ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ಭಾರತ ಅಸ್ತು: 14 ದೇಶಗಳಿಗೆ ನಿರ್ಬಂಧ

|
Google Oneindia Kannada News

ನವದೆಹಲಿ, ನವೆಂಬರ್‌ 26: ಕಳೆದ ವರ್ಷ ಕೊರೊನಾ ವೈರಸ್‌ ಸೋಂಕು ಕಾರಣದಿಂದಾಗಿ ಲಾಕ್‌ಡೌನ್ ಆದ ಸಂದರ್ಭದಲ್ಲಿ ದೇಶದಲ್ಲಿ ಅಂತಾರಾಷ್ಟ್ರೀಯ ವಿಮಾನವನ್ನು ನಿಷೇಧ ಮಾಡಲಾಗಿದೆ. ಈಗ ಎರಡು ವರ್ಷಗಳ ಬಳಿಕ ನಿಯಮವನ್ನು ಸಡಿಲಿಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಹೊಸ ಕೋವಿಡ್ ರೂಪಾಂತರದ ಹಿನ್ನೆಲೆಯಿಂದಾಗಿ 14 ದೇಶಗಳಿಗೆ ಈಗಲೂ ನಿರ್ಬಂಧವನ್ನು ವಿಧಿಸಲಾಗಿದೆ.

ಈ ವರ್ಷ ಕೊನೆಯಾಗುವಷ್ಟರಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ ಎಂದು ಕೇಂದ್ರ ವಾಯುಯಾನ ಸಚಿವಾಲಯ ಕಾರ್ಯದರ್ಶಿ ರಾಜೀವ್‌ ಬನ್ಸಾಲ್‌ ಇತ್ತೀಚೆಗೆ ಮಾಹಿತಿ ನೀಡಿದ್ದರು. ಕೋವಿಡ್‌ ಸೋಂಕಿನ ಹಿನ್ನೆಲೆಯಿಂದಾಗಿ ಅಂತಾರಾಷ್ಟ್ರೀಯ ವಿಮಾನಯಾನ ನಿಷೇಧ ಮಾಡಿದ ಬಳಿಕ ಈಗ ಏರ್‌ ಬಬಲ್‌ ಯೋಜನೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಮಾನಯಾನ ನಡೆಯುತ್ತಿದೆ.

ಭಾರತವು ಪ್ರಸ್ತುತ ಇಂತಹ 25 ಒಪ್ಪಂದಗಳನ್ನು ಹೊಂದಿದೆ. ಏರ್‌ ಬಬಲ್‌ ವ್ಯವಸ್ಥೆಯ ಮೂಲಕ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳು ಒಪ್ಪಂದ ಮಾಡಿಕೊಂಡಿರುವ ದೇಶಗಳ ನಡುವೆ ಕೆಲವು ಷರತ್ತುಗಳೊಂದಿಗೆ ಹಾರಾಟ ನಡೆಸು‌ತ್ತದೆ.

India allows regular international flights; bars 14 countries

ಆದರೆ ಈಗ ಎಲ್ಲಾ ನಿರ್ಬಂಧವನ್ನು ಸಡಿಲಿಕೆ ಮಾಡಿರುವ ಕೇಂದ್ರ ಸರ್ಕಾರವು 14 ದೇಶಗಳನ್ನು ಹೊರತುಪಡಿಸಿ ಉಳಿದ ದೇಶಗಳಿಂದ ಅಂತಾರಾಷ್ಟ್ರೀಯ ವಿಮಾನವನ್ನು ಸಹಜ ಸ್ಥಿತಿಗೆ ಡಿಸೆಂಬರ್‌ 14 ರಿಂದ ತರಲಾಗುತ್ತದೆ ಎಂದು ಹೇಳಿದೆ. ಸಂಚಾರಕ್ಕೆ ಈಗಲೂ ನಿರ್ಬಂಧ ವಿಧಿಸಲಾಗಿರುವ ದೇಶಗಳು ಯಾವುದು ಎಂದು ಇಲ್ಲಿ ವಿವರಿಸಲಾಗಿದೆ. ಮುಂದೆ ಓದಿ.

