ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇತರೆ ದೇಶಗಳಂತೆ ಭಾರತದಲ್ಲೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ: ಶಿವನ್

|
Google Oneindia Kannada News

ಬೆಂಗಳೂರು, ಜೂನ್ 25: ಬೇರೆ ದೇಶಗಳಂತೆ ಭಾರತದಲ್ಲೂ ಕೂಡ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ನೀಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಕೆ. ಶಿವನ್ ಹೇಳಿದ್ದಾರೆ.

Recommended Video

SSLC Exam : ತಮಿಳುನಾಡು, ಆಂಧ್ರದಲ್ಲಿಲ್ಲ, ಕರ್ನಾಟಕದಲ್ಲೇಕೆ SSLC ಪರೀಕ್ಷೆ?| Oneindia Kannada

ರಾಕೆಟ್ ಮತ್ತು ಉಪಗ್ರಹ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ. ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ತರಲು ಹೊರಟಿರುವ ಸುಧಾರಣಾ ನೀತಿಗಳ ಕುರಿತು ಮಾಹಿತಿ ನೀಡಿದರು. ಪ್ರಮುಖವಾಗಿ ಬಾಹ್ಯಾಕಾಶ ಕ್ಷೇತ್ರ ಖಾಸಗೀಕರಣದ ಬಗ್ಗೆ ಕೆ ಶಿವನ್ ಮಾಹಿತಿ ನೀಡಿದರು.

ಗಗನಯಾನ, ಚಂದ್ರಯಾನ ಸೇರಿ 10 ಬಾಹ್ಯಾಕಾಶ ಯೋಜನೆಗಳಿಗೆ ತಡೆ:ಶಿವನ್ಗಗನಯಾನ, ಚಂದ್ರಯಾನ ಸೇರಿ 10 ಬಾಹ್ಯಾಕಾಶ ಯೋಜನೆಗಳಿಗೆ ತಡೆ:ಶಿವನ್

ಖಾಸಗಿ ಚಟುವಟಿಕೆಗಳು ಸ್ವಾಯತ್ತವಾಗಿ ಕಾರ್ಯ ನಿರ್ವಹಿಸುತ್ತವೆ. ಈ ಸಂಸ್ಥೆಗಳಿಗೆ ಇಸ್ರೊ ನೋಡಲ್‌ ಏಜೆನ್ಸಿಯಾಗಿರುತ್ತದೆ. ಇದಕ್ಕಾಗಿಯೇ 'ಇನ್‌ಸ್ಪೇಸ್‌' ಎಂಬ ಪ್ರತ್ಯೇಕ ಸಂಸ್ಥೆ ಹುಟ್ಟು ಹಾಕುತ್ತೇವೆ. ಇದರಲ್ಲಿ ಖಾಸಗಿ ಉದ್ಯಮಗಳ ಪ್ರತಿನಿಧಿಗಳು, ಇಸ್ರೊ ಮತ್ತು ಸರ್ಕಾರದ ಪ್ರತಿನಿಧಿಗಳೂ ಇರುತ್ತಾರೆ. ಇನ್‌ಸ್ಪೇಸ್‌ ಸ್ವತಂತ್ರ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ.

ಇನ್‌ಸ್ಪೇಸ್ 6 ತಿಂಗಳಲ್ಲಿ ಸ್ಥಾಪನೆ ಆಗಲಿದೆ

ಇನ್‌ಸ್ಪೇಸ್ 6 ತಿಂಗಳಲ್ಲಿ ಸ್ಥಾಪನೆ ಆಗಲಿದೆ

ಬಾಹ್ಯಾಕಾಶ ಚಟುವಟಿಕೆಗಳಲ್ಲಿ ತೊಡಗುವ ಸಂಸ್ಥೆಗಳಿಗೆ ಅಗತ್ಯ ಜ್ಞಾನವನ್ನು ನೀಡಲಿದೆ. ‘ಇನ್‌ಸ್ಪೇಸ್‌' ಇನ್ನು 6 ತಿಂಗಳಲ್ಲಿ ಸ್ಥಾಪನೆ ಆಗಲಿದೆ. ಆದರೆ, ಸಾಕಷ್ಟು ಖಾಸಗಿ ಸಂಸ್ಥೆಗಳು ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಒಪ್ಪಿಗೆ ನೀಡುವ ಪ್ರಕ್ರಿಯೆ ಸದ್ಯದಲ್ಲೇ ಚಾಲನೆ ನೀಡುತ್ತೇವೆ.

