ಸ್ವಾತಂತ್ರ್ಯ ದಿನಾಚರಣೆ 2021: ದೇಶಭಕ್ತಿ ಸಾರುವ ಸಂದೇಶಗಳು ಹಾಗೂ ಉಲ್ಲೇಖಗಳು
ನಾವು ಆಚರಿಸುತ್ತಿರುವ 75ನೇ ಸ್ವಾತಂತ್ರ್ಯ ದಿನಾಚರಣೆಯು ನಮ್ಮ ಪೂರ್ವಜರು ಮಾಡಿರುವ ತ್ಯಾಗದ ಫಲ, ಅವರ ಬಲಿದಾನವನ್ನು ಸ್ಮರಿಸುತ್ತಾ, ದೇಶದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸುವ ಜವಾಬ್ದಾರಿ ಎಲ್ಲಾ ಭಾರತೀಯರ ಮೇಲಿದೆ.
ಕೊರೊನಾವೈರಸ್ ಪರಿಸ್ಥಿತಿ ನಡುವೆಯೇ ಭಾರತವು 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಳ್ಳುತ್ತಿದೆ. 1947 ಆಗಸ್ಟ್ 15 ಮಧ್ಯರಾತ್ರಿ 12 ಗಂಟೆಗೆ ಭಾರತ ಬ್ರಿಟಿಷರ ದಾಸ್ಯದಿಂದ ಮುಕ್ತವಾಯಿತು. ಸುಮಾರು 200 ವರ್ಷಗಳ ಕಾಲ ನಮ್ಮ ಹಕ್ಕಾದ ಸ್ವಾತಂತ್ರ್ಯ ಪಡೆಯಲು ಅಸಂಖ್ಯಾತ ಜನ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರ ಬಲಿದಾನ-ತ್ಯಾಗದಿಂದಲೇ ನಮಗೆ ಸ್ವಾತಂತ್ರ್ಯ ಸಿಕ್ಕಿದೆ.
5ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರವು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 259 ಸದಸ್ಯರ ಉನ್ನತ ಮಟ್ಟದ ರಾಷ್ಟ್ರೀಯ ಸಮಿತಿಯನ್ನು ರೂಪಿಸಿದೆ.

ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಸೇರಿದಂತೆ ಹಲವು ಪ್ರಭಾವಿ ರಾಜಕಾರಿಣಿಗಳು ಮತ್ತು ಅಧಿಕಾರಿಗಳು ಈ ಸಮಿತಿಯಲ್ಲಿದ್ದಾರೆ.
ಖ್ಯಾತ ಗಾಯಕಿ ಲತಾ ಮಂಗೇಶ್ಕರ್, ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್, ಹಿರಿಯ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಮತ್ತು ಬಹುತೇಕ ಎಲ್ಲ ಕೇಂದ್ರ ಸಚಿವರು ಮತ್ತು ಕೆಲ ರಾಜ್ಯಪಾಲರು ಸಮಿತಿಯಲ್ಲಿದ್ದಾರೆ.
ಆಗಸ್ಟ್ 15 ಇಡೀ ಭಾರತಕ್ಕೆ ಉತ್ಸಾಹ ಮತ್ತು ಸಂತೋಷದ ದಿನವಾಗಿದೆ. ಈ ದಿನ ನಾವು ನಮ್ಮ ಸ್ವಾತಂತ್ರ್ಯ ದಿನವನ್ನು ಪರಿಗಣಿಸುತ್ತೇವೆ. ಈ ದಿನವು ಯಾವುದೇ ಜಾತಿ, ಧರ್ಮ, ಪ್ರಾಂತ್ಯ ಮತ್ತು ಸಂಸ್ಕೃತಿಗಿಂತ ದೊಡ್ಡದಾಗಿದೆ. ಇಂದು, ನಾವು ನಮ್ಮ 74 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿರುವಾಗ, ಈ ದಿನದ ಮಹತ್ವವನ್ನು ನಾವು ಅರ್ಥಮಾಡಿಕೊಳ್ಳುವುದು ಅವಶ್ಯಕವಾಗಿದೆ.

