ಆಶೀರ್ವಾದ ಪಡೆಯಲು ಹಾವಿನ ಹೆಡೆಯ ಮೇಲೆ ಕಂದಮ್ಮ: ಮುಂದೇನಾಯ್ತು?
ರಾಯಪುರ, ಅ 17: ಜೀವಂತ ನಾಗರಹಾವಿನ ಆಶೀರ್ವಾದ ಪಡೆಯಲು ಹೋದ ದಂಪತಿಗಳ ಮೂರ್ಖತನದಿಂದ, ಐದು ತಿಂಗಳ ಕಂದಮ್ಮ ಸಾವನ್ನಪ್ಪಿದ ಘಟನೆ, ಛತ್ತೀಸಗಢದ ರಾಜಧಾನಿ ರಾಯಪುರ ಬಳಿಯ ಹಳ್ಳಿಯಿಂದ ವರದಿಯಾಗಿದೆ.
ರಾಯಪುರದಿಂದ 72ಕಿ.ಮೀ ದೂರದ ರಜ್ನಾನಂದಗಾವ್ ಎನ್ನುವ ಹಳ್ಳಿಯ ದಂಪತಿಗಳು, ಹಾವಾಡಿಗನೊಬ್ಬನ ಮಾತನ್ನು ನಂಬಿ ತಮ್ಮ ಮಗುವನ್ನು ಕಳೆದುಕೊಂಡಿದ್ದಾರೆ. ಮಗುವಿಗೆ ಪದೇಪದೇ ಆರೋಗ್ಯದ ಸಮಸ್ಯೆ ಎದುರಾಗುತ್ತಿದ್ದರಿಂದ, ಬಿಲ್ಲುರಾಮ್ ಎನ್ನುವ ಹಾವಾಡಿಗನ ಬಳಿಗೆ ದಂಪತಿಗಳು ಬಂದಿದ್ದಾರೆ.
ನಾಗಪೂಜೆಯನ್ನು ಮಾಡಿದರೆ ನಿಮ್ಮ ಮಗುವಿನ ಆರೋಗ್ಯದ ಸಮಸ್ಯೆ ಪರಿಹಾರವಾಗುತ್ತದೆ ಎಂದು ಹಾವಾಡಿಗ ಹೇಳಿದ ನಂತರ, ನಾಗಪೂಜೆಯನ್ನು ದಂಪತಿಗಳು ನೆರವೇರಿಸಿದ್ದಾರೆ. ನಂತರ, ಜೀವಂತ ನಾಗರಹಾವಿನ ಆಶೀರ್ವಾದ ಪಡೆಯಲು ಸೂಚಿಸಿದ್ದಾನೆ.

ತನ್ನ ಬಳಿಯಿರುವ ನಾಗರಹಾವಿನ ಹೆಡೆಯ ಮೇಲೆ, ಮಗುವಿನ ತಲೆಯನ್ನು ಇಟ್ಟು ಆಶೀರ್ವಾದ ಪಡೆದುಕೊಳ್ಳಿ ಎನ್ನುವ ಹಾವಾಡಿಗನ ಸೂಚನೆಯಂತೆ ದಂಪತಿಗಳು ನಡೆದುಕೊಂಡಿದ್ದಾರೆ. ಆದರೆ, ನಾಗಪ್ಪ ಮಗುವನ್ನು ಕಚ್ಚಿ ಬಿಟ್ಟಿದೆ.
ಇದರಿಂದ ಗಾಭರಿಗೊಳಗಾದ ದಂಪತಿಗಳಿಗೆ ಇದೊಂದು ಹಲ್ಲುಕಿತ್ತ ನಾಗರಹಾವು ಎಂದು ದಂಪತಿಗಳನ್ನು ಹಾವಾಡಿಗ ಸಾಗಹಾಕಿದ್ದಾನೆ. ಆದರೆ, ಇದಾದ ಒಂದು ಗಂಟೆಯಲ್ಲಿ ಮಗುವಿಗೆ ಉಸಿರಾಟದ ತೊಂದರೆ ಉಂಟಾಗಿದೆ.
ಕೂಡಲೇ, ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ದಂಪತಿಗಳು ಹೋಗುವಷ್ಟರಲ್ಲಿ ಮಗುವಿನ ದೇಹಕ್ಕೆ ವಿಷ ಸಂಪೂರ್ಣವಾಗಿ ಆವರಿಸಿ, ಮಗು ಸಾವನ್ನಪ್ಪಿದೆ. ಪೊಲೀಸರು, ಹಾವಾಡಿಗನನ್ನು ಬಂಧಿಸಿದ್ದಾರೆ. ಆದರೆ, ಮೂಢನಂಬಿಕೆಯಿಂದ ಮಗು ಕಳೆದುಕೊಂಡ ದಂಪತಿಗಳಿಗೆ, ತಮ್ಮ ಮಗು ವಾಪಸ್ ಬರುತ್ತಾ...
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications