Get Updates
Get notified of breaking news, exclusive insights, and must-see stories!

India - Bangladesh Border: ಭಾರತ - ಬಾಂಗ್ಲಾ ಗಡಿ ರಕ್ಷಣೆಗೆ ಹಾವು, ಮೊಸಳೆಗಳ ಬಳಕೆಗೆ ಮುಂದಾಯ್ತು ಭಾರತೀಯ ಸೇನೆ, ಏನಿದು ಚರ್ಚೆ

India - Bangladesh Border: ಭಾರತ ಹಾಗೂ ಬಾಂಗ್ಲಾದೇಶದ ನಡುವೆ ಇತ್ತೀಚಿನ ವರ್ಷಗಳಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ. ಸಂಕಷ್ಟದ ಸಮಯದಲ್ಲಿ ಬಾಂಗ್ಲಾದೇಶಕ್ಕೆ ಭಾರತವು ಸಹಕಾರ ನೀಡುತ್ತಿದ್ದರೂ ಸಹ ಬಾಂಗ್ಲಾದೇಶ ಹಾಗೂ ಭಾರತದ ನಡುವಿನ ಗಡಿ ವಿಚಾರ ಸೇರಿದಂತೆ ಹಲವು ವಿಷಯಗಳು ಗಂಭೀರವಾಗಿವೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ನಡೆದ ಸಂದರ್ಭದಲ್ಲೂ ಬಾಂಗ್ಲಾದೇಶ ಚಕಾರ ತೆಗೆದಿತ್ತು. ಇದೀಗ ಭಾರತ ಹಾಗೂ ಬಾಂಗ್ಲಾದೇಶ ಗಡಿ ಸುರಕ್ಷತೆಗೆ ಸಂಬಂಧಿಸಿದಂತೆ ಭಾರತವು ಹಾವು - ಮೊಸಳೆಗಳ ಮೊರೆ ಹೋಗಿದೆ. ಏನಿದು ರಾಜರಕಾಲದ ತಂತ್ರ ಎನ್ನುವ ವಿವರ ಇಲ್ಲಿದೆ.

ಭಾರತಕ್ಕೆ ಬಾಂಗ್ಲಾದೇಶದಿಂದ ವಲಸೆ ಬರುವವರನ್ನು ನಿಯಂತ್ರಿಸುವುದಕ್ಕೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ರಾಜರಕಾಲದ ತಂತ್ರವನ್ನು ಬಳಸುವುದಕ್ಕೆ ಭಾರತ ಸರ್ಕಾರವು ಮುಂದಾಗಿದೆ. ಬಾಂಗ್ಲಾದೇಶ ಗಡಿಯುದ್ದಕ್ಕೂ ನದಿ ತೀರದಲ್ಲಿ ಒಳನುಸುಳುವಿಕೆ ಮತ್ತು ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ಉದ್ದೇಶದಿಂದ ಹಾವುಗಳು ಮತ್ತು ಮೊಸಳೆಗಳಂತಹ ಸರೀಸೃಪಗಳನ್ನು ಬಳಸುವ ಸಾಧ್ಯತೆಯನ್ನು ಪರಿಶೀಲನೆ ಮಾಡುವುದಕ್ಕೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯ ಕ್ಷೇತ್ರ ಘಟಕಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಬಿಎಸ್‌ಎಫ್ ಮೂಲಗಳು ತಿಳಿಸಿರುವುದಾಗಿ ದಿ ಹಿಂದೂ ವರದಿ ಮಾಡಿದೆ.

India Bangladesh Border

ಭಾರತ ಮತ್ತು ಬಾಂಗ್ಲಾದೇಶದ ಗಡಿಭಾಗದಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ಸರೀಸೃಪಗಳ ಬಳಕೆಯನ್ನು ಪರಿಶೀಲನೆ ಮಾಡುವುದಕ್ಕೆ ಗೃಹ ಸಚಿವ ಅಮಿತ್ ಶಾ ಅವರು ನಿರ್ದೇಶನ ನೀಡಿದ್ದಾರೆ ಎಂದು ಹೇಳಲಾಗಿದೆ. ಮಾರ್ಚ್ 26 ರಂದು ಬಿಎಸ್‌ಎಫ್ ಪ್ರಧಾನ ಕಚೇರಿಯಿಂದ ಬಾಂಗ್ಲಾದೇಶ ಗಡಿಯುದ್ದಕ್ಕೂ ಎಲ್ಲಾ ಕ್ಷೇತ್ರ ಘಟಕಗಳಿಗೆ ಕಳುಹಿಸಲಾದ ಸಂದೇಶದಲ್ಲಿ ಈ ವಿಚಾರವನ್ನು ಉಲ್ಲೇಖ ಮಾಡಲಾಗಿದೆ. ದುರ್ಬಲ ನದಿ ತೀರದ ಪ್ರದೇಶಗಳಲ್ಲಿ ಸರೀಸೃಪಗಳನ್ನು (ಹಾವುಗಳು ಅಥವಾ ಮೊಸಳೆಗಳಂತಹ ಪ್ರಾಣಿಗಳನ್ನು) ಬಿಡುವುದಕ್ಕೆ ಇರುವ ಸಾಧ್ಯತೆಯನ್ನು ಪರಿಶೀಲಿಸಬೇಕು ಎಂದು ಹೇಳಲಾಗಿದೆ ಎಂದು ವರದಿಯಾಗಿದೆ.