ಅಂತರ್ ಗ್ರಹಯಾನದ ಬಗ್ಗೆ ಹೆಚ್ಚಿನ ಒತ್ತು

ಅಂತರ್ ಗ್ರಹಯಾನದ ಬಗ್ಗೆ ಹೆಚ್ಚಿನ ಒತ್ತು

ಇಸ್ರೊ ಬಾಹಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಂತ ಮುಂದುವರಿದ ಸಂಶೋಧನೆಗಳು ಮತ್ತು ಅಂತರ್ ಗ್ರಹಯಾನಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಿದೆ. ಜಾಗತಿಕ ಬಾಹ್ಯಾಕಾಶ ಕ್ಷೇತ್ರದ ಪವರ್‌ ಹೌಸ್ ಆಗಿ ಭಾರತ ರೂಪುಗೊಳ್ಳಲಿದೆ ಎಂದು ಶಿವನ್ ವಿವರಿಸಿದರು.

2020ರಲ್ಲಿ ಮತ್ತಷ್ಟು ಸಾಧನೆ ಮಾಡಲಿದೆ ಇಸ್ರೋ: ಒಂದಲ್ಲಾ ಎರಡಲ್ಲಾ, 25 ಯೋಜನೆಗಳು!2020ರಲ್ಲಿ ಮತ್ತಷ್ಟು ಸಾಧನೆ ಮಾಡಲಿದೆ ಇಸ್ರೋ: ಒಂದಲ್ಲಾ ಎರಡಲ್ಲಾ, 25 ಯೋಜನೆಗಳು!

ಬಾಹ್ಯಾಕಾಶ ವಿಜ್ಞಾನದ ಮೂಲದ ಆದಾಯ ಹೆಚ್ಚಳ

ಬಾಹ್ಯಾಕಾಶ ವಿಜ್ಞಾನದ ಮೂಲದ ಆದಾಯ ಹೆಚ್ಚಳ

'ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಶಕ್ತಿಯಾಗಿ ಹೊರ ಹೊಮ್ಮಲು ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಚಟುವಟಿಕೆಗಳನ್ನು ನಡೆಸುವುದರಿಂದ ಬಾಹ್ಯಾಕಾಶ ವಿಜ್ಞಾನ ಮೂಲದ ಆದಾಯ ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ಸಾಧ್ಯವಾಗಲಿದೆ. ಖಾಸಗಿಯವರು ಇಲ್ಲಿಯವರೆಗೆ ಇಸ್ರೋಗೆ ಬಿಡಿ ಭಾಗಗಳನ್ನು ತಯಾರಿಸುವುದಷ್ಟಕ್ಕೇ ಸೀಮಿತವಾಗಿದ್ದರು. ಇನ್ನು ಮುಂದೆ ಬಾಹ್ಯಾಕಾಶ ಸಂಸ್ಥೆಗೆ ಸಮಾನವಾಗಿ ಬೆಳೆಯುವುದಕ್ಕೆ ಅವಕಾಶ ನೀಡುವ ಮಹತ್ವದ ಸುಧಾರಣಾ ಕ್ರಮ ಇದಾಗಿದೆ. ಇದರಿಂದ ದೇಶದಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ದಿಯ ಹೊಸ ಯುಗವೇ ಸೃಷ್ಟಿಯಾಗಲಿದೆ ಎಂದು ಕೆ ಶಿವನ್ ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ವಲಯದ ಸೇವೆಗಳೇನು?

ಖಾಸಗಿ ವಲಯದ ಸೇವೆಗಳೇನು?

ರಾಕೆಟ್‌ ನಿರ್ಮಾಣ, ರಾಕೆಟ್‌ ಉಡ್ಡಯನ, ಉಪಗ್ರಹ ಮತ್ತು ಅದರ ಪೇಲೋಡ್‌ ನಿರ್ಮಾಣದಿಂದ ಮೊದಲ್ಗೊಂಡು ಹಲವು ಚಟುವಟಿಕೆಗಳು ಮತ್ತು ಸೇವೆಗಳನ್ನು ಖಾಸಗಿ ವಲಯ ನೀಡಬಹುದು. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲೂ ತೊಡಗಿಕೊಳ್ಳಬಹುದು ಎಂಬುದು ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

English summary
Isro Chief K Sivan Said that Space sector,where India is among handful of countries with advanced space technology,can play significant role in boosting industrial base of India.Govt's decided to implement reformed measures to leverage ISRO's achievement by opening space sector for pvt enterprises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X