ಯಾವೆಲ್ಲಾ ದೇಶಗಳಿಗೆ ನಿರ್ಬಂಧ?

ಯುಕೆ, ಫ್ರಾನ್ಸ್‌, ಜರ್ಮನಿ, ನೆದರ್‌ಲ್ಯಾಂಡ್‌, ಫಿನ್‌ಲ್ಯಾಂಡ್‌, ದಕ್ಷಿಣ ಆಫ್ರಿಕಾ, ಬ್ರೆಜಿಲ್‌, ಚೀನಾ, ಮಾರಿಷಸ್, ನ್ಯೂಜಿಲ್ಯಾಂಡ್‌, ಸಿಂಗಾಪುರ, ಬಾಂಗ್ಲಾದೇಶ, ಬೋಟ್ಸ್ವಾನ, ಜಿಂಬಾವೆ ಸೇರಿದಂತೆ ಒಟ್ಟು 14 ದೇಶಗಳಿಗೆ ನಿರ್ಬಂಧ ವಿಧಿಸಲಾಗಿದೆ. 14 ದೇಶಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ದೇಶಗಳಿಂದ ನಿಯಮಿತ ಅಂತಾರಾಷ್ಟ್ರೀಯ ವಿಮಾನಗಳು ಭಾರತಕ್ಕೆ ಹಾರಾಟ ನಡೆಸಲು ಅನುಮತಿ ನೀಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿದೆ.

ಹೊಸ ಕೋವಿಡ್‌ ರೂಪಾಂತರದ ಬಗ್ಗೆ ನೀವು ತಿಳಿಯಲೇ ಬೇಕಾದ ಮಾಹಿತಿಹೊಸ ಕೋವಿಡ್‌ ರೂಪಾಂತರದ ಬಗ್ಗೆ ನೀವು ತಿಳಿಯಲೇ ಬೇಕಾದ ಮಾಹಿತಿ

ಮುಖ್ಯವಾಗಿ ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತರ ಕಾಣಿಸಿಕೊಂಡಿರುವ ಹಿನ್ನೆಲೆಯಿಂದಾಗಿ ಈ ನಿರ್ಬಂಧವನ್ನು ಮಾಡಲಾಗಿದೆ. "ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತರ ಕಾಣಿಸಿಕೊಂಡಿರುವ ಹಿನ್ನೆಲೆಯಿಂದಾಗಿ ಈ ದೇಶಗಳಿಂದ ವಿಮಾನಯಾನವನ್ನು ನಿರ್ಬಂಧ ಮಾಡಲಾಗಿದೆ," ಎಂದು ಮೂಲಗಳು ಹೇಳಿದೆ.

ಕಳೆದ ವಾರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, "ಅಂತಾರಾಷ್ಟ್ರೀಯ ವಿಮಾನಯಾನವನ್ನು ಸಹಜಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯ ಆರಂಭ ಮಾಡಿದೆ," ಎಂದು ತಿಳಿಸಿದ್ದರು. "ಸರ್ಕಾರವು ಈಗ ಪರಿಸ್ಥಿತಿಯನ್ನು ಸಹಜತೆಗೆ ಮರಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಕೊರೊನಾ ವೈರಸ್‌ ಸೋಂಕಿನ ಹೊಸ ಅಲೆಯಿಂದ ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಮವನ್ನು ಕೈಗೊಳ್ಳಲಾಗುತ್ತದೆ," ಎಂದು ಕೂಡಾ ತಿಳಿಸಿದ್ದರು.

