ನವದೆಹಲಿ, ಆಗಸ್ಟ್ 15: ಭಾರತಕ್ಕೆ ಸ್ವಾತಂತ್ರ್ಯ ಬಂದು 73 ವರ್ಷ ಕಳೆದಿದೆ. ಈ ಬಾರಿ 74ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುತ್ತಿದೆ.
ಸ್ವಾತಂತ್ರ್ಯ ದಿನಾಚರಣೆ ಈ ಬಾರಿ ಕೊವಿಡ್ 19 ರೋಗದಿಂದಾಗಿ ಕಳೆಗುಂದಿದೆ. ಸಾರ್ವಜನಿಕರು ಗುಂಪು ಸೇರದೇ ಆಚರಣೆ ನಡೆಯುತ್ತಿರುವುದು ಇದೇ ಮೊದಲು. ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತ್ರಿವರ್ಣ ಧ್ವಜ ಹಾರಿಸಲಿದ್ದಾರೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೀಮಿತ ಸಂಖ್ಯೆಯಲ್ಲಿ ಮಾತ್ರ ಜನರನ್ನು ಈ ಕಾರ್ಯಕ್ರಮಕ್ಕೆ ಸೇರಿಸಲಾಗುತ್ತದೆ.
ಪ್ರಧಾನಿ ಧ್ವಜ ಹಾರಿಸಿದ ಬಳಿಕ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ಅದರ ನೇರ ಪ್ರಸಾರದ ವ್ಯವಸ್ಥೆ ಮಾತ್ರ ಇರುತ್ತದೆ. ಹಾಗೆಯೇ, ಮಿಲಿಟರಿ ಬ್ಯಾಂಡ್ಗಳ ಪ್ರದರ್ಶನವನ್ನು ಮುಂಚಿತವಾಗಿಯೇ ಮಾಡಿ ಅದರ ಚಿತ್ರೀಕರಣ ಮಾಡಲಾಗುತ್ತಿದ್ದು, ಆ. 15ರಂದು ಅದರ ಪ್ರಸಾರವಾಗಲಿದೆ.
ಕೆಂಪು ಕೋಟೆಯಲ್ಲಿ ನಡೆಯುವ ಧ್ವಜಾರೋಹಣ ಸಮಾರಂಭದಲ್ಲಿ ಸೇನಾ ಪಡೆಗಳ ಪಥಸಂಚಲನ, ಬ್ಯಾಂಡ್ ವಾದನ ಇತ್ಯಾದಿ ಕಾರ್ಯಕ್ರಮಗಳು ಇರುತ್ತವೆ.
ಈ ವರ್ಷದ ಸ್ವಾತಂತ್ರ್ಯೋತ್ಸವದ ಧ್ಯೇಯವಾಕ್ಯ ಸ್ವಾವಲಂಬಿ ಭಾರತ ಎಂದು ಇರಲಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ವರ್ಷ 9 ಗಂಟೆ ನಂತರ ಕಾರ್ಯಕ್ರಮವಿರುತ್ತದೆ.
ಧ್ವಜಾರೋಹಣ, ಪೊಲೀಸರಿಂದ ಗೌರವ ಸಲ್ಲಿಕೆ, ಮುಖ್ಯಮಂತ್ರಿಗಳ ಭಾಷಣ ಮತ್ತು ನಂತರ ಕೊನೆಯಲ್ಲಿ ರಾಷ್ಟ್ರಗೀತೆಯಿರುತ್ತದೆ. ಸ್ವಾತಂತ್ರ್ಯದಿನದ ಕ್ಷಣಕ್ಷಣದ ಮಾಹಿತಿ ಒನ್ ಇಂಡಿಯಾದಲ್ಲಿ ಲಭ್ಯವಾಗಲಿದೆ.
Aug 15, 2020, 11:05 am IST
ಉತ್ತರ ಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಕ್ನೋದಲ್ಲಿ ಧ್ವಜಾರೋಹಣ ಮಾಡಿದರು.
