ದೆಹಲಿ, ಉತ್ತರ ಪ್ರದೇಶ ಅಧಿಕಾರಿಗಳ ಮನೆ ಮೇಲೆ ಐಟಿ ದಾಳಿ
ಕೆಲ ಪ್ರಭಾವಿ ಅಧಿಕಾರಿಗಳ ವಿರುದ್ಧ ಲಂಚ ಹಾಗೂ ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಹಲವಾರು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ದೆಹಲಿ, ಮೀರತ್, ಬಾಘ್ ಪತ್, ನೊಯ್ಡಾ, ಗಾಜಿಯಾಬಾದ್ ಗಳ ಸುಮಾರು 15 ಕಡೆ ಈ ದಾಳಿ ನಡೆಸಲಾಗಿದೆ.
ನವದೆಹಲಿ, ಮೇ 24: ದೆಹಲಿ ಹಾಗೂ ಉತ್ತರ ಪ್ರದೇಶ ಸರ್ಕಾರದ ಹಿರಿಯ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಬುಧವಾರ ಬೆಳಗ್ಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೆಲ ಪ್ರಭಾವಿ ಅಧಿಕಾರಿಗಳ ವಿರುದ್ಧ ಲಂಚ ಹಾಗೂ ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಹಲವಾರು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ದೆಹಲಿ, ಮೀರತ್, ಬಾಘ್ ಪತ್, ನೊಯ್ಡಾ, ಗಾಜಿಯಾಬಾದ್ ಗಳ ಸುಮಾರು 15 ಕಡೆ ಈ ದಾಳಿ ನಡೆಸಲಾಗಿದೆ.

ಗಾಜಿಯಾಬಾದ್ ನ ಮಾಜಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ನೊಯ್ಡಾ ಸ್ಥಳೀಯ ಆಡಳಿತದ ಕಾರ್ಯ ನಿರ್ವಾಹಕ ಅಧಿಕಾರಿ ವಿಮಲ್ ಶರ್ಮಾ, ಮೀರತ್ ನ ಆರ್ ಟಿಒ ಅಧಿಕಾರಿ ಮಮತಾ ಶರ್ಮಾ, ಭಾಗ್ ಪತ್ ನ ಮಾಜಿ ನ್ಯಾಯಾಧೀಶ ಹರಿನಾಥ್ ತಿವಾರಿ ಅವರು ಸೇರಿದಂತೆ ಇನ್ನೂ ಅನೇಕ ಅಧಿಕಾರಿಗಳ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Click it and Unblock the Notifications