ಪ್ರಸ್ತುತ ದೇಶದಲ್ಲಿ ಕೊರೊನಾ ವೈರಸ್‌ ಸೋಂಕಿನ ಮೂರನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ಮೂರನೇ ಅಲೆಯಿಂದ ಜನರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರವು ಕಾರ್ಯ ನಿರ್ವಹಣೆ ಮಾಡುತ್ತಿದೆ. ವಿಶೇಷವಾಗಿ ಹಲವಾರು ಪ್ರಮುಖ ಯುರೋಪಿಯನ್‌ ರಾಷ್ಟ್ರಗಳಲ್ಲಿ ಕೊರೊನಾ ವೈರಸ್‌ ಸೋಂಕು ತೀವ್ರ ಪ್ರಮಾಣದಲ್ಲಿ ಹೆಚ್ಚಳ ಆಗುತ್ತಿದೆ ಎಂಬುವುದನ್ನು ಗಮನಿಸಬೇಕಾಗಿದೆ," ಎಂದು ಹೇಳಿದ್ದರು.

ಯುರೋಪಿಯನ್‌ ರಾಷ್ಟ್ರಗಳಲ್ಲಿ ಕೋವಿಡ್‌ ಹೆಚ್ಚಳ

"ಪ್ರಸ್ತುತ ದೇಶದಲ್ಲಿ ಕೊರೊನಾ ವೈರಸ್‌ ಸೋಂಕಿನ ಮೂರನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ಮೂರನೇ ಅಲೆಯಿಂದ ಜನರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರವು ಕಾರ್ಯ ನಿರ್ವಹಣೆ ಮಾಡುತ್ತಿದೆ. ವಿಶೇಷವಾಗಿ ಹಲವಾರು ಪ್ರಮುಖ ಯುರೋಪಿಯನ್‌ ರಾಷ್ಟ್ರಗಳಲ್ಲಿ ಕೊರೊನಾ ವೈರಸ್‌ ಸೋಂಕು ತೀವ್ರ ಪ್ರಮಾಣದಲ್ಲಿ ಹೆಚ್ಚಳ ಆಗುತ್ತಿದೆ ಎಂಬುವುದನ್ನು ಗಮನಿಸಬೇಕಾಗಿದೆ," ಎಂದು ಹೇಳಿದ್ದರು.

ವರ್ಷಾಂತ್ಯದೊಳಗೆ ಅಂತಾರಾಷ್ಟ್ರೀಯ ವಿಮಾನಯಾನ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ: ಕೇಂದ್ರ ವರ್ಷಾಂತ್ಯದೊಳಗೆ ಅಂತಾರಾಷ್ಟ್ರೀಯ ವಿಮಾನಯಾನ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ: ಕೇಂದ್ರ

ಕೋವಿಡ್‌ ವೇಳೆ ನಿರ್ಬಂಧ ಸಡಿಲಿಕೆ ಮಾಡಿ ಗರಿಷ್ಠ 33 ಪ್ರತಿಶತದಷ್ಟು ಕಾರ್ಯ ನಿರ್ವಹಣೆ ಮಾಡಲು ಅನುಮತಿ ನೀಡಲಾಗಿತ್ತು. ಆ ಬಳಿಕ ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ಮಿತಿಯನ್ನು ಶೇಕಡ 80 ಕ್ಕೆ ಏರಿಕೆ ಮಾಡಲಾಯಿತು. ಆ ನಂತರ ದೇಶದಲ್ಲಿ ಕೊರೊನಾ ವೈರಸ್‌ ಸೋಂಖಿನ ಎರಡನೇ ಅಲೆಯು ಕಾಣಿಸಿಕೊಂಡಿತು. ಈ ವರ್ಷದ ಜೂನ್‌ನಲ್ಲಿ ಈ ದರವನ್ನು ಮತ್ತೆ ಶೇಕಡ 50 ಕ್ಕೆ ಇಳಿಕೆ ಮಾಡಲಾಗಿದೆ. (ಒನ್‌ಇಂಡಿಯಾ ಸುದ್ದಿ)

English summary
India allows regular international flights; bars 14 countries including the UK, Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X