ಗಡಿಯಲ್ಲಿ 1 ಲಕ್ಷ ಎನ್‌ಸಿಸಿ ಕೆಡೆಟ್‌ಗಳನ್ನು ನಿಯೋಜನೆ ಮಾಡಲಾಗುತ್ತದೆ, ಅದರಲ್ಲಿ ಹೆಣ್ಣುಮಕ್ಕಳಿಗೆ ಹೆಚ್ಚು ಆಧ್ಯತೆ ನೀಡಲಾಗುತ್ತದೆ-ಮೋದಿ
Aug 15, 2020, 8:53 am IST
ಸ್ವಾವಲಂಬಿ ಭಾರತಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 100 ಕ್ಕೂ ಹೆಚ್ಚು ರಕ್ಷಣಾ ವಸ್ತುಗಳ ಆಮದನ್ನು ನಿಲ್ಲಿಸಿದ್ದೇವೆ-ಮೋದಿ
Aug 15, 2020, 8:51 am IST
ಕೊವಿಡ್ 19 ಸಂದರ್ಭದಲ್ಲಿ ಸಹಾಯ ಮಾಡಿದ ನೆರೆಯ ರಾಷ್ಟ್ರಗಳಿಗೆ ಮೋಧಿ ಅಭಿನಂದನೆ ಸಲ್ಲಿಸಿದರು
Aug 15, 2020, 8:46 am IST
ಎಲ್‌ಎಸಿಯಿಂದ ಎಲ್‌ಒಸಿವರೆಗೆ ನಮ್ಮ ರಾಷ್ಟ್ರೀಯ ಭದ್ರತೆಗೆ ತೊಂದರೆ ಮಾಡಲು ಹೊರಟವರಿಗೆ ನಮ್ಮ ಯೋಧರು ಉತ್ತಮ ಉತ್ತರ ನೀಡಿದ್ದಾರೆ.
Aug 15, 2020, 8:44 am IST
ಆತಂಕವಾದವಿರಲಿ, ವಿಸ್ತಾರವಾದವಿರಲಿ ಭಾರತವು ಒಗ್ಗಟ್ಟಿನಿಂದ ಹೋರಾಡುತ್ತಿದೆ-ಮೋದಿ
Aug 15, 2020, 8:42 am IST
ದೇಶದ ಹಲವಾರು ನಗರದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ-ಮೋದಿ
Aug 15, 2020, 8:40 am IST
ಲಡಾಖ್‌ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ, ಲಡಾಖ್ ಜನರ ಬಹು ವರ್ಷಗಳ ಕನಸನ್ನು ನಾವು ನನಸು ಮಾಡಿದ್ದೇವೆ, ಇನ್ನು ಅಭಿವೃದ್ಧಿಯ ಅವಶ್ಯಕತೆ ಇದೆ-ಮೋದಿ
Aug 15, 2020, 8:39 am IST
ಜಮ್ಮು ಕಾಶ್ಮೀರಲ್ಲಿ ಮತ್ತೆ ಚುನಾವಣೆ ನಡೆಯಲಿದೆ, ಜಮ್ಮು ಕಾಶ್ಮೀರಲ್ಲಿ 370ನೇ ವಿಧಿ ನಿಷೇಧಿಸಿ ಒಂದು ವರ್ಷ ಕಳೆದಿದೆ.
