ಏಕಕಾಲಕ್ಕೆ 68 ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜು

Subscribe to Oneindia Kannada

ನವದೆಹಲಿ, ಆಗಸ್ಟ್, 31: ಅತ್ಯಂತ ಕ್ಲಿಷ್ಟಕರ ಎನ್ನಲಾದ ಸ್ಕ್ರಮ್‌ಜೆಟ್‌ ರಾಕೆಟ್‌ ಎಂಜಿನ್‌ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 'ಇಸ್ರೋ' ಮತ್ತೊಂದು ಸಾಧನೆಗೆ ಸಿದ್ಧವಾಗಿದೆ.

ಕಳೆದ ಜೂನ್ ನಲ್ಲಿ 22 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡಿ ದಾಖಲೆ ನಿರ್ಮಿಸಿದ್ದ ಇಸ್ರೋ ಇದೀಗ 68 ವಿದೇಶಿ ಉಪಗ್ರಹಗಳನ್ನು ಒಂದೇ ಬಾರಿ ಉಡಾವಣೆ ಮಾಡಲು ಮುಂದಾಗಿದೆ.[ಇಸ್ರೋದ ಸ್ಕ್ರಮ್‌ಜೆಟ್‌ ರಾಕೆಟ್‌ ಎಂಜಿನ್‌ ವಿಶೇಷವೇನು?]

India bags orders to launch 68 foreign satellites

ಅಮೆರಿಕಕ್ಕೆ ಸೇರಿದ ಒಂದು ಡಜನ್ ಉಪಗ್ರಹವನ್ನು ಇಸ್ರೋ ಉಡಾವಣೆ ಮಾಡಲಾಗುವುದು ಎಂದು ಇಂಡಿಯನ್ ಸ್ಪೇಸ್ ಏಜೆನ್ಸಿಯ ರಾಕೇಶ್ ಶಶಿಭೂಷಣ್ ತಿಳಿಸಿದ್ದಾರೆ.[ಅಬ್ಬಬ್ಬಾ ಇಸ್ರೋ, ಒಂದೇ ಬಾರಿಗೆ 22 ಉಪಗ್ರಹ ಉಡಾವಣೆ]

ಬೆಲ್ಜಿಯಂ, ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಸ್ರೇಲ್ ಮತ್ತು ಅಮೆರಿಕ ಭಾರತದ ನೆರವನ್ನು ಪಡೆದುಕೊಳ್ಳಲಿವೆ. ಮಂಗಳಯಾನದ ನಂತರ ಇಸ್ರೋ ಸಾಧನೆಯ ಹಾದಿಯಲ್ಲಿ ಮುಂದುವರಿಯುತ್ತಿದ್ದು ಅತಿ ಕಡಿಮೆ ವೆಚ್ಚದಲ್ಲಿ ಉಪಗ್ರಹವನ್ನು ಕಕ್ಷೆಗೆ ಸೇರಿಸುವುದರಲ್ಲಿ ಉಳಿದ ದೇಶಗಳನ್ನು ಹಿಂದಕ್ಕೆ ಹಾಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Riding on the success of its rocket launches and domain expertise in space technology, India has secured new orders to launch 68 satellites for overseas customers, including a dozen from the US, a top official said on Tuesday.
Please Wait while comments are loading...