ಈ ವಿಚಾರವಾಗಿ ಬಿಎಸ್‌ಎಫ್ ಹೇಳಿದ್ದೇನು

ಇನ್ನು ಭಾರತ ಮತ್ತು ಬಾಂಗ್ಲಾದೇಶದ ಗಡಿ ಭಾಗದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಹಾವು - ಮೊಸಳೆಗಳನ್ನು ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಎಸ್‌ಎಫ್‌ ಅಧಿಕಾರಿಯೊಬ್ಬರು, ಇಲ್ಲಿಯವರೆಗೆ ಸರೀಸೃಪಗಳನ್ನು ಬಿಡುವ ನಿರ್ದೇಶನವನ್ನು ಜಾರಿಗೆ ತರಲಾಗಿಲ್ಲ. ಅದರ ಸಾಧ್ಯತೆಯನ್ನು ಅನ್ವೇಷಿಸಲು ನಿರ್ದೇಶನಗಳು ಬಂದಿವೆ. ಇದರಲ್ಲಿ ಹಲವಾರು ಸವಾಲುಗಳಿವೆ. ಸರೀಸೃಪಗಳನ್ನು ಹೇಗೆ ಖರೀದಿಸುವುದು ಮತ್ತು ನದಿ ತೀರದಲ್ಲಿ ವಾಸಿಸುವ ಸ್ಥಳೀಯ ಜನಸಂಖ್ಯೆಯ ಮೇಲೆ ಇದು ಯಾವ ರೀತಿ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುವುದನ್ನು ಅಧ್ಯಯನ ಮಾಡಬೇಕಾಗಿದೆ.

ಫೆಬ್ರವರಿ 9 ರಂದು ದೆಹಲಿಯ ಬಿಎಸ್‌ಎಫ್ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯ ನಂತರ ಈ ವಿಚಾರವಾಗಿ ಚರ್ಚೆ ನಡೆಸಲಾಗಿತ್ತು. ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಗಡಿಗಳಲ್ಲಿ ಬಿಎಸ್‌ಎಫ್ ಪ್ರಾಥಮಿಕ ಗಡಿ ಕಾವಲು ಪಡೆ ಇದೆ. ಬಾಂಗ್ಲಾದೇಶದ ಪೂರ್ವ ಗಡಿಯ ಹಲವಾರು ಭಾಗಗಳು ಹೆಚ್ಚಾಗಿ ಪ್ರವಾಹಕ್ಕೆ ಒಳಗಾಗುತ್ತವೆ. ಅಲ್ಲಿನ ಭೂ ಆಕಾರದ ಕಾರಣದಿಂದ ಗಟ್ಟಿ ಬೇಲಿ ಹಾಕುವುದು ಕಷ್ಟ. ಈ ಪ್ರದೇಶಗಳು ಜನಸಂಚಾರ ಹೆಚ್ಚಿರುವುದರಿಂದ, ಸರೀಸೃಪಗಳನ್ನು ಬಳಸುವುದು ಗಡಿಯ ಎರಡೂ ಬದಿಯ ಜನರಿಗೆ, ವಿಶೇಷವಾಗಿ ಪ್ರವಾಹದ ಸಮಯದಲ್ಲಿ, ದೊಡ್ಡ ಅಪಾಯವಾಗಬಹುದು ಎಂದೂ ಅವರು ಹೇಳಿರುವುದು ವರದಿಯಾಗಿದೆ.

ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಮಾರ್ಚ್ 17 ರ ವರದಿಯ ಪ್ರಕಾರ, ಬಾಂಗ್ಲಾದೇಶದೊಂದಿಗಿನ ಒಟ್ಟು 4,096.7 ಕಿ.ಮೀ ಗಡಿಯಲ್ಲಿ, ಸರ್ಕಾರವು 3,326.14 ಕಿ.ಮೀ ಬೇಲಿ ಹಾಕುವುದಕ್ಕೆ ಅನುಮೋದಿಸಿದೆ. ಇದರಲ್ಲಿ ಇಲ್ಲಿಯವರೆಗೆ 2,954.56 ಕಿ.ಮೀ ಬೇಲಿ ಹಾಕಲಾಗಿದೆ. ಒಟ್ಟು ಮಂಜೂರಾದ ಗಡಿ ಉದ್ದದ ಸುಮಾರು 371 ಕಿ.ಮೀ ಬೇಲಿ ಹಾಕಬೇಕಾಗಿದೆ.

ಇನ್ನು ಗೃಹ ವ್ಯವಹಾರಗಳ ಸಚಿವಾಲಯದ 2024-25 ರ ವಾರ್ಷಿಕ ವರದಿಯ ಪ್ರಕಾರ, ಭಾರತ-ಬಾಂಗ್ಲಾದೇಶ ಗಡಿಯು ಬೆಟ್ಟಗಳು, ನದಿಗಳು ಮತ್ತು ಕಣಿವೆಗಳಂತಹ ಕಠಿಣ ಭೂಪ್ರದೇಶದ ಮೂಲಕ ಹಾದುಹೋಗುತ್ತದೆ. ಆದರೂ ಬಿಎಸ್‌ಎಫ್ ಅಕ್ರಮ ಗಡಿಯಾಚೆಗಿನ ಚಟುವಟಿಕೆಗಳು ಮತ್ತು ಬಾಂಗ್ಲಾದೇಶದಿಂದ ಅಕ್ರಮ ವಲಸೆಯನ್ನು ತಡೆಯಲು 24 ಗಂಟೆಗಳ ಕಾಲ ತನ್ನ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿದೆ ಎಂದು ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+