Aug 15, 2020, 8:34 am IST
ಭಾರತದಲ್ಲಿ ಮೂರು ಕಂಪನಿಗಳು ಕೊವಿಡ್ ಲಸಿಕೆಯನ್ನು ವಿವಿಧ ಹಂತಗಳಲ್ಲಿ ಪರೀಕ್ಷೆ ನಡೆಸುತ್ತಿವೆ
Aug 15, 2020, 8:32 am IST
ಇವತ್ತಿನಿಂದ ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಆರಂಭಿಸುತ್ತಿದ್ದೇವೆ. ಇದು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಲಿದೆ-ಮೋದಿ
Aug 15, 2020, 8:31 am IST
ಕೊರೊನಾ ಸಂದರ್ಭದಲ್ಲಿ ಒಂದು ಲ್ಯಾಬ್‌ನಿಂದ 1400 ಲ್ಯಾಬ್‌ಗಳ ನಿರ್ಮಾಣ, 300 ಪರೀಕ್ಷೆಗಳಿಂದ 7 ಲಕ್ಷ ಪರೀಕ್ಷೆಗಳು ನಡೆಯುತ್ತಿವೆ- ಮೋದಿ
Aug 15, 2020, 8:30 am IST
ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳನ್ನು ತಮ್ಮ ಸಂಸ್ಕೃತಿಯಲ್ಲಿ ಬೇರೂರುವಂತೆ ಮಾಡುತ್ತದೆ. ಆದರೆ ಅವರನ್ನು ಜಾಗತಿಕ ನಾಗರಿಕರನ್ನಾಗಿ ಮಾಡುತ್ತೆ-ಮೋದಿ
Aug 15, 2020, 8:27 am IST
ಕಳೆದ ತಿಂಗಳು ಭೀಮ್ ಹಾಗೂ ಯುಪಿಐ ಅಡಿ 3 ಲಕ್ಷ ಕೋಟಿ ವ್ಯವಹಾರ ನಡೆದಿದೆ-ಮೋದಿ
Aug 15, 2020, 8:27 am IST
ಪ್ರತಿ ಹಳ್ಳಿ ಹಳ್ಳಿಗೂ ಆಪ್ಟಿಕಲ್ ಫೈಬರ್ ಸಂಪರ್ಕ ನೀಡಲಾಗುತ್ತದೆ-ಮೋದಿ
Aug 15, 2020, 8:21 am IST
ಆಧುನಿಕ ಭಾರತ ನಿರ್ಮಾಣದಲ್ಲಿ ದೇಶದ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ, ರಾಷ್ಟ್ರೀಯ ಶಿಕ್ಷಣ ನೀತಿ ಎಲ್ಲಾ ವಿದ್ಯಾರ್ಥಿಗಳನ್ನು ಒಂದುಗೂಡಿಸುತ್ತದೆ ಒಂದೇ ರೀತಿಯ ಶಿಕ್ಷಣ ಪಡೆಯುತ್ತಾರೆ- ಮೋದಿ
Aug 15, 2020, 8:19 am IST
ಮಧ್ಯಮ ವರ್ಗದವರ ಹಣವನ್ನು ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ಕೋ-ಆಪರೇಟಿವ್ ಬ್ಯಾಂಕ್‌ಗಳನ್ನು ಆರ್‌ಬಿಐ ಜೊತೆ ಜೋಡಣೆ ಮಾಡಲಾಗಿದೆ-ಮೋದಿ
Aug 15, 2020, 8:16 am IST
ಮನೆಗೆ ನೀರು ತಲುಪಿಸುವ ಯೋಜನೆ ಜಲ ಜೀವನ್ ಮಿಷನ್ ನಿಂದ 2 ಕೋಟಿ ಮನೆಗೆ ನೀರು ತಲುಪಿಸುವ ಕಾರ್ಯವನ್ನು ನಾವು ಮಾಡಿದ್ದೇವೆ.-ಮೋದಿ
Aug 15, 2020, 8:12 am IST