ಆಗಿನ ಭಾರತದ ವೈಸ್‌ರಾಯ್ ಆಗಿದ್ದ ಲಾರ್ಡ್ ಮೌಂಟೇನ್‌ನ ಪತ್ರಿಕಾ ಕಾರ್ಯದರ್ಶಿ ಕ್ಯಾಂಪ್‌ಬೆಲ್ ಜಾನ್ಸನ್ ಅವರ ಪ್ರಕಾರ, ಜಪಾನ್ ಮಿತ್ರಪಕ್ಷಗಳಿಗೆ ಶರಣಾದ ಎರಡನೇ ವಾರ್ಷಿಕೋತ್ಸವವು ಆಗಸ್ಟ್ 15 ರಂದು ಬೀಳುತ್ತಿದೆ. ಈ ಕಾರಣಕ್ಕಾಗಿ ಈ ದಿನ ಭಾರತವನ್ನು ಸ್ವತಂತ್ರಗೊಳಿಸಲು ನಿರ್ಧರಿಸಲಾಯಿತು.
ಆಗಸ್ಟ್ 15 ಭಾರತದ ಹೊರತಾಗಿ ಮೂರು ದೇಶಗಳು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತವೆ. ಆಗಸ್ಟ್ 15, 1945 ರಂದು ದಕ್ಷಿಣ ಕೊರಿಯಾ ಜಪಾನ್‌ನಿಂದ ಬೇರ್ಪಟ್ಟಿತು. ಆಗಸ್ಟ್ 15, 1971 ರಂದು ಬಹ್ರೇನ್ ಬ್ರಿಟನ್‌ನಿಂದ ಸ್ವಾತಂತ್ರ್ಯಗೊಂಡಿತು ಮತ್ತು ಫ್ರಾನ್ಸ್ 15 ಆಗಸ್ಟ್ 1960 ರಂದು ಕೊಂಗೊವನ್ನು ಸ್ವತಂತ್ರವೆಂದು ಘೋಷಿಸಿತು.
ಆಗಸ್ಟ್ 15, 1854 ರಂದು ಈಸ್ಟ್ ಇಂಡಿಯಾ ಕಂಪನಿ ರೈಲ್ವೆ ಕಲ್ಕತ್ತಾದಿಂದ ರೈಲು ಓಡಿಸಿತು, ಅಂದರೆ ಪ್ರಸ್ತುತ ಕೋಲ್ಕತ್ತಾದಿಂದ ಹೂಗ್ಲಿಗೆ. ಇದನ್ನು ಅಧಿಕೃತವಾಗಿ 1855 ರಲ್ಲಿ ನಡೆಸಲಾಯಿತು.

ಭಾರತದ ಸ್ವಾತಂತ್ರ್ಯ ಚಳವಳಿಗೆ ಮಹಾತ್ಮ ಗಾಂಧಿ ನೇತೃತ್ವ ವಹಿಸಿದ್ದರು, ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾಗವಹಿಸಲಿಲ್ಲ.
ಬಾಪು ಆ ದಿನ ದೆಹಲಿಯಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಬಂಗಾಳದ ನೊಖಾಲಿಯಲ್ಲಿದ್ದರು. ಅಲ್ಲಿ ಅವರು ಹಿಂದೂ ಮತ್ತು ಮುಸ್ಲಿಮರ ನಡುವಿನ ಕೋಮು ಗಲಭೆಗಳನ್ನು ತಡೆಯಲು ಉಪವಾಸ ಮಾಡುತ್ತಿದ್ದರು.
ಪ್ರತಿ ಸ್ವಾತಂತ್ರ್ಯ ದಿನದಂದು ಭಾರತೀಯ ಪ್ರಧಾನಿ ಕೆಂಪು ಕೋಟೆಯಿಂದ ಧ್ವಜವನ್ನು ಹಾರಿಸುತ್ತಾರೆ. ಆದರೆ ಅದು ಆಗಸ್ಟ್ 15, 1947 ರಂದು ಆಗಲಿಲ್ಲ. ಲೋಕಸಭೆಯ ಸಚಿವಾಲಯದ ಪತ್ರಿಕೆಯ ಪ್ರಕಾರ ಆಗಸ್ಟ್ 16 ರಂದು ಪಂಡಿತ್ ನೆಹರು ಕೆಂಪು ಕೋಟೆಯಿಂದ ಧ್ವಜವನ್ನು ಹಾರಿಸಿದರು.
