದಿಂದ 1 ಮಿಲಿಯನ್ ಪ್ರಕರಣದವರೆಗೆ ಸಂಖ್ಯೆಗಳು ದಾಕಲಾಗಲು ಭಾರತ ಸುದೀರ್ಘ ಸಮಯ ತೆಗೆದುಕೊಂಡಿತ್ತು. ಮೊದಲ ಪ್ರಕರಣ ವರದಿಯಾದ 168 ದಿನಗಳ ಬಳಿಕ ಮೊದಲ ಮಿಲಿಯನ್ ಮುಟ್ಟಿತ್ತು. ಆದರೆ ತದನಂತರದ ಬೆಳವಣಿಗೆ ಬೇರೆ ಎಲ್ಲ ದೇಶಗಳಿಗಿಂತಲೂ ಭಾರತದಲ್ಲಿ ವೇಗವಾಗಿದೆ.

ಭಾರತದಲ್ಲಿ 2021ರಲ್ಲಿಯೂ ಮುಂದುವರಿಯಲಿದೆ ಕೋವಿಡ್-19: ಎಚ್ಚರಿಕೆ ನೀಡಿದ ಏಮ್ಸ್ ಮುಖ್ಯಸ್ಥಭಾರತದಲ್ಲಿ 2021ರಲ್ಲಿಯೂ ಮುಂದುವರಿಯಲಿದೆ ಕೋವಿಡ್-19: ಎಚ್ಚರಿಕೆ ನೀಡಿದ ಏಮ್ಸ್ ಮುಖ್ಯಸ್ಥ

ಒಂದರಿಂದ 4 ಮಿಲಿಯನ್‌ವರೆಗಿನ ಪ್ರಕರಣಗಳು ಕೇವಲ 40 ದಿನಗಳಲ್ಲಿ ತಲುಪಿದೆ. ಇಷ್ಟು ಪ್ರಕರಣಗಳು ವರದಿಯಾಗಲು ಬ್ರೆಜಿಲ್‌ನಲ್ಲಿ 75 ದಿನ ತೆಗೆದುಕೊಂಡಿದ್ದರೆ, ಅಮೆರಿಕದಲ್ಲಿ 86 ದಿನದಲ್ಲಿ 4 ಮಿಲಿಯನ್ ವರದಿಯಾಗಿತ್ತು. ಆದರೆ ಭಾರತವು 3 ಮಿಲಿಯನ್‌ನಿಂದ 4 ಮಿಲಿಯನ್‌ಅನ್ನು ಕೇವಲ 13 ದಿನಗಳಲ್ಲಿಯೇ ಕ್ರಮಿಸಿದೆ. ಇದು ಈವರೆಗೆ ಅತಿ ವೇಗದ 1 ಮಿಲಿಯನ್ ಕ್ರಮಿಸಿದ ದಾಖಲೆಯಾಗಿದೆ. ಇದಕ್ಕೂ ಹಿಂದಿನ ದಾಖಲೆ 16 ದಿನಗಳದ್ದು. ಭಾರತ ಮತ್ತು ಅಮೆರಿಕ ಎರಡರಲ್ಲಿಯೂ ಇದು ದಾಖಲಾಗಿತ್ತು.

India Crosses 4 Million Covid Cases, Fastest 1 Million For Any Country

ಅತಿ ವೇಗದ ಕೊರೊನಾ ವೈರಸ್ ಪ್ರಕರಣ ಸಂಖ್ಯೆ ಏರಿಕೆ ಮಧ್ಯೆಯೂ ಭಾರತ, ಅತಿ ಹೆಚ್ಚು ಕೊರೊನಾ ಪೀಡಿತ ದೇಶಗಳ ನಡುವೆ ಅತ್ಯಂತ ಕಡಿಮೆ ಮರಣ ಪ್ರಮಾಣ ಹೊಂದಿದೆ. ಅಮೆರಿಕದ ಮರಣ ಪ್ರಮಾಣದ ಅರ್ಧಕ್ಕಿಂತಲೂ ಕಡಿಮೆ ಇದೆ.

English summary
India on Friday has crossed 4 million coronavirus cases. The last 1 million has hits just in 13 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X