ವಿಕಾಸದ ಈ ಯಾತ್ರೆಯಲ್ಲಿ ಸಮಾಜದಲ್ಲಿ ಜನರು ಹಿಂದೆ ಉಳಿದುಬಿಡುತ್ತಿದ್ದಾರೆ, ಬಡತನದಿಂದಾಗಿ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಆತ್ಮ ನಿರ್ಭರ ಭಾರತವನ್ನಾಗಿಸಬೇಕು, ಹಿಂದುಳಿದ 110 ಜಿಲ್ಲೆಗಳನ್ನು ಗುರುತಿಸಿದ್ದು, ಅವುಗಳನ್ನು ಮುನ್ನಡೆಸುವ ಕುರಿತು ಆಲೋಚಿಸಲಾಗಿದೆ-ಮೋದಿ
Aug 15, 2020, 8:07 am IST
ಸಾಮರ್ಥ್ಯ ಮೂಲಂ ಸ್ವಾತಂತ್ರಂ, ಶ್ರಮ ಮೂಲಂಚ ವೈಭವಂ, ಯಾವುದೇ ಸಮಾಜದ ಸ್ವಾತಂತ್ರ್ಯ ಅವರ ಸಾಮರ್ಥ್ಯವಾಗಿರುತ್ತೆ, ಶ್ರಮವೇ ಅವರ ಉತ್ತಮ ಜೀವನಕ್ಕೆ ಕಾರಣವಾಗಿರುತ್ತದೆ-ಮೋದಿ
Aug 15, 2020, 8:02 am IST
ಕೊರೊನಾ, ಭೂಕಂಪ, ಪ್ರವಾಹ ಏನೇ ಬರಲಿ ಜನರು ಆತ್ಮ ವಿಶ್ವಾಸವನ್ನು ಬಿಟ್ಟಿಲ್ಲ, ಗಟ್ಟಿ ಮನಸ್ಸಿನಿಂದ ಮುನ್ನುಗ್ಗಿದ್ದಾರೆ-ಮೋದಿ
Aug 15, 2020, 8:01 am IST
ಮೇಕ್ ಇನ್ ಇಂಡಿಯಾ ಜೊತೆಗೆ ಮೇಕ್ ಫಾರ್ ವರ್ಲ್ಡ್ ಘೋಷವಾಖ್ಯದೊಂದಿಗೆ ಮುನ್ನುಗ್ಗಬೇಕಿದೆ-ಮೋದಿ
Aug 15, 2020, 7:59 am IST
ರಾಷ್ಟ್ರೀಯ ಶಿಕ್ಷಣ ನೀತಿ, ಒಂದು ದೇಶ ಒಂದು ರೇಷನ್ ಕಾರ್ಡ್ ಯಾವುದೇ ಇರಲಿ ಪರಿವರ್ತನೆಯ ಕಾಲಘಟ್ಟವನ್ನು ವಿಶ್ವ ನೋಡುತ್ತಿದೆ- ಮೋದಿ
Aug 15, 2020, 7:58 am IST
ವೋಕಲ್ ಫಾರ್ ಲೋಕಲ್ ಎನ್ನುವುದು ದೇಶದ ಮಂತ್ರವಾಗಿರಬೇಕು-ಮೋದಿ
Aug 15, 2020, 7:57 am IST
ಕೊರೊನಾ ಸಂಕಟದ ಸಮಯದಲ್ಲಿ ಕೆಲವು ವಸ್ತುಗಳ ಅವಶ್ಯಕತೆ ಇತ್ತು, ವಿಶ್ವದಿಂದ ತರಿಸಿಕೊಳ್ಳುವ ಅಗತ್ಯವಿತ್ತು. ಆದರೆ ಸಿಗುತ್ತಿರಲಿಲ್ಲ. ಆದರೆ ಉದ್ಯಮಿಗಳು ಮನಸ್ಸು ಮಾಡಿ ಎನ್ 95 ಮಾಸ್ಕ್ ತಯಾರಿಕೆಯಿಂದ ಹಿಡಿದು ಸಾಕಷ್ಟು ಕೆಲಸವನ್ನು ಮಾಡಿವೆ. ಬೇರೆ ದೇಶಗಳಿಗೆ ರಫ್ತನ್ನು ಕೂಡ ಮಾಡಿದ್ದೇವೆ-ಮೋದಿ
Aug 15, 2020, 7:55 am IST
ಕೇವಲ ಆಮದು ಕಡಿಮೆ ಮಾಡುವುದು ಮಾತ್ರ ಆತ್ಮ ನಿರ್ಭರವಲ್ಲ, ನಮ್ಮ ದೇಶೀಯ ವಸ್ತುಗಳನ್ನು ಮಾರ್ಕೆಟಿಂಗ್ ಮಾಡುವುದು, ಕೌಶಲ್ಯವನ್ನು ಹೆಚ್ಚಿಸುವುದು ಕೂಡ ಪ್ರಮುಖವಾಗಿದೆ-ಮೋದಿ
READ MORE
12:09 AM, 15 Aug
-ಸುಮಾರು 1,500 ಕೊರೋನಾ ವಾರಿಯರ್ಸ್ ಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಕೆಂಪು ಕೋಟೆಯ ಒಳಗೆ ಸುಮಾರು 300 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ದೆಹಲಿ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.
