ಮೋದಿ, ಭಾಗವತ್‌ರಷ್ಟೇ ಭಾರತ ನಮಗೂ ಸೇರಿದೆ: ಮುಸ್ಲಿಂ ಮುಖಂಡ
ಭಾರತ ನಮ್ಮ ದೇಶ. ಈ ದೇಶವು ನರೇಂದ್ರ ಮೋದಿ ಮತ್ತು ಮೋಹನ್ ಭಾಗವತ್‌ಗೆ ಸೇರಿದ್ದಷ್ಟು ಮಹಮೂದ್ ಮದನಿಗೂ ಸೇರಿದೆ. ಇಲ್ಲಿ ಅವರಿಬ್ಬರು ಮಹಮೂದ್ ಮದನಿ ಅವರಿಗಿಂತ ಒಂದು ಇಂಚು ಮುಂದಿಲ್ಲ ಎಂದರು.
ನವದೆಹಲಿ, ಫೆಬ್ರವರಿ 11: ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರಂತೆಯೇ ಭಾರತವು ತಮಗೂ ಸೇರಿದ್ದು ಎಂದು ಜಮೀಯತ್ ಉಲಮಾ-ಇ-ಹಿಂದ್ ಅಧ್ಯಕ್ಷ ಮಹಮೂದ್ ಮದನಿ ಹೇಳಿದ್ದಾರೆ.
ನವದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಜಮೀಯತ್ ಉಲಮಾ-ಇ-ಹಿಂದ್‌ನ ಸಮಗ್ರ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಮೌಲಾನಾ ಮದನಿ, "ಭಾರತ ನಮ್ಮ ದೇಶ. ಈ ದೇಶವು ನರೇಂದ್ರ ಮೋದಿ ಮತ್ತು ಮೋಹನ್ ಭಾಗವತ್‌ಗೆ ಸೇರಿದ್ದಷ್ಟು ಮಹಮೂದ್ ಮದನಿಗೂ ಸೇರಿದೆ. ಇಲ್ಲಿ ಅವರಿಬ್ಬರು ಮಹಮೂದ್ ಮದನಿ ಅವರಿಗಿಂತ ಒಂದು ಇಂಚು ಮುಂದಿಲ್ಲ ಎಂದರು.
ಇಸ್ಲಾಂ ಈ ದೇಶದ ಅತ್ಯಂತ ಪುರಾತನ ಧರ್ಮವಾಗಿದೆ. ಈ ಭೂಮಿ ಮುಸ್ಲಿಮರ ಮೊದಲ ತಾಯ್ನಾಡು. ಇಸ್ಲಾಂ ಹೊರಗಿನಿಂದ ಬಂದ ಧರ್ಮ ಎಂದು ಹೇಳುವುದು ಸಂಪೂರ್ಣವಾಗಿ ತಪ್ಪು ಮತ್ತು ಆಧಾರರಹಿತವಾಗಿದೆ. ಇಸ್ಲಾಂ ಧರ್ಮವು ಎಲ್ಲಾ ಧರ್ಮಗಳಿಗಿಂತ ಹಳೆಯ ಧರ್ಮವಾಗಿದೆ. ಭಾರತವು ಹಿಂದಿ ಮುಸ್ಲಿಮರಿಗೆ ಉತ್ತಮ ದೇಶವಾಗಿದೆ ಎಂದು ಮದನಿ ಹೇಳಿದರು.

ಜಮಿಯತ್ ಉಲಮಾ-ಇ-ಹಿಂದ್ ಮುಖ್ಯಸ್ಥರು, ನಾವು ಬಲವಂತದ ಧಾರ್ಮಿಕ ಮತಾಂತರವನ್ನು ವಿರೋಧಿಸುತ್ತೇವೆ. ಇಂದು ಸ್ವಯಂಪ್ರೇರಣೆಯಿಂದ ತಮ್ಮ ಧರ್ಮವನ್ನು ಪರಿವರ್ತಿಸುವ ಜನರನ್ನು ಸಹ ಸುಳ್ಳು ಆರೋಪದ ಮೇಲೆ ಜೈಲಿಗೆ ಕಳುಹಿಸಲಾಗುತ್ತಿದೆ. ಬಲವಂತವಾಗಿ ನಡೆಯುವ ಧಾರ್ಮಿಕ ಮತಾಂತರಕ್ಕೆ ನಮ್ಮ ವಿರೋಧವಿದೆ, ಧರ್ಮದ ಸ್ವಾತಂತ್ರ್ಯ ಮೂಲಭೂತ ಹಕ್ಕು, ಬಲಾತ್ಕಾರ, ವಂಚನೆ, ದುರಾಸೆಯಿಂದ ಮತಾಂತರಕ್ಕೂ ನಮ್ಮ ವಿರೋಧವಿದೆ, ನಮಾಝ್ ನಿಷೇಧ, ಮುಸ್ಲಿಮರ ಮೇಲೆ ಪೊಲೀಸ್ ಕ್ರಮ, ಮತ್ತು ಬುಲ್ಡೋಜರ್ ಕ್ರಮದಂತಹ ಹಲವಾರು ಸಂಸ್ಥೆಗಳು ಮುಸ್ಲಿಂ ಸಮುದಾಯವನ್ನು ಗುರಿಯಾಗಿಟ್ಟುಕೊಂಡ ಉದಾಹರಣೆಗಳಿವೆ ಎಂದರು.
ಜಮಿಯತ್ ಉಲಮಾ-ಇ-ಹಿಂದ್‌ನ ಮೂರು ದಿನಗಳ ಸರ್ವಸದಸ್ಯರ ಅಧಿವೇಶನ ಶುಕ್ರವಾರ ದೆಹಲಿಯಲ್ಲಿ ಆರಂಭವಾಗಿದೆ. ಜಮಿಯತ್ ಉಲಾಮಾ-ಇ-ಹಿಂದ್ ಪ್ರಕಾರ, ಏಕರೂಪ ನಾಗರಿಕ ಸಂಹಿತೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಮುಸ್ಲಿಂ ವೈಯಕ್ತಿಕ ಕಾನೂನು ಮತ್ತು ಮದರಸಾಗಳ ಸ್ವಾಯತ್ತತೆ ಸಮಾವೇಶದಲ್ಲಿ ಚರ್ಚಿಸಲಾಗುವ ಕೆಲವು ವಿಷಯಗಳಲ್ಲಿ ಸೇರಿವೆ. ಇದಲ್ಲದೆ, ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಮುಸ್ಲಿಮರಿಗೆ ಮೀಸಲಾತಿ ನೀಡಲು ಪ್ರಸ್ತಾವನೆಯನ್ನು ತರಬಹುದು ಎಂದು ಅದು ಹೇಳಿದೆ.












Click it and Unblock the Notifications