ಆಗಸ್ಟ್ 15 ರವರೆಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿರೇಖೆಯನ್ನು ನಿರ್ಧರಿಸಲಾಗಿರಲಿಲ್ಲ.
ಸ್ವಾತಂತ್ರ್ಯ ದಿನಾಚರಣೆ ಉಲ್ಲೇಖಗಳು:
*ಅತ್ಯಂತ ದೊಡ್ಡ ಅಪರಾಧವೆಂದರೆ ಅನ್ಯಾಯ ಮತ್ತು ತಪ್ಪುಗಳೊಂದಿಗೆ ರಾಜಿ ಮಾಡಿಕೊಳ್ಳುವುದು ಎಂಬುದನ್ನು ಮರೆಯಬೇಡಿ. ಶಾಶ್ವತ ಕಾನೂನನ್ನು ನೆನಪಿಡಿ: ನೀವು ಪಡೆಯಲು ಬಯಸಿದರೆ ನೀವು ನೀಡಬೇಕು" - ನೇತಾಜಿ ಸುಭಾಷ್ ಚಂದ್ರ ಬೋಸ್
*"ನಿಮ್ಮ ರಕ್ತವು ಇನ್ನೂ ಕುದಿಯದಿದ್ದರೆ ಅದು ನಿಮ್ಮ ರಕ್ತನಾಳಗಳಲ್ಲಿ ಹರಿಯುವ ನೀರು ಅಷ್ಟೇ. ಇನ್ನೂ ನೀವು ತಾಯ್ನಾಡಿಗೆ ಸೇವೆ ಮಾಡದಿದ್ದರೆ ಯುವಕರ ಧ್ಯೇಯವೇನು ?" - ಚಂದ್ರ ಶೇಖರ್ ಆಜಾದ್
*"ಎಲ್ಲಿಯವರೆಗೆ ನೀವು ಸಾಮಾಜಿಕ ಸ್ವಾತಂತ್ರ್ಯವನ್ನು ಸಾಧಿಸುವುದಿಲ್ಲವೋ ಅಲ್ಲಿಯವರೆಗೆ ಕಾನೂನಿನಿಂದ ಒದಗಿಸಲಾದ ಯಾವುದೇ ಸ್ವಾತಂತ್ರ್ಯವು ನಿಮಗೆ ಪ್ರಯೋಜನವಾಗುವುದಿಲ್ಲ" - ಬಿ.ಆರ್. ಅಂಬೇಡ್ಕರ್
*"ಒಬ್ಬ ವ್ಯಕ್ತಿಯು ಒಂದು ಕಲ್ಪನೆಗಾಗಿ ಸಾಯಬಹುದು, ಆದರೆ ಆ ಕಲ್ಪನೆಯು ಅವನ ಮರಣದ ನಂತರ ಸಾವಿರ ಜನರ ಜೀವನದಲ್ಲಿ ಬದುಕುಳಿದಿರುತ್ತದೆ" - ನೇತಾಜಿ ಸುಭಾಷ್ ಚಂದ್ರ ಬೋಸ್
*"ನಾವು ನಂಬಿದ್ದೆವು ಮತ್ತು ಈಗಲೂ ನಂಬುತ್ತಿದ್ದೇವೆ ನಮ್ಮ ಸ್ವಾತಂತ್ರ್ಯವನ್ನು ವಿಭಜಿಸಲಾಗದು. ಶಾಂತಿ ಅವಿಭಾಜ್ಯವಾಗಿದೆ ಮತ್ತು ಆರ್ಥಿಕ ಸಮೃದ್ಧಿಯು ಅವಿಭಾಜ್ಯವಾಗಿದೆ ಎಂದು ನಾವು ಈಗ ನಂಬುತ್ತೇವೆ." - ಇಂದಿರಾ ಗಾಂಧಿ
*"ವ್ಯಕ್ತಿಗಳನ್ನು ಕೊಲ್ಲುವುದು ಸುಲಭ ಆದರೆ ನೀವು ಅವರ ಆಲೋಚನೆಗಳನ್ನು ಕೊಲ್ಲಲು ಸಾಧ್ಯವಿಲ್ಲ. ಮಹಾನ್ ಸಾಮ್ರಾಜ್ಯಗಳೇ ಕುಸಿಯಿತು ಆದರೆ ಅವರ ಆಲೋಚನೆಗಳು ಉಳಿದುಕೊಂಡಿವೆ." - ಭಗತ್ ಸಿಂಗ್