12:10 AM, 15 Aug
ಗೌರವ ಸ್ವೀಕರಿಸಲಿರುವ ಸುಮಾರು 350 ಪೊಲೀಸ್ ಸಿಬ್ಬಂದಿಯನ್ನು ಕೋವಿಡ್-19 ಆರೋಗ್ಯ ಸುರಕ್ಷತೆ ಹಿನ್ನೆಲೆಯಲ್ಲಿ ದೆಹಲಿ ಕಂಟೋನ್ಮೆಂಟ್ ನ ಪೊಲೀಸ್ ಕಾಲೊನಿಯಲ್ಲಿ ಐಸೊಲೇಷನ್ ನಲ್ಲಿರಿಸಲಾಗಿದೆ. ಲೋಹದ ಪತ್ತೆ ಹತ್ತಿರ ನಿಲ್ಲುವ ಸೈನಿಕರು ಪಿಪಿಇ ಕಿಟ್ ಗಳನ್ನು ಧರಿಸಿರುತ್ತಾರೆ. ಹ್ಯಾಂಡ್ ಸ್ಯಾನಿಟೈಸರ್ ನ್ನು ಇರಿಸಲಾಗುತ್ತದೆ. ಎರಡು ಗಜ ಅಂತರದಲ್ಲಿ ಕುಳಿತುಕೊಳ್ಳಲು ಆಸನ ವ್ಯವಸ್ಥೆಯಿರುತ್ತದೆ.
12:11 AM, 15 Aug
ಕಾರ್ಯಕ್ರಮದಲ್ಲಿ ಭಾಗವಹಿಸುವವರೆಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕಾಗುತ್ತದೆ. ಮೊಬೈಲ್ ನಲ್ಲಿ ಆರೋಗ್ಯ ಸೇತು ಆಪ್ ನ ಸ್ಥಿತಿಗತಿ ನೋಡಿಕೊಂಡು ರೆಡ್ ಫೋರ್ಟ್ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.
6:57 AM, 15 Aug
ಕೆಲವೇ ನಿಮಿಷಗಳಲ್ಲಿ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
6:59 AM, 15 Aug
ಯುಸ್ ಕಾರ್ಯದರ್ಶಿ ಮೈಕ್ ಪಾಂಪಿಯೋ 74ನೇ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿದ್ದಾರೆ.
7:01 AM, 15 Aug
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಕೂಡ ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ತಿಳಿಸಿದ್ದಾರೆ
ಬನ್ನಿ ನರೇಂದ್ರ ಸ್ವಾತಂತ್ರ್ಯ ದಿನಾಚರಣೆ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಆತ್ಮ ನಿರ್ಭರ ಕನಸನ್ನೂ ನನಸು ಮಾಡೋಣ, ಸ್ವದೇಶಿ ವಸ್ತುಗಳನ್ನು ಅಧಿಕ, ಅಧಿಕವಾಗಿ ಬಳಕೆ ಮಾಡೋಣ-ಅಮಿತ್ ಶಾ
7:07 AM, 15 Aug
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ನಿವಾಸದಲ್ಲಿ ಧ್ವಜಾರೋಹಣ ನೆರವೇರಿಸಿದರು.
Delhi: Defence Minister Rajnath Singh unfurls the national flag at his residence. He says, "We will get freedom in its true meaning when India becomes self-reliant. So today we need to take a pledge to make India self-reliant." #IndependenceDay2020pic.twitter.com/TbpNhA3kYu
ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಸಲ್ಲಿಸಿದ ತಿಯೊಬ್ಬರಿಗೂ ನಮನ ಸಲ್ಲಿಸುವ ಸಂದರ್ಭ ಇದು.
