Bullet Train: ಗಂಟೆಗೆ 250 ಕಿ.ಮೀ. ಓಡುವ ಬುಲೆಟ್ ಟ್ರೈನ್ ಭಾರತದಲ್ಲೇ ತಯಾರು: ಅಪ್ಡೇಟ್ ಇಲ್ಲಿದೆ
ಬೆಂಗಳೂರು, ಏಪ್ರಿಲ್ 18: ವಂದೇ ಭಾರತ್ ರೈಲುಗಳ ಕೋಚ್‌ಗಳು ಭಾರತಲ್ಲೇ ನಿರ್ಮಾಣವಾಗುವಂತೆ, ಬುಲೆಟ್ ರೈಲುಗಳನ್ನು ನಿರ್ಮಿಸಲಿದೆ. ಮುಂದಿನ ದಿನಗಳಲ್ಲಿ ಭಾರತವು ಸ್ವದೇಶಿ ನಿರ್ಮಿತ ರೈಲುಗಳನ್ನು ಕಾಣಲಿದೆ.
ವಿಶೇಷವೆಂದರೆ ಭಾರತದಲ್ಲಿ ಈಗಾಗಲೇ ಸ್ವದೇಶಿ ನಿರ್ಮಿತ ಬುಲೆಟ್ ರೈಲುಗಳು ಉತ್ಪಾದನೆ ಆರಂಭವಾಗಿದೆ. ಈ ಬುಲೆಟ್ ರೈಲುಗಳು ಭಾರತದಲ್ಲಿ ಹಾಲಿ ಇರುವ ರೈಲುಗಳಿಗಿಂತಲೂ ವೇಗವಾಗಿ ಓಡಲಿವೆ ಎಂದು ಭಾರತೀಯ ರೈಲ್ವೆ ಭರವಸೆ ನೀಡಿದೆ.

ಪ್ರಸ್ತುತದಲ್ಲಿ ಭಾರತವು ಪ್ರತಿ ಗಂಟೆಗೆ 250 ಕಿಲೋಮೀಟರ್ (ಕಿಮೀ) ವೇಗದಲ್ಲಿ ಚಲಿಸಬಲ್ಲ ಸಾಮಾರ್ಥ್ಯದ ಬುಲೆಟ್ ರೈಲನ್ನು ನಿರ್ಮಿಸಲಿದೆ. ಈ ಕುರಿತು ಭಾರತೀ ರೈಲ್ವೆ ಇಲಾಖೆ ಉನ್ನತಾಧಿಕಾರಿಗಳು ಎಕನಾಮಿಕ್ ಟೈಮ್ಸ್ ಗೆ ಮಾಹಿತಿ ನೀಡಿದೆ ಎಂದು ವರದಿ ಆಗಿದೆ.
ಭಾರತದಲ್ಲಿ ಸ್ವದೇಶಿ ನಿರ್ಮಿತ ಬುಲೆಟ್ ರೈಲುಗಳ ವೇಗವು ಫ್ರೆಂಚ್ TGV ಮತ್ತು ಜಪಾನೀಸ್ ಶಿಂಕನ್‌ಸೆನ್ ಸೇರಿದಂತೆ 250 kmph ವೇಗದಲ್ಲಿ ಚಲಿಸುವ ಪ್ರಪಂಚದ ವಿವಿಧ ಭಾಗಗಳಲ್ಲಿ ಹೆಚ್ಚಿನ ವೇಗದ ರೈಲುಗಳಂತೆಯೇ ಇರುತ್ತದೆ.
ಭಾರತಲ್ಲಿ ಈ ರೈಲು ನಿರ್ಮಾವಗುವುದು ಎಲ್ಲಿ?
ಮೂಲಗಳ ಪ್ರಕಾರ, ಚೆನ್ನೈನಲ್ಲಿರುವ ಭಾರತೀಯ ರೈಲ್ವೆಯ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ಯಲ್ಲಿ ಬುಲೆಟ್ ರೈಲಿನ ವಿನ್ಯಾಸವನ್ನು ಈಗಾಗಲೇ ಸಿದ್ಧಪಡಿಸುವಿಕೆ ಕೆಲಸ ಆರಂಭಗೊಂಡಿದೆ. ಈ ಬುಲೆಟ್ ರೈಲನ್ನು ವಂದೇ ಭಾರತ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುತ್ತಿದೆ. ವಂದೇ ಭಾರತ್ ಈಗಾಗಲೇ ಗರಿಷ್ಠ 220 ಕಿಮೀ ವೇಗದಲ್ಲಿ ಓಡಬಹುದಾದ ಸಾಮರ್ಥ್ಯ ಹೊಂದಿದೆ ಎಂದು ಅವರು ಮಾಹಿತಿ ನೀಡಿದರು.