*"ನೀವು ನನಗೆ ನಿಮ್ಮ ರಕ್ತವನ್ನು ಕೊಡಿ ಮತ್ತು ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ!" - ನೇತಾಜಿ ಸುಭಾಷ್ ಚಂದ್ರ ಬೋಸ್
*ನಿಮ್ಮ ದೇಶವು ನಿಮಗಾಗಿ ಏನು ಮಾಡಬಹುದು ಎಂದು ಕೇಳಬೇಡಿ. ನಿಮ್ಮ ದೇಶಕ್ಕಾಗಿ ನೀವು ಏನು ಮಾಡಬಹುದು ಎಂದು ಕೇಳಿ - ಜವಾಹರಲಾಲ್ ನೆಹರು
ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಸಾರುವ ಅರ್ಥಪೂರ್ಣ ಸಂದೇಶಗಳು
*ಸ್ವಾತಂತ್ರ್ಯವು ದೇವರು ನಮಗೆ ನೀಡಿದ ವರ. ನಮ್ಮಿಂದ ಈ ವರವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನಾವೆಲ್ಲರೂ ಈ ದಿನವನ್ನು ಸಂಭ್ರಮಿಸೋಣ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
*ಸ್ವಾತಂತ್ರ್ಯವು ಬಣ್ಣಗಳು ಅಥವಾ ಆಕಾರಗಳನ್ನು ನೋಡುವುದಿಲ್ಲ. ಈಗಾಗಲೇ ಜಗತ್ತಿನಲ್ಲಿ ಸಾಕಷ್ಟು ದ್ವೇಷ ಮತ್ತು ಹಿಂಸೆಯಿದೆ ಅವುಗಳ ನಡುವೆ ಈಗ ನಾವು ಪ್ರೀತಿ, ಏಕತೆ ಮತ್ತು ತಿಳುವಳಿಕೆಯಿಂದ ಉತ್ತಮ ಭವಿಷ್ಯವನ್ನು ನಿರ್ಮಿಸಬೇಕಾಗಿದೆ. ಸರ್ವರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು
*ಇಂದು ಮಾತನಾಡುವ ಮತ್ತು ಕೇಳುವ ಹಕ್ಕನ್ನು ನಾವು ಹೊಂದಿದ್ದೇವೆ ಎಂದರೆ ಹಲವಾರು ಧೈರ್ಯಶಾಲಿ ಆತ್ಮಗಳು ಅದಕ್ಕಾಗಿ ಹೋರಾಡಿವೆ. ಅವರ ತ್ಯಾಗದ ಬಗ್ಗೆ ಇಂದು ನಾವೆಲ್ಲರೂ ಸ್ಮರಿಸೋಣ
* ದೇಶದ ತಿರಂಗ ಧ್ವಜ ಹಾರುವಾಗ ನಮ್ಮ ಎದೆಯು ಹೆಮ್ಮೆಯಿಂದ ಉಬ್ಬುತ್ತದೆ, ಸಂತೋಷವನ್ನು ಹರಡುತ್ತದೆ. ನಮ್ಮ ದೇಶ ನಮ್ಮ ಹೆಮ್ಮೆ-ಜೈ ಹಿಂದ್, ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
*ಉಸಿರಿರುವ ತನಕ ಭಾರತೀಯನೆಂದು ಬೀಗು, ಕೊನೆಯುಸಿರೆಳೆಯುವಾಗಲೂ ವಂದೇ ಮಾತರಂ ಎಂದು ಕೂಗು.