7:38 AM, 15 Aug
ಇಂದು ಕೊರೊನಾದಿಂದಾಗಿ ಮಕ್ಕಳು ನಮ್ಮ ಕಣ್ಣೆದುರು ಕಾಣುತ್ತಿಲ್ಲ. ಆದರೆ ಯಾವುದಕ್ಕೂ ಭಯ ಪಡುವ ಅಗತ್ಯವಿಲ್ಲ ಆದಷ್ಟು ಬೇಗ ಎಲ್ಲವೂ ಸರಿ ಹೋಗಲಿದೆ-ಮೋದಿ
7:40 AM, 15 Aug
ವೈದ್ಯರು, ನರ್ಸ್ ಸೇರಿದಂತೆ ಕೊರೊನಾ ವಾರಿಯರ್ಸ್ಗೆ ನಮನ ಸಲ್ಲಿಸುವ ಸಮಯ ಇದು, ದೇಶವನ್ನು ಆರೋಗ್ಯವಾಗಿಡಲು ಸಾಕಷ್ಟು ಮಂದಿ ಪ್ರಾಣವನ್ನು ತೆತ್ತಿದ್ದಾರೆ. ಅವರಿ ಅಭಿನಂದನೆ ಸಲ್ಲಿಸಲೇಬೇಕು-ಮೋದಿ
7:41 AM, 15 Aug
ಸಂಕಲ್ಪ ಮಾಡುವ ಅಗತ್ಯವಿದೆ,ಮುಂದಿನ ವರ್ಷ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡುತ್ತೇವೆ, ಮುಂದಿನ ಎರಡು ವರ್ಷಗಳಿಗೆ ದೊಡ್ಡ ಸಂಕಲ್ಪ ಮಾಡಿ ಮುನ್ನಡೆಯಬೇಕಿದೆ. ಹೊಸ ಪರ್ವದ ರೀತಿಯಲ್ಲಿ ಆಚರಣೆ ಮಾಡೋಣ. ನಮ್ಮ ಪೂರ್ವಜರು ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ-ಮೋದಿ
7:43 AM, 15 Aug
ಭಾರತದ ಪರಂಪರೆ, ಸಂಸ್ಕೃತಿಯನ್ನು ಹಾಳು ಮಾಡಲು ಸಾಕಷ್ಟು ಮಂದಿ ಕೆಲಸ ಮಾಡಿದ್ದರು. ಆದರೂ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಗೆದ್ದಿದೆ- ಮೋದಿ
7:44 AM, 15 Aug
130 ಕೋಟಿ ಜನರು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಾರೆ ಎನ್ನುವ ನಂಬಿಕೆ ಇದೆ-ಮೋದಿ
7:47 AM, 15 Aug
ಆತ್ಮ ನಿರ್ಭರ ಭಾರತ ಒಂದು ಕನಸು ಸಂಕಲ್ಪವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ, 130 ಕೋಟಿ ಜನರಿಗೆ ಮಂತ್ರವಾಗಿದೆ-ಮೋದಿ
7:49 AM, 15 Aug
ಭಾರತವನ್ನು ತನ್ನ ಕಾಲ ಮೇಲೆ ತಾನು ನಿಲ್ಲುವಂತೆ ಮಾಡಬೇಕಿದೆ, ಈ ಕನಸನ್ನು ಭಾರತ ಚರಿತ್ರೆಯನ್ನಾಗಿ ಮಾಡುವ ನಂಬಿಕೆ, ದೇಶದ ಪ್ರತಿಭೆಯ ಬಗ್ಗೆ ಗರ್ವವಿದೆ. ಯುವಕರ ಮೇಲೆ ನಂಬಿಕೆ ಇದೆ-ಮೋದಿ
7:50 AM, 15 Aug
ಭಾರತ ಸಂಸ್ಕಾರದಿಂದ ತುಂಬಿದೆ, ವಿಶ್ವ ಒಂದು ಪರಿವಾರ, ಆರ್ಥಿಕ ವಿಕಾಸವಾಗಲಿ, ಮಾನವ ಹಾಗೂ ಮಾನವೀಯತೆಗೆ ವಿಶೇಷ ಸ್ಥಾನವಿರಬೇಕು- ಮೋದಿ