ಸ್ವದೇಶಿ ಬುಲೆಟ್ ರೈಲು ಎಲ್ಲೆಲ್ಲಿ ಓಡಲಿವೆ? ಮಾರ್ಗಗಳು
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು 2024 ರ ಲೋಕಸಭೆ ಚುನಾವಣೆ ಅಂಗವಾಗಿ ಬಿಜೆಪಿಯ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಈ ವೇಳೆ ಪ್ರಧಾನಿ ಭಾರತ ಉತ್ತರ, ದಕ್ಷಿಣ, ಪೂರ್ವ ಕಾರಿಡಾರ್‌ಗಳಲ್ಲಿ ಮೇಡ್ ಇನ್ ಇಂಡಿಯಾ ಬುಲೆಟ್ ರೈಲುಗಳು ಸಂಚರಿಸುವ ಬಗ್ಗೆ ಸುಳಿವು ನೀಡಿದರು. ಈ ಮೂಲಕ ಬುಲೆಟ್ ರೈಲಿನ ಕುರಿತಾ ದೂರದೃಷ್ಟಿಯನ್ನು ಅವರು ಹೊರ ಹಾಕಿದರು.
ಉತ್ತರ, ದಕ್ಷಿಣ, ಪೂರ್ವ ಕಾರಿಡಾರ್ ಮಾತ್ರವಲ್ಲದೇ ಭಾರತದಲ್ಲಿ ಇನ್ನೂ 03 ಬುಲೆಟ್ ರೈಲು ಕಾರಿಡಾರ್‌ಗಳ ಭವಿಷ್ಯದಲ್ಲಿ ನಿರ್ಮಾಣಗೊಳ್ಳಲಿವೆ ಎಂದು ಪ್ರಧಾನಿ ಭರವಸೆ ನೀಡಿದರು. ವಾಣಿಜ್ಯ ನಗರಿ ಮುಂಬೈಗೆ ಅಹಮದಾಬಾದ್‌ನಿಂದ ಸಂಪರ್ಕ ಸಾಧಿಸುವ ಮೊದಲ ಬುಲೆಟ್ ಕಾರಿಡಾರ್‌ನ ಕೆಲಸ ಬಹುತೇಕ ಮುಗಿದಿದೆ. ಇನ್ನೂ ಹೊಸ ಬುಲೆಟ್ ರೈಲಿನ ಕಾರ್ಯ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಬುಲೆಟ್ ಕಾರಿಡಾರ್‌ಗಳಲ್ಲಿ ಸ್ವದೇಶಿ ತಂತ್ರಜ್ಞಾನ
ಭವಿಷ್ಯದ ಬುಲೆಟ್ ರೈಲು ಕಾರಿಡಾರ್‌ಗಳು ಸ್ವದೇಶಿ ತಂತ್ರಜ್ಞಾನ ಮತ್ತು ದೇಶೀಯ ಉತ್ಪಾದನೆಯನ್ನು ಬಳಸಿಕೊಳ್ಳಲಾಗುತ್ತದೆ. ಸದ್ಯ ಗುಜರಾತ್‌ನ ಅಹಮದಾಬಾದ್‌ನಿಂದ ಮಹಾರಾಷ್ಟ್ರದ ಮುಂಬೈ ನಡುವೆ ಸಂಚರಿಸಲು ನಿರ್ಮಿಸಲಾಗುತ್ತಿರುವ ಬುಲೆಟ್ ರೈಲುಗಳು ಜಪಾನ್ ತಂತ್ರಜ್ಞಾನವನ್ನು ಅವಲಂಬಿಸಿವೆ.
ಭಾರತೀಯ ರೈಲ್ವೇ ಹಾಲಿ ರೈಲುಗಳ ವೇಗವನ್ನು ಸುಧಾರಿಸುವತ್ತ ಗಮನ ಹರಿಸಲಾಗುತ್ತಿದೆ. ಇದಕ್ಕಾಗಿ ಎರಡು ಟ್ರ್ಯಾಕ್‌ಗಳಿಗೆ ಹಾಲಿ ಟ್ರ್ಯಾಕ್ ಅಭಿವೃದ್ಧಿ ಪಡಿಸಲಾಗಿದೆ. ಸದ್ಯ ವಂದೇ ಭಾರತ್ ರೈಲುಗಳು ಈಗ ಶೂನ್ಯದಿಂದ 100 ಕಿಮೀ ವೇಗವನ್ನು 52 ಸೆಕೆಂಡುಗಳಲ್ಲಿ ತಲುಪುತ್ತಿವೆ. ಆದರೆ ಹಾಲಿ ಇರುವ ಬುಲೆಟ್ ರೈಲುಗಳು ಶೂನ್ಯದಿಂದ 100 ಕಿಮೀ ವೇಗ ತಲುಪಲು 54 ಸೆಕೆಂಡು ತಲುಪುತ್ತಿವೆ ಎಂದು ಅಧಿಕಾರಿಗಳು ಹೇಳಿದರು.
ಈ ಹಿಂದೆ ರೈಲ್ವೇ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು, ಭಾರತದ ಮೊದಲ ಬುಲೆಟ್ ರೈಲು 2026 ರಲ್ಲಿ ಉತ್ಪಾದನೆಯಾಗಲಿದೆ. ಈ ರೈಲು ಸೂರತ್‌ನಿಂದ ಗುಜರಾತ್‌ನ ಬಿಲಿಮೋರಾವರೆಗೆ ಸಂಚರಿಸಲಿದೆ ಎಂದು ತಿಳಿಸಿದ್ದರು.












Click it and Unblock the Notifications