*ಸ್ವಾತಂತ್ರ್ಯ ಎಂಬುವುದು ಪ್ರತಿಯೊಬ್ಬರ ಜೀವನದಲ್ಲಿ ಬಹುಮುಖ್ಯವಾದ ಅಂಶ. ಇದನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ, ನಮ್ಮ ಸಮಾಜದ ರಕ್ಷಣೆಗೆ ಬದ್ಧರಾಗಿರೋಣ.
* ಸ್ವಾತಂತ್ರ್ಯವಿಲ್ಲದ ಮೇಲೆ ಹೆಸರಿಲ್ಲ, ಗುರಿಯಿಲ್ಲ, ದೇಶವಿಲ್ಲ, ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ವಿರುದ್ಧ ಹೋರಾಡಿ ನಮಗೆ ಸ್ವಾತಂತ್ರ್ಯಕೊಡಿಸಿದ್ದಾರೆ, ಅವರಿಗೆ ನಮ್ಮ ನಮನಗಳು, 74ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
*ನನ್ನ ರಾಷ್ಟ್ರದ ಮೇಲಿನ ನನ್ನ ಪ್ರೀತಿಗೆ ಮಿತಿಯಿಲ್ಲ. ನನ್ನ ಜನರ ಮೇಲಿನ ನನ್ನ ಪ್ರೀತಿಗೆ ಕೊನೆಯಿಲ್ಲ. ನನ್ನ ದೇಶವು ಸದಾ ಸಂತಸದಿಂದಿರಲು ನಾನು ಬಯಸುತ್ತೇನೆ. ಈ ವಿಶೇಷ ದಿನದಂದು ಶುಭ ಕೋರುವ ಮೊದಲ ವ್ಯಕ್ತಿ ನಾನಾಗಲಿ ಎನ್ನುತ್ತಾ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
* ಈ ದೇಶಕ್ಕೆ ಸ್ವಾತಂತ್ರ್ಯ ನೀಡಲು ಲಕ್ಷಾಂತರು ದೇಶ ಭಕ್ತರು ತಮ್ಮ ರಕ್ತವನ್ನು ಬಲಿದಾನ ಮಾಡಿದ್ದಾರೆ, ಅವರಿಗೆ ನಮ್ಮದೊಂದು ಸಲಾಂ-ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
* ನಮ್ಮನ್ನು ನಿನ್ನ ತೋಳಿನಲ್ಲಿ ಅಪ್ಪಿಕೊಂಡಿರುವುದಕ್ಕೆ ಧನ್ಯವಾದಗಳು ಭಾರತಮಾತೆ, ನಿನ್ನ ರಕ್ಷಣೆ ನಮ್ಮ ಹೊಣೆ, ಅದಕ್ಕಾಗಿ ಎಂಥ ಬಲಿದಾನಕ್ಕೂ ಸದಾ ಸಿದ್ಧ, ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
* ಸ್ವಾತಂತ್ರ್ಯ ಎಂಬುವುದು ಪ್ರತಿಯೊಬ್ಬ ಜೀವನದಲ್ಲಿ ಬಹುಮುಖ್ಯವಾದ ಅಂಶ. ಇದನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ, ನಮ್ಮ ಸಮಾಜದ ರಕ್ಷಣೆಗೆ ಬದ್ಧರಾಗಿರೋಣ, ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
* ಸ್ವಾತಂತ್ರ್ಯ ದಿನಾಚರಣೆ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ಫಲ. ಅವರ ಬಲಿದಾನವನ್ನು ಸಾರ್ಥಕವಾಗಿಸೋಣ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
* ಸ್ವಾತಂತ್ರ್ಯ ದಿನಾಚರಣೆ ಎಂಬುವುದು ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದ ಹೀರೋಗಳನ್ನು ಸ್ಮರಿಸುವ ದಿನ. ಜೈ ಹಿಂದ್