7:52 AM, 15 Aug
ವಿಶ್ವ ಕಲ್ಯಾಣದಲ್ಲಿ ಭಾರತದ ಕರ್ತವ್ಯವಿದೆ. ಭಾರತ ಸಶಕ್ತವಾಗಬೇಕಿದೆ, ಆತ್ಮ ನಿರ್ಭರವಾಗಬೇಕಿದೆ. ನಮಗೆ ನಮ್ಮ ಖುದ್ದಾದ ಸಾಮರ್ಥ್ಯವಿದ್ದರೆ ಇಡೀ ವಿಶ್ವದ ಅಭಿವೃದ್ಧಿಯಾಗಲಿದೆ. ಮಾನವ ಸಂಪದದಲ್ಲಿ ಮೌಲ್ಯವೃದ್ಧಿ ಮಾಡೋಣ.. ಕಚ್ಚಾ ವಸ್ತುಗಳನ್ನು ವಿದೇಶಕ್ಕೆ ಕಳುಹಿಸುವುದು, ರೆಡಿ ವಸ್ತುಗಳನ್ನು ಆಮದು ಮಾಡಿಕೊಳ್ಳುವುದು ಎಷ್ಟು ದಿನ ನಡೆಯುತ್ತದೆ. ಆತ್ಮ ನಿರ್ಭರವಾಗಲೇಬೇಕು-ಮೋದಿ
7:54 AM, 15 Aug
ಕೃಷಿ ಕ್ಷೇತ್ರದಲ್ಲಿ ಆತ್ಮ ನಿರ್ಭರ ಮಾಡಿದ್ದಾರೆ, ಬೇರೆ ದೇಶಗಳಿಗೂ ಊಟ ನೀಡಲು ನಮ್ಮ ರೈತರು ತಯಾರಿದ್ದಾರೆ. ಕೃಷಿ ಜಗತ್ತನ್ನು ಮುನ್ನುಗ್ಗಿಸುವ ಅವಶ್ಯಕತೆ ಇದೆ. ಕೃಷಿ ಕ್ಷೇತ್ರವನ್ನು ಕಾನೂನಿನಿಂದ ಮುಕ್ತಗೊಳಿಸಿದ್ದೇವೆ- ಮೋದಿ
7:55 AM, 15 Aug
ಕೇವಲ ಆಮದು ಕಡಿಮೆ ಮಾಡುವುದು ಮಾತ್ರ ಆತ್ಮ ನಿರ್ಭರವಲ್ಲ, ನಮ್ಮ ದೇಶೀಯ ವಸ್ತುಗಳನ್ನು ಮಾರ್ಕೆಟಿಂಗ್ ಮಾಡುವುದು, ಕೌಶಲ್ಯವನ್ನು ಹೆಚ್ಚಿಸುವುದು ಕೂಡ ಪ್ರಮುಖವಾಗಿದೆ-ಮೋದಿ
7:57 AM, 15 Aug
ಕೊರೊನಾ ಸಂಕಟದ ಸಮಯದಲ್ಲಿ ಕೆಲವು ವಸ್ತುಗಳ ಅವಶ್ಯಕತೆ ಇತ್ತು, ವಿಶ್ವದಿಂದ ತರಿಸಿಕೊಳ್ಳುವ ಅಗತ್ಯವಿತ್ತು. ಆದರೆ ಸಿಗುತ್ತಿರಲಿಲ್ಲ. ಆದರೆ ಉದ್ಯಮಿಗಳು ಮನಸ್ಸು ಮಾಡಿ ಎನ್ 95 ಮಾಸ್ಕ್ ತಯಾರಿಕೆಯಿಂದ ಹಿಡಿದು ಸಾಕಷ್ಟು ಕೆಲಸವನ್ನು ಮಾಡಿವೆ. ಬೇರೆ ದೇಶಗಳಿಗೆ ರಫ್ತನ್ನು ಕೂಡ ಮಾಡಿದ್ದೇವೆ-ಮೋದಿ
7:58 AM, 15 Aug
ವೋಕಲ್ ಫಾರ್ ಲೋಕಲ್ ಎನ್ನುವುದು ದೇಶದ ಮಂತ್ರವಾಗಿರಬೇಕು-ಮೋದಿ
7:59 AM, 15 Aug
ರಾಷ್ಟ್ರೀಯ ಶಿಕ್ಷಣ ನೀತಿ, ಒಂದು ದೇಶ ಒಂದು ರೇಷನ್ ಕಾರ್ಡ್ ಯಾವುದೇ ಇರಲಿ ಪರಿವರ್ತನೆಯ ಕಾಲಘಟ್ಟವನ್ನು ವಿಶ್ವ ನೋಡುತ್ತಿದೆ- ಮೋದಿ
8:01 AM, 15 Aug
ಮೇಕ್ ಇನ್ ಇಂಡಿಯಾ ಜೊತೆಗೆ ಮೇಕ್ ಫಾರ್ ವರ್ಲ್ಡ್ ಘೋಷವಾಖ್ಯದೊಂದಿಗೆ ಮುನ್ನುಗ್ಗಬೇಕಿದೆ-ಮೋದಿ