In Pics: ಎಲ್ಲಾ ನೀನೆ ತಾಯೇ, ಎಲ್ಲೆಲ್ಲೂ ನಿನ್ನ ಮಾಯೆ
ನವದೆಹಲಿ, ಅಕ್ಟೋಬರ್, 19 : ಭಾರತದ ಉದ್ದಗಲದಲ್ಲಿ ನವರಾತ್ರಿ ಸಂಭ್ರಮ, ದುರ್ಗಾ ಮಾತೆ, ಕಾಳಿ ದೇವಿ, ಶಾರದೆಯ ಆರಾಧನೆ ದೇಶಾದ್ಯಂತ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಗೆ ವಿಶೇಷ ಸ್ಥಾನ ನೀಡಲಾಗಿದ್ದು ಹಬ್ಬದ ಸಂಭ್ರಮದಲ್ಲಿ ಎಲ್ಲರೂ ಭಾಗವಹಿಸಿದ್ದಾರೆ.
ದುರ್ಗೆಯ ಅವತಾರವನ್ನು ಸಾರುವ ವಿಗ್ರಹಗಳು, ದುರ್ಗಾಮಾತೆ ಎದುರು ಭಕ್ತರ ನೃತ್ಯ, ಯುವತಿಯರಿಂದ ಹಬ್ಬಕ್ಕೆ ಹೊಸ ಮೆರುಗು, ಮೆರವಣಿಗೆ, ಭಕ್ತಿ ಗೀತೆ, ಘೋಷಣೆಗಳು ದುರ್ಗಾಪುಜೆಯ ಹೈಲೈಟ್ಸ್.[ನವರಾತ್ರಿ ಸಂಭ್ರಮದ ಮತ್ತಷ್ಟು ಚಿತ್ರಗಳು]
ಇಂದೋರ್, ಕೋಲ್ಕತ್ತಾ, ನವದೆಹಲಿ, ಅಗರ್ ತಲಾ, ರಾಂಚಿ ಸೇರಿದಂತೆ ದೇಶದ ವಿವಿಧೆಡೆ ದುರ್ಗಾ ಮಾತೆಯನ್ನು ಹೇಗೆ ಆರಾಧನೆ ಮಾಡಲಾಗುತ್ತಿದೆ ನೋಡಿಕೊಂಡು ಬರೋಣ,,,(ಪಿಟಿಐ ಚಿತ್ರಗಳು)

ದಕ್ಷಿಣ ಕೋಲ್ಕತ್ತಾ
ದಕ್ಷಿಣ ಕೋಲ್ಕತ್ತಾದಲ್ಲಿ ಭಕ್ತರಿಗೆ ಆಶೀರ್ವಾದ ನೀಡುತ್ತ ನಿಂತಿರುವ ದುರ್ಗೆ. ಸಾಂಪ್ರದಾಯಿಕ 'ಛನ್ನು' ಕಲೆಯನ್ನು ಬಳಸಿ ವಿಗ್ರಹ ನಿರ್ಮಾಣ ಮಾಡಲಾಗಿದೆ.

ವಿಧವೆಯರ ನೃತ್ಯ
ದುರ್ಗಾಪೂಜೆ ಹೆಣ್ಣಿನ ಸಬಲೀಕರಣದ ಪ್ರತೀಕ ಎಂಬುದನ್ನು ಬಿಂಬಿಸಲು ನವದೆಹಲಿಯಲ್ಲಿ ನೃತ್ಯದ ಮೂಲಕ ಹಬ್ಬ ಆಚರಣೆ ಮಾಡಿದ ವಿಧವೆಯರು.

ದೇವಿ ಭಜನೆ
ಬಾಯಲ್ಲಿ ದುರ್ಗಾದೇವಿಯ ಆಕಾರವನ್ನು ಪಠಣ ಮಾಡುತ್ತ ದುರ್ಗೆಯ ಆರಾಧಿಸುವ ಗೀತೆಗಳಿಗೆ ಹೆಜ್ಜೆ ಹಾಕಿದರು.

ನಿಜ ದುರ್ಗೆಯರು
ಭೋಪಾಲ್ ನಲ್ಲಿ ಖಡ್ಗ ಹಿಡಿದು ಭದ್ರಕಾಳಿಯ ಅವತಾರ ತಾಳಿದ್ದ ಯುವತಿಯರು ಶೌರ್ಯ ಯಾತ್ರೆಯಲ್ಲಿ ಪಾಲ್ಗೊಂಡರು.

ಕಲಾವಿದನ ಕಣ್ಣಲ್ಲಿ
ನವದೆಹಲಿಯಲ್ಲಿ ದುರ್ಗಾಮಾತೆಯ ವಿಗ್ರಹಕ್ಕೆ ಅಂತಿಮ ಸ್ಪರ್ಶ ನೀಡುತ್ತಿರುವ ಕಲಾವಿದ.

ಮಹಿಷಾಸುರ ಮರ್ದಿನಿ
ನವದೆಹಲಿಯಲ್ಲಿ ದುರ್ಗಾಮಾತೆಯ ವಿಗ್ರಹಕ್ಕೆ ಅಂತಿಮ ಸ್ಪರ್ಶ ನೀಡುತ್ತಿರುವ ಕಲಾವಿದ. ಹಬ್ಬಕ್ಕೆ ಮುನ್ನ ವಿಗ್ರಹಗಳ ತಯಾರಿ ಮತ್ತು ಮಾರಾಟ ಭರ್ಜರಿಯಾಗೇ ನಡೆದಿತ್ತು.

ಮಹಾ ಪಂಚಮಿಗೆ ಸಿದ್ಧತೆ
ಕೋಲ್ಕತ್ತಾದಲ್ಲಿ ಸಾಂಪ್ರದಾಯಿಕ ಛನ್ನು ಕಲೆ ಬಳಸಿ ತಯಾರು ಮಾಡಿದ ಪಂಡಾಲ್ ಗಳು.

ಇಂದೋರ್ ನಲ್ಲಿ ಮೆರವಣಿಗೆ
ಇಂದೋರ್ ನಲ್ಲಿ ದುರ್ಗಾಪುಜೆ ನಿಮಿತ್ತ ಮೆರವಣಿಗೆ ಹೊರಟ ಭಕ್ತರ ಸಾಲು ಕಂಡು ಬಂದಿದ್ದು ಹೀಗೆ.












Click it and Unblock the Notifications