* ನಮ್ಮ ಹಿರಿಯರ ಬಲಿದಾನ ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ, ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು, ನಾವು ದೇಶದ ರಕ್ಷಣೆಗಾಗಿ ಸದಾ ಸಿದ್ಧ-ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
ಫೇಸ್‌ಬುಕ್, ವಾಟ್ಸಾಪ್ ಸಂದೇಶಗಳು:
ಈ ಸ್ವಾತಂತ್ರ್ಯ ದಿನ ನಮ್ಮ ರಾಷ್ಟ್ರದ ಮಹಾನ್ ನಾಯಕರ ಹೋರಾಟಕ್ಕೆ ಗೌರವಿಸುತ್ತಾ, ನಮ್ಮ ದೇಶದ ಶಾಂತಿ ಮತ್ತು ಐಕ್ಯತೆಯನ್ನು ರಕ್ಷಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ. ಈ ವಿಶೇಷ ದಿನದಂದು ಹೊಸ ನಾಳೆಯ ಕನಸುಗಳು ನನಸಾಗಲಿ ಎಂದು ಹಾರೈಸುತ್ತೇವೆ, ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
ನಮ್ಮ ದೇಶಕ್ಕಾಗಿ ಈವರೆಗೂ ಮಡಿದ ಪ್ರತಿಯೊಬ್ಬ ಯೋಧನನ್ನೂ ನೆನೆಯುತ್ತಾ, ಈ ವರ್ಷದ ಸಾತಂತ್ರ್ಯ ದಿನವನ್ನು ಯೋಧರಿಗೆ ಅರ್ಪಿಸೋಣ.
ನಾವು ಸ್ವತಂತ್ರವಾಗಿ ಬದುಕಲು ಸಾವಿರಾರು ಸೈನಿಕರು ತಮ್ಮ ಪ್ರಾಣವನ್ನು ಅರ್ಪಿಸಿದರು, ಅವರಿಗೆಲ್ಲಾ ಋಣಿಯಾಗಿರೋಣ. ಸ್ವಾತಂತ್ರ್ಯ ದಿನದ ಶುಭಾಶಯಗಳು
ನಮ್ಮ ದೇಶ ಈ ದಿನವನ್ನು ಆಚರಿಸಲು ಸಾವಿರಾರು ಜನರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಅವರ ತ್ಯಾಗವನ್ನು ಎಂದಿಗೂ ಮರೆಯಬಾರದು. ಅವರೆಲ್ಲರನ್ನು ಸ್ಮರಿಸುತ್ತಾ ಹೆಮ್ಮೆಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸೋಣ.
ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ವೀರಯೋಧರು ವೈಯಕ್ತಿಕ ಕುಟುಂಬ, ಜೀವನ, ಪ್ರೀತಿ ಅಂತಿಮವಾಗಿ ತಮ್ಮ ಪ್ರಾಣವನ್ನೂ ತ್ಯಾಗ ಮಾಡಿದ್ದಾರೆ. ಈ ದೇಶದ ಸ್ವಾತಂತ್ರ್ಯದ ಬೆಲೆ ನನಗೆ ತಿಳಿದಿದೆ. ನಾನೊಬ್ಬ ಅಪ್ಪಟ ದೇಶಭಕ್ತ, ನನ್ನ ದೇಶ, ನನ್ನ ಹೆಮ್ಮೆ.
ನನ್ನ ರಾಷ್ಟ್ರದ ಮೇಲಿನ ನನ್ನ ಪ್ರೀತಿಗೆ ಮಿತಿಯಿಲ್ಲ. ನನ್ನ ಜನರ ಮೇಲಿನ ನನ್ನ ಪ್ರೀತಿಗೆ ಕೊನೆಯಿಲ್ಲ. ನನ್ನ ದೇಶವು ಸದಾ ಸಂತಸದಿಂದಿರಲು ನಾನು ಬಯಸುತ್ತೇನೆ. ಈ ವಿಶೇಷ ದಿನದಂದು ಶುಭ ಕೋರುವ ಮೊದಲ ವ್ಯಕ್ತಿ ನಾನಾಗಲಿ ಎನ್ನುತ್ತಾ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು












Click it and